Viral Video: ‘ಕೈಗೆ ಬಂದಿದ್ದು, ಕಾಲಲ್ಲಿ ಹೋಯ್ತು’; ಈ ಅಂಕಲ್ ಫೀಲ್ಡಿಂಗ್ ನೋಡಿದ್ರೆ ನೀವು ಜೀವಮಾನದಲ್ಲಿ ನಕ್ಕಿರಲ್ಲ… ಅಷ್ಟು ನಗ್ತೀರಿ

Uncle Fielding Funny Video: ಪಾಡ್ಘೆ ಮತ್ತು ರೊಡ್ಪಾಲಿ ನಡುವಿನ ಕ್ರಿಕೆಟ್ ಪಂದ್ಯವು ಕೆಲವು ಮನರಂಜನೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುವಾಗ, ಪಾಡ್ಘೆ ತಂಡದ ಆಟಗಾರ ಆ ಬಾಲ್ ಹಿಡಿಯುವಲ್ಲಿ ವಿಫಲರಾದರು. ಜೊತೆಗೆ ಬೌಂಡರಿ ಬಿಟ್ಟುಕೊಟ್ಟರು. ಇವೆಲ್ಲದಕ್ಕೂ ಮುನ್ನ ಇಲ್ಲಿ ಹೈಲೈಟ್ ಆಗಿದ್ದು ಮಾತ್ರ ಈ ದೃಶ್ಯ.

Written by - Bhavishya Shetty | Last Updated : Mar 14, 2023, 11:57 PM IST
    • ಈ ವೈರಲ್ ವೀಡಿಯೊ ಹಳ್ಳಿಯ ಕ್ರಿಕೆಟ್ ಪಂದ್ಯವೊಂದರಲ್ಲಿ ನಡೆದ ತಮಾಷೆಯ ಕ್ಷಣದ್ದಾಗಿದೆ.
    • ಚೆಂಡನ್ನು ಹಿಡಿಯುವಲ್ಲಿ ಫೀಲ್ಡರ್ ವೈಫಲ್ಯವು ಹಾಸ್ಯಮಯ ಘಟನೆಗೆ ಕಾರಣವಾಗುತ್ತದೆ.
    • ಪಾಡ್ಘೆ ಮತ್ತು ರೊಡ್ಪಾಲಿ ನಡುವಿನ ಕ್ರಿಕೆಟ್ ಪಂದ್ಯವು ಕೆಲವು ಮನರಂಜನೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ
Viral Video: ‘ಕೈಗೆ ಬಂದಿದ್ದು, ಕಾಲಲ್ಲಿ ಹೋಯ್ತು’; ಈ ಅಂಕಲ್ ಫೀಲ್ಡಿಂಗ್ ನೋಡಿದ್ರೆ ನೀವು ಜೀವಮಾನದಲ್ಲಿ ನಕ್ಕಿರಲ್ಲ… ಅಷ್ಟು ನಗ್ತೀರಿ  title=
Funny Cricket Video

Uncle Fielding Funny Video: ಕ್ರಿಕೆಟ್‌’ನಲ್ಲಿ ಫೀಲ್ಡಿಂಗ್ ಅತ್ಯಗತ್ಯ ಕೌಶಲವಾಗಿದೆ. ಚೆಂಡನ್ನು ಹಿಡಿಯುವುದು, ಎಸೆಯುವುದು ಮತ್ತು ಬಾಲ್ ಯಾವ ಭಾಗದಿಂದ ಬರುತ್ತದೆ ಎಂದು ಮೊದಲೇ ಊಹೆ ಮಾಡಿಕೊಂಡು ಅದಕ್ಕೆ ತಕ್ಕನಾಗಿ ನಿಲ್ಲುವುದು. ಹೀಗೆ ಹತ್ತು ಹಲವಾರು ಲೆಕ್ಕಾಚಾರಗಳಿರುತ್ತವೆ. ಆದ್ರೆ ಇದೀಗ ವೈರಲ್ ಆಗಿರುವ ಒಂದು ವಿಡಿಯೋ ನಿಮ್ಮ ಜೀವಮಾನದಲ್ಲಿ ನಗದಿರುವಷ್ಟು ನಗು ತರುವುದು ಖಂಡಿತ.

ಇದನ್ನೂ ಓದಿ:  18ರ ಹರೆಯದಲ್ಲಿ ಟೀಂ ಇಂಡಿಯಾಗೆ ಸವಾಲ್ ಹಾಕಿದ್ದ ಈ ನಟಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ…!

ವೈರಲ್ ವೀಡಿಯೊ ಹಳ್ಳಿಯ ಕ್ರಿಕೆಟ್ ಪಂದ್ಯವೊಂದರಲ್ಲಿ ನಡೆದ ತಮಾಷೆಯ ಕ್ಷಣದ್ದಾಗಿದೆ. ಚೆಂಡನ್ನು ಹಿಡಿಯುವಲ್ಲಿ ಫೀಲ್ಡರ್ ವೈಫಲ್ಯವು ಹಾಸ್ಯಮಯ ಘಟನೆಗೆ ಕಾರಣವಾಗುತ್ತದೆ.

ಪಾಡ್ಘೆ ಮತ್ತು ರೊಡ್ಪಾಲಿ ನಡುವಿನ ಕ್ರಿಕೆಟ್ ಪಂದ್ಯವು ಕೆಲವು ಮನರಂಜನೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುವಾಗ, ಪಾಡ್ಘೆ ತಂಡದ ಆಟಗಾರ ಆ ಬಾಲ್ ಹಿಡಿಯುವಲ್ಲಿ ವಿಫಲರಾದರು. ಜೊತೆಗೆ ಬೌಂಡರಿ ಬಿಟ್ಟುಕೊಟ್ಟರು. ಇವೆಲ್ಲದಕ್ಕೂ ಮುನ್ನ ಇಲ್ಲಿ ಹೈಲೈಟ್ ಆಗಿದ್ದು ಮಾತ್ರ ಈ ದೃಶ್ಯ.

 

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ ಈ ವಿಡಿಯೋ ಭಾರೀ ವೇಗವಾಗಿ ವೈರಲ್ ಆಗಿದೆ. ಜೊತೆಗೆ 2 ಮಿಲಿಯನ್ ವೀಕ್ಷಣೆಗಳು, 15 ಸಾವಿರಕ್ಕೂ ಹೆಚ್ಚು ಲೈಕ್ಸ್, ಲೆಕ್ಕವಿಲ್ಲದಷ್ಟು ಕಮೆಂಟ್’ಗಳು ಬಂದಿವೆ.

ವಿಡಿಯೊದ ಮಾಹಿತಿಯ ಪ್ರಕಾರ, ಇಲ್ಲಿ ಆಡುತ್ತಿರುವ ಎರಡು ತಂಡಗಳ ಹೆಸರು ಪಾಡ್ಘೆ ಮತ್ತು ರೊಡ್ಪಾಲಿ. ಈ ಕ್ರಿಕೆಟ್ ಪಂದ್ಯದಲ್ಲಿ 40 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮಾತ್ರ ಆಡಬಹುದು. ಇನ್ನು ಈ ವಿಡಿಯೋದಲ್ಲಿ ನೀವು ನೋಡುವಂತೆ ಫೀಲ್ಡರ್, ಬಾಲ್ ಹಿಡಿಯಲು ಅದರ ಹಿಂದೆಯೇ ಓಡುವುದನ್ನು ನೋಡಬಹುದು. ಮೊದಲು ಬೌಂಡರಿ ಬಳಿ ಬಾಲ್ ನ್ನು ತಡೆಹಿಡಿಯುತ್ತಾರೆ. ಆದರೆ ಆಯತಪ್ಪಿ ಅಲ್ಲಿಯೇ ಬೀಳುತ್ತಾರೆ. ಗ್ರಹಚಾರ ಎಷ್ಟು ಕೆಟ್ಟದೆ ಅಂದ್ರೆ, ಆ ಬಾಲ್’ನ್ನು ಇತರ ಆಟಗಾರರ ಕಡೆಗೆ ಎಸೆಯಲು ಪ್ರಯತ್ನಿಸುವಾಗ ಅದು ಅವರ ಕಾಲಿಗೆ ತಗುಲಿ ಶೂನಿಂದ ಪುಟಿದೆದ್ದು, ಬೌಂಡರಿ ಗೆರೆ ದಾಟುತ್ತದೆ.

ಇದನ್ನೂ ಓದಿ: Richest Cricketer: ವಿರಾಟ್-ಧೋನಿ ಅಲ್ಲ… ಈ ಆಟಗಾರನೇ ವಿಶ್ವದ ಶ್ರೀಮಂತ ಕ್ರಿಕೆಟಿಗ! ಇವರ ಆಸ್ತಿ ಮೌಲ್ಯ 3100 ಕೋಟಿ

ಇನ್ನು ಈ ವಿಡಿಯೋಗೆ “ಜಾಂಟಿ ಲೆವೆಲ್ ಫೀಲ್ಡಿಂಗ್" ಶೀರ್ಷಿಕೆಯನ್ನು ನೀಡಲಾಗಿದೆ. ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು, ಅತ್ಯುತ್ತಮ ಫೀಲ್ಡಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರ ಫೀಲ್ಡಿಂಗ್’ಗೆ ಇದನ್ನು ಹೋಲಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News