Bollywood Rewind: ಅಮೀರ್ ಖಾನ್ ಮತ್ತು ಕರಿಷ್ಮಾ ಕಪೂರ್ ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರದ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ರಾಜಾ ಹಿಂದೂಸ್ತಾನಿ ಹೆಸರು ಖಂಡಿತವಾಗಿಯೂ ನೀವು ಕೇಳಿರುತ್ತೀರಿ. ಆದರೆ ಇಂದಿಗೂ ಈ ಚಿತ್ರ ತನ್ನ ಕಥೆ ಮತ್ತು ಅದ್ಭುತ ನಟನೆಗೆ ಮಾತ್ರ ಹೆಸರುವಾಸಿಯಾಗಿಲ್ಲ. ಅದಕ್ಕಿಂತ ಹೆಚ್ಚಾಗಿ ಹಿಂದಿ ಚಿತ್ರರಂಗದಲ್ಲಿ ಅಪರೂಪಕ್ಕೆ ಕಾಣಸಿಗುವ ಏನೋ ಈ ವಿಶೇಷ ಚಿತ್ರದಲ್ಲಿತ್ತು.


COMMERCIAL BREAK
SCROLL TO CONTINUE READING

ರಾಜಾ ಹಿಂದೂಸ್ತಾನಿಯಲ್ಲಿ ಅಮೀರ್ ಮತ್ತು ಕರಿಷ್ಮಾ ನಡುವೆ ಒಂದು ನಿಮಿಷದ ಚುಂಬನದ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದನ್ನು ಮಾಡುವಾಗ ಇಬ್ಬರೂ ತುಂಬಾ ಸಂಕೋಚಪಟ್ಟಿದ್ದರಂತೆ. ಈ ಸೀನ್ ಸೆರೆಹಿಡಿಯಲು ಸುಮಾರು 47 ರೀಟೇಕ್‌’ಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ.  


ಇದನ್ನೂ ಓದಿ: Viral Video: ‘ಕೈಗೆ ಬಂದಿದ್ದು, ಕಾಲಲ್ಲಿ ಹೋಯ್ತು’; ಈ ಅಂಕಲ್ ಫೀಲ್ಡಿಂಗ್ ನೋಡಿದ್ರೆ ನೀವು ಜೀವಮಾನದಲ್ಲಿ ನಕ್ಕಿರಲ್ಲ… ಅಷ್ಟು ನಗ್ತೀರಿ


ಯಾವುದೇ ಚಿತ್ರದಲ್ಲಿ ಇಂಟಿಮೇಟ್ ಸೀನ್ ಮಾಡುವುದು ಸುಲಭವಲ್ಲ. ಅದರಲ್ಲೂ ಸೆಟ್‌’ನಲ್ಲಿ ಸಾಕಷ್ಟು ಜನರ ಸಮ್ಮುಖದಲ್ಲಿ ಇಬ್ಬರು ಅಪರಿಚಿತರು ಒಟ್ಟಿಗೆ ಚುಂಬನದ ದೃಶ್ಯ ಮಾಡುವುದು ಅಷ್ಟೊಂದು ಈಸಿಯಲ್ಲ. ಕ್ಯಾಮೆರಾಗಳನ್ನು ಗಮನದಲ್ಲಿಟ್ಟುಕೊಂಡು ನಟನೆ ಮಾಡುವುದು… ಅತ್ಯುತ್ತಮವಾದ ಶಾಟ್ ನೀಡುವುದು… ಇವೆಲ್ಲವೂ ಅತ್ಯಂತ ಕಷ್ಟಕರವಾದ ವಿಷಯ.


ಅಮೀರ್ ಮತ್ತು ಕರಿಷ್ಮಾ ಕೂಡ ಆ ಸಮಯದಲ್ಲಿ ಎಲ್ಲಾ ವಿಷಯಗಳನ್ನು ಅನುಭವಿಸಿದ್ದರು. ಇಂದಿನ ಯುಗದಲ್ಲಿ ಚುಂಬನದ ದೃಶ್ಯ ದೊಡ್ಡ ವಿಷಯವಲ್ಲ. ಆದರೆ 27 ವರ್ಷಗಳ ಹಿಂದೆ ಒಂದು ನಿಮಿಷದ ಲಿಪ್ ಲಾಕ್ ಮಾಡುವುದೆಂದರೆ ಯಪ್ಪಾ…. ಅದೊಂದು ಗಂಭೀರತೆ ಎಂದೇ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ಸ್ಕ್ರಿಪ್ಟ್‌ಗೆ ಬೇಡಿಕೆ ಇತ್ತು, ಆದ್ದರಿಂದ ಅಮೀರ್ ಮತ್ತು ಕರಿಷ್ಮಾ ಇಬ್ಬರೂ ಒಪ್ಪಿಕೊಂಡರು. ಈ ದೃಶ್ಯವನ್ನು ಊಟಿಯ ಬೆಟ್ಟಗಳಲ್ಲಿ ಭಾರೀ ಮಳೆಯ ನಡುವೆ ಚಿತ್ರೀಕರಿಸಬೇಕಿತ್ತು.


ಇದನ್ನೂ ಓದಿ: Upasana Kamineni: ಆಸ್ಕರ್ ಪ್ರದಾನ ದಿನ ಬೆಳಗ್ಗೆ ಏಳುತ್ತಿದ್ದಂತೆ ರಾಮ್ ಚರಣ್ ಪತ್ನಿ ಉಪಾಸನ ಮಾಡಿದ್ದೇನು ಗೊತ್ತಾ?


47 ರೀಟೇಕ್‌ಗಳು ಮತ್ತು 4 ದಿನಗಳ ಕಠಿಣ ಪರಿಶ್ರಮ


ಈ ದೃಶ್ಯದ ಚಿತ್ರೀಕರಣ ಪ್ರಾರಂಭವಾದಾಗ, ಇದು ಅಷ್ಟು ಸುಲಭವಲ್ಲ ಎಂದು ಎಲ್ಲರಿಗೂ ತಿಳಿದಿತ್ತು, ಆದರೆ ಇದು ತುಂಬಾ ಕಷ್ಟವಾಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಸೀನ್ ನಂತರ ಸೀನ್ ಸಾಗಿತು. ಆದರೆ ಪ್ರತಿ ಶಾಟ್‌ನಲ್ಲಿ ಏನೋ ಲೋಪವಿತ್ತು. ಹಾಗಾಗಿ 47 ರೀಟೇಕ್ ತೆಗೆದುಕೊಳ್ಳಲಾಗಿತ್ತು. ಈ ಸ್ಥಳದಲ್ಲಿ 4 ದಿನಗಳ ಕಾಲ ತೀವ್ರ ಜಗಳ ನಡೆದಿತ್ತು. ಕರಿಷ್ಮಾ ಮತ್ತು ಅಮೀರ್ ಇಬ್ಬರೂ ಅಸಮಾಧಾನಗೊಂಡಿದ್ದರು. ಆದರೆ ಕೊನೆಗೂ ನಾಲ್ಕನೇ ದಿನ ಶಾಟ್ ಪರ್ಫೆಕ್ಟ್ ಆಗಿದ್ದು ಎಲ್ಲರೂ ಓಕೆ ಎಂದು ಕೇಳಿದಾಗ ಎಲ್ಲರೂ ಖುಷಿಪಟ್ಟರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.