ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಿರುವ ನಟ ರಜನಿಕಾಂತ್ ಸೋಮವಾರ ತಮ್ಮ ರಜಿನಿ ಮಕ್ಕಳ್ ಮಂಡ್ರಂ (Rajini Makkal Mandram) ಅನ್ನು ವಿಸರ್ಜಿಸಲಾಗಿದೆ ಎಂದು ಹೇಳುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.
"I have decided to dissolve Rajini Makkal Mandram. The office-bearers of the Rajinikanth Makkal Mandram would continue to be part of the Rajinikanth Fan Club Association that will involve itself in public service," says Rajinikanth
— ANI (@ANI) July 12, 2021
ರಜಿನಿ ಮಕ್ಕಳ್ ಮಂಡ್ರಂ-ಆರ್‌ಎಂಎಂ ವಿಸರ್ಜಿಸುವ ನಿರ್ಧಾರವನ್ನು ಪ್ರಕಟಿಸಿದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ರಜಿನಿ ಮಕ್ಕಳ್ ಮಂಡ್ರಂ ಅನ್ನು ಅಭಿಮಾನಿಗಳ ಕಲ್ಯಾಣ ಸಂಘವಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.
"I don't have plans to enter politics in future," says actor Rajinikanth, dissolves Rajini Makkal Mandram pic.twitter.com/updoKb5HnY
— ANI (@ANI) July 12, 2021
ಇದನ್ನೂ ಓದಿ- Wheelchair stunt: ವ್ಹೀಲ್ ಚೇರ್ ಸ್ಟಂಟ್ ಮಾಡಲು ಹೋಗಿ ನಟನ ಯಡವಟ್ಟು!
ಪ್ರಸ್ತುತ ಪರಿಸ್ಥಿತಿಯಿಂದಾಗಿ ನಾವು ನಿರೀಕ್ಷಿಸಿದಂತೆ ಏನೂ ಆಗಲಿಲ್ಲ. ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆಯೂ ನನಗಿಲ್ಲ ಎಂದು ನಟ ರಜನಿಕಾಂತ್ ಸ್ಪಷ್ಟಪಡಿಸಿದರು. ವಾಸ್ತವವಾಗಿ ಸೋಮವಾರ ರಜಿನಿ ಮಕ್ಕಳ್ ಮಂಡ್ರಂ (Rajini Makkal Mandram) ಕಾರ್ಯಕರ್ತರನ್ನು ಭೇಟಿಯಾದ ನಂತರ ರಜನಿಕಾಂತ್ ಅವರು ಈ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ- Richard Antony: ರಕ್ಷಿತ್ ಶೆಟ್ಟಿಯ ಸಮುದ್ರ ದೇವನ ಅವತಾರಕ್ಕೆ ಫ್ಯಾನ್ಸ್ ಗಳು ಫಿದಾ
2020 ರ ಡಿಸೆಂಬರ್ 3 ರಂದು ರಜನಿಕಾಂತ್ ಅವರು ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಮುನ್ನ 2021 ರ ಜನವರಿಯಲ್ಲಿ ತಮ್ಮ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಆದರೆ, ಕಳೆದ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಯು-ಟರ್ನ್ ಹೊಡೆದಿದ್ದ ತಲೈವ ರಾಜಕೀಯಕ್ಕೆ ಸೇರುವುದಿಲ್ಲ ಎಂದು ಘೋಷಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.