ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬಂದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಪರಿಚಯಿಸಲಾದ 'ಸಾನ್ವಿ' ಪಾತ್ರದಾರಿ ರಶ್ಮಿಕ ಮಂದಣ್ಣ ಇನ್ನು ಮುಂದೆ ಟಾಲಿವುಡ್ ನಲ್ಲೂ ಮಿಂಚಲಿದ್ದಾರೆ.


COMMERCIAL BREAK
SCROLL TO CONTINUE READING

ಕನ್ನಡದ ಅಂಜನಿ ಪುತ್ರ ಮತ್ತು ಚಮಕ್ ಚಿತ್ರಗಳ ಶೂಟಿಂಗ್ ನಲ್ಲಿ ನಿರತವಾಗಿರುವ ರಶ್ಮಿಕ ಮಂದಣ್ಣ ಎರಡೂ ಚಿತ್ರಗಳ ಶೂಟಿಂಗ್ ಮುಗಿದ ನಂತರ ತೆಲಗು ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ.


ಅಲ್ಲೂ ಅರ್ಜುನ್ ಜೊತೆ ಅಭಿನಯಿಸಲು ಸಹಿ ಹಾಕಿರುವ ರಶ್ಮಿಕ ಪರಶುರಾಮ್ ನಿರ್ದೇಶನದ ಸಿನಿಮಾದಲ್ಲೂ ನಾಯಕಿಯಾಗಲು ಒಪ್ಪಿಗೆ ನೀಡಿದ್ದಾರೆ.


ಲಾವಣ್ಯ ತ್ರಿಪತಿ ಅಭಿನಯಿಸಬೇಕಿದ್ದ ವಿಜಯ್ ದೇವರಕೊಂಡ ಅವರ ಚಿತ್ರದಲ್ಲಿ ಅಭಿನಯಿಸಲಿರುವ ರಶ್ಮಿಕ ಮಂದಣ್ಣ ಪರಶುರಾಮ್ ನಿರ್ದೇಶನದ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ಜೊತೆ ಅಭಿನಯಿಸಲು ಬಹಳ ಖುಷಿಯಾಗುತ್ತಿದೆ ಎಂದು ಟ್ವಿಟ್ಟರ್ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. 


ಈ ಚಿತ್ರದಲ್ಲಿ ರಶ್ಮಿಕ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.