Actress Kushboo family : ಕನ್ನಡ ಸಿನಿ ರಸಿಕರ ಮನ ಸೆಳೆದ ನಾಯಕಿಯರಲ್ಲಿ ಖುಷ್ಬು ಕೂಡ ಒಬ್ಬರು. ಕರುನಾಡಿನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿಸಲು ಆರಂಭಿಸಿದಾಗ ‘ನಾಯಕಿಯರು ತೆಳ್ಳಗಿರಬೇಕು’ ಎಂಬ ಒತ್ತಾಯವಿತ್ತು. ಆದರೆ ಅದನ್ನು ಮುರಿದು 'ಡುಮ್ಮಿಯಂತಿದ್ದರೂ ಸಹ ನಟಿಸಬಹುದು' ಅಂತ ತೋರಿಸಿಕೊಟ್ಟವರು ಖುಷ್ಬು.


COMMERCIAL BREAK
SCROLL TO CONTINUE READING

ಖುಷ್ಬೂ ನಟಿಸಿದ ಚಿತ್ರಗಳು ಹಿಟ್ ಆಗಲು ಹಾಡುಗಳು ಮತ್ತು ಕಥೆ ಒಂದು ಕಾರಣವಾದರೂ ಸಹ ಅವರ ಸೌಂದರ್ಯ ಒಂದು ದೊಡ್ಡ ಕಾರಣವಾಗಿತ್ತು. ಡಬಲ್ ಜಡೆ, ಸ್ಕಾರ್ಫ್ ಕಟ್ಟಿಕೊಂಡು, ಮಾಡರ್ನ್ ಡ್ರೆಸ್ ಹಾಕಿಕೊಂಡು ತಲೆಗೂದಲು ಬಿಟ್ಟು, ತಲೆಗೆ ಮಲ್ಲಿಗೆ ಸೀರೆ ಉಟ್ಟು ಎಲ್ಲ ಅವತಾರಗಳಲ್ಲಿ ಖುಷ್ಬು ಅವರನ್ನು ನಮ್ಮ ಊರಿನ ಜನ ಎಂಜಾಯ್ ಮಾಡಿದರು.


ಇದನ್ನೂ ಓದಿ:ಸ್ಟಾರ್‌ ಹಿರೋಯಿನ್‌ಗಳನ್ನೂ ಮೀರಿಸುವ ಅಂದಗಾರ್ತಿ ನಟ ಅರ್ಜುನ್‌ ಸರ್ಜಾ 2ನೇ ಪುತ್ರಿ..!


ಸಧು ಖುಷ್ಬೂ ಚಿತ್ರರಂಗದಿಂದ ದೂರ ಉಳಿದಿದ್ದು, ಬಿಜೆಪಿ ಪಕ್ಷದ ಪ್ರಮುಖ ಸದಸ್ಯರಾಗಿ ಪೂರ್ಣಾವಧಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಖುಷ್ಬು ಬಳಿ 8.55 ಕೆಜಿ ಚಿನ್ನವಿದೆ ಎನ್ನಲಾಗಿದ್ದು, 78 ಕೆಜಿ ಬೆಳ್ಳಿ ಸೇರಿದಂತೆ 4.55 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ. 


ಅಲ್ಲದೆ, ಚಿನ್ನದ ಬೆಲೆ ಏರಿಕೆಯಿಂದ ಅವರ ಸಂಪತ್ತು 7 ಕೋಟಿಗೆ ಏರಿರಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಖುಷ್ಬು ಅವರ ಮನೆಗೆ ಅವ್ನಿ ಎಂದು ಹೆಸರಿಡಲಾಗಿದೆ. ಅಲ್ಲದೆ, ಅವ್ನಿ ಎಂಬ ಸಂಸ್ಥೆಯನ್ನೂ ಸಹ ಅವರು ನಡೆಸುತಿದ್ದಾರೆ. ಖುಷ್ಬೂ ಅವರ ಪತಿ ತಮಿಳು ಸ್ಟಾರ್‌ ನಟ ಸುಂದರ್.  


ಇದನ್ನೂ ಓದಿ:ಸೀರೆಯಲ್ಲಿಯೂ ಟ್ರೋಲ್‌ ಆಗುತ್ತಿರುವ ಟೋಬಿ ಬೆಡಗಿ: ನೆಗೆಟಿವ್‌ ಕಾಮೆಂಟ್ಸ್‌ಗೆ ಡೋನ್ಟ್‌ ಕೇರ್!


ಖುಷ್ಬು ಅವರ ಬಳಿ 18 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಕೆಲವು ದುಬಾರಿ ಐಷಾರಾಮಿ ಕಾರುಗಳನ್ನೂ ಹೊಂದಿದ್ದಾರೆ. ಒಟ್ಟಾರೆ ಇವರ ಆಸ್ತಿ ಸುಮಾರು 25 ರಿಂದ 28 ಕೋಟಿ ರೂಪಾಯಿ ಎಂಬ ಮಾತಿದೆ. ಇದು ಅವರ ಆಸ್ತಿ ಮೌಲ್ಯವಷ್ಟೇ. ಪತಿ ಸುಂದರ್ ಅವರ ಆಸ್ತಿ ಕೂಡಿದರೆ ಹೆಚ್ಚಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.