ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಸಂಯುಕ್ತಾ ಹೆಗಡೆ ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಾಲೇಜು ಹುಡುಗಿ ಪಾತ್ರದಲ್ಲಿ ಎಲ್ಲರ ಮನಗೆದ್ದಿದ್ದ ಈಕೆ, ಈಗ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ತನ್ನ ಗೆಳೆಯನ ಜೊತೆ ಥೈಲ್ಯಾಂಡ್ ಪ್ರವಾಸದಲ್ಲಿರುವ ಸಂಯುಕ್ತಾ ಹೆಗಡೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನ್ಯೂ ಲುಕ್'ನಲ್ಲಿ ಫೋಟೋಗಳನ್ನು ಶೇರ್ ಮಾಡ್ತಿದ್ದಾರೆ. ಅದು ನಾರ್ಮಲ್ ಪೋಟೋಗಳಾಗಿದ್ದರೆ ಇಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಇಂಟರೆಸ್ಟಿಂಗ್ ಅಂದ್ರೆ, ಬಾಲಿವುಡ್ ನಟಿಮಣಿಯರು, ಐಟಂ ಗರ್ಲ್ಸ್ ಗಳನ್ನೂ ಮೀರಿಸುವ ರೀತಿಯಲ್ಲಿ ಬಿಕಿನಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. 


ಅಷ್ಟೇ ಅಲ್ಲ, "ಜನರ ಯೋಚನೆಗಳನ್ನು ಬದಲಾಯಿಸಲು ನಿಮ್ಮ ಸಮಯ ಹಾಗೂ ಎನರ್ಜಿ ಹಾಳು ಮಾಡ್ಕೋಬೇಡಿ. ಅವರು ಮೆಚ್ಚಲಿ ಬಿಡಲಿ, ನಿಮ್ಮ ಕೆಲಸವನ್ನು ಮಾಡುತ್ತಾ ಮುಂದುವರೆಯಿರಿ. ನಿಮಗಾಗಿ ಬದುಕಿ" ಅಂತಾ ವೇದಾಂತ ಬೇರೆ ಹೇಳಿದ್ದಾರೆ.