Rakshit Shetty: ‘ಕಿರಿಕ್ ಪಾರ್ಟಿ 2’ ಸಿನಿಮಾ ಯಾವಾಗ ಸೆಟ್ಟೇರಲಿದೆ ಗೊತ್ತಾ..?
ಅಭಿಮಾನಿಗಳಿಗೆ ಒಂದರ ಮೇಲೊಂದರಂತೆ ಸಿಹಿಸುದ್ದಿ ನೀಡುತ್ತಿರುವ ರಕ್ಷಿತ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ.
ಬೆಂಗಳೂರು: ಕಿರಿಕ್ ಪಾರ್ಟಿ… ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಿದ ಸಿನಿಮಾ. ಬಾಕ್ಸಾಫೀಸ್ ಧೂಳಿಪಟ ಮಾಡಿದ್ದ ಈ ಸಿನಿಮಾ ಮೂಲಕ ಅನೇಕ ಹೊಸ ಪ್ರತಿಭೆಗಳು ಬೆಳಕಿಗೆ ಬಂದಿದ್ದವು. ಈ ಸಿನಿಮಾ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ(Rakshit Shetty) ಸಿನಿ ಕರಿಯರ್ ಅನ್ನೇ ಬದಲಿಸಿತ್ತು. ಇದರ ಸೀಕ್ವೆಲ್ ಹಾಗೂ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ರಕ್ಷಿತ್ ಶೆಟ್ಟಿ ಮಹತ್ವದ ಮಾಹಿತಿ ನೀಡಿದ್ದಾರೆ.
ತಮ್ಮ ಅಭಿಮಾನಿಗಳಿಗೆ ಒಂದರ ಮೇಲೊಂದರಂತೆ ಸಿಹಿಸುದ್ದಿ ನೀಡುತ್ತಿರುವ ರಕ್ಷಿತ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. 2019ರಲ್ಲಿ ‘ಅವನೇ ಶ್ರೀಮನ್ನಾರಾಯಣ’(Avane Srimannarayana) ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ 2 ವರ್ಷಗಳ ಕಾಲ ಗ್ಯಾಪ್ ತೆಗೆದುಕೊಂಡಿದ್ದರು. ಸದ್ಯ ಸಿಂಪಲ್ ಸ್ಟಾರ್ ‘777 ಚಾರ್ಲಿ’ ಸಿನಿಮಾ ರಿಲೀಸ್ ಮಾಡುವ ನಿಟ್ಟಿನಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೆ ‘ಸಪ್ತಸಾಗರದಾಚೆ ಎಲ್ಲೋ’ ಹಾಗೂ ಟೀಸರ್ ಮೂಲಕ ಭರ್ಜರಿ ಸದ್ದು ಮಾಡುತ್ತಿರುವ ‘ರಿಚರ್ಟ್ ಆಂಟನಿ’ ಸಿನಿಮಾಗಳಲ್ಲಿಯೂ ತೋಡಗಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ರಕ್ಷಿತ್ ಶೆಟ್ಟಿ ಸಿಹಿಸುದ್ದಿಗಳನ್ನು ನೀಡುತ್ತಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಳ, ನಟ ಸುನಿಲ್ ಶೆಟ್ಟಿ ಮನೆಗೆ ಬಿಎಂಸಿ ಬೀಗ ಮುದ್ರೆ
‘ಕಿರಿಕ್ ಪಾರ್ಟಿ 2’(Kirik Party 2)ಸಿನಿಮಾದ ಬಗ್ಗೆ ಮಹತ್ವದ ಮಾಹಿತಿ ಹೊರಹಾಕಿದ್ದಾರೆ. ತಮ್ಮ ಸ್ನೇಹಿತ, ನಟ ರಿಷಬ್ ಶೆಟ್ಟಿ ಜೊತೆಗೆ ಅವರು ‘ಕಿರಿಕ್ ಪಾರ್ಟಿ 2’ಗಾಗಿ ಮತ್ತೆ ಒಂದಾಗಲಿದ್ದಾರೆ. ನಮ್ಮ ತಂಡ 'ಕಿರಿಕ್ ಪಾರ್ಟಿ' ಸೀಕ್ವೆಲ್ ಕಥೆ ಮೇಲೆ ಕೆಲಸ ಮಾಡುತ್ತಿದೆ, 'ಉಳಿದವರು ಕಂಡಂತೆ' ಚಿತ್ರದ 2ನೇ ಅಧ್ಯಾಯವಾಗಿರುವ ‘ರಿಚರ್ಡ್ ಆಂಟನಿ’(Richard Anthony) ಸಿನಿಮಾದ ಕೆಲಸ ಮುಗಿದ ಬಳಿಕಿ ಇದು ಸೆಟ್ಟೆರಲಿದೆ ಎಂದು ಹೇಳಿದ್ದಾರೆ. 'ಕಿರಿಕ್ ಪಾರ್ಟಿ 2' ಬಳಿಕ 'ಪುಣ್ಯಕೋಟಿ'ಯೂ ಸೆಟ್ಟೆರಲಿದೆ ಅಂತಾ ಮಾಹಿತಿ ನೀಡಿದ್ದಾರೆ. ಸಾಲು ಸಾಲು ಸಿನಿಮಾಗಳ ಮೂಲಕ ರಕ್ಷಿತ್ ಶೆಟ್ಟಿ ಅಭಿಮಾನಿಗಳನ್ನು ಮನರಂಜಿಸಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: Rajinikanth: ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆಗಳಿಲ್ಲ ಎಂದ ನಟ ರಜನಿಕಾಂತ್
ಕೊರೊನಾ ಸಾಂಕ್ರಾಮಿಕ(Corona Pandemic)ದ ಸಮಯದಲ್ಲಿ ರಕ್ಷಿತ್ ಶೆಟ್ಟಿ ‘ರಿಚರ್ಡ್ ಆಂಟನಿ, ‘ಮೋಕ್ಷ’ ಮತ್ತು ‘ಪುಣ್ಯಕೋಟಿ’ ಸಿನಿಮಾಗಳಿಗೆ ಕಥೆ ಬರೆದಿದ್ದಾರಂತೆ. ನಾನು ಕಥೆಗಳ ಬಗ್ಗೆ ಹೊಸ ಬರಹಗಾರರೊಂದಿಗೆ ಚರ್ಚಸಿದ್ದೇನೆ. ನನ್ನ ನಿರ್ದೇಶನದ ಹೊಸ ಸಿನಿಮಾಗಳ ಬಗ್ಗೆ ಶೀಘ್ರವೇ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ