ಕನ್ನಡದ ಭರವಸೆಯ ಮ್ಯೂಸಿಕ್ ಸಂಸ್ಥೆ ಲಹರಿ ಮುಡಿಗೆ ಮತ್ತೊಂದು ಗರಿ ಮೂಡಿದೆ. ಹೌದು, ಭಾವಗೀತೆ ಮತ್ತು ಜಾನಪದ ಗೀತೆ ಚಾನೆಲ್‌ನಲ್ಲಿ ಈವರೆಗೆ ೧೧.೫೫ ಲಕ್ಷ ಸಬ್‌ಸ್ಕ್ರೈಬರ್ ಇದ್ದು, ಈ ಚಾನೆಲ್ ಈಗ ಹೊಸದೊಂದು ದಾಖಲೆ ಬರೆದಿದೆ. ಆ ದಾಖಲೆ ಬೇರೇನೂ ಅಲ್ಲ, ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಗೋಲ್ಡ್ ಅವಾರ್ಡ್ ಲಭಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಗೆ ಎರಡನೇ ಸ್ಥಾನ..! ಫ್ರೀ ಟಿಕೆಟ್ ಘೋಷಿಸಿದ ಈ ಕಂಪನಿ..!


ಸಿಹಿ ಸುದ್ದಿ ಬಂದಿರೋದು ಹೆಮ್ಮೆ ಎನಿಸಿದೆ. ಕನ್ನಡದ ಸಾರಸ್ವತ ಮತ್ತು ಸಂಗೀತ ಲೋಕಕ್ಕೆ ಮತ್ತೊಂದು ಗರಿ ಮೂಡಿದೆ. ಭಾರತದಲ್ಲಿ ಸುಗಮ ಸಂಗೀತ ಕ್ಷೇತ್ರ ಮಾತ್ರ ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಮೊಟ್ಟ ಮೊದಲ ಬಾರಿಗೆ ಭಾವಗೀತೆಗಳು ಮತ್ತು ಜಾನಪದ ಗೀತೆಗಳ ವಿಭಾಗಕ್ಕೆ ಲಹರಿ ಸಂಸ್ಥೆಗೆ ಈ ಚಿನ್ನದ ಪ್ರಶಸ್ತಿ ಬಂದಿರೋದು ಬಹಳ ಹೆಮ್ಮೆ ಎನಿಸಿದೆ ಎಂದು ಲಹರಿ ಸಂಸ್ಥೆ ಸಂತಸ ಹಂಚಿಕೊಂಡಿದೆ.KGF Chapter 3: ಕೆಜಿಎಫ್ ಚಾಪ್ಟರ್ 3 ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ...!


ಜೊತೆಗೆ ಈ ಸುಗಮ ಸಂಗೀತ ಕ್ಷೇತ್ರ ಮತ್ತು ಜಾನಪದ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಎಲ್ಲಾ ಗಾಯಕ, ಗಾಯಕಿಯರು, ಕವಿಗಳು, ಸಾಹಿತಿಗಳು ಎಲ್ಲರಿಗೂ ಸಂಸ್ಥೆ ಚಿರ ಋಣಿಯಾಗಿದೆ. ವಿಶೇಷವಾಗಿ ನಮ್ಮ ಕೇಳುಗರಿಗೆ, ಸಮಸ್ತ ಕನ್ನಡಿಗರಿಗೂ ನಾವು ಚಿರ ಋಣಿಯಾಗಿದ್ದೇವೆ. ಇದೇ ರೀತಿ ನಿಮ್ಮ ಪ್ರೋತ್ಸಾಹ ಪ್ರೀತಿ ಇರಲಿ. ನಿಮ್ಮೆಲ್ಲರ ಪ್ರೀತಿ, ಸಹಕಾರ ಇದ್ದರೆ ಶೀಘ್ರದಲ್ಲೇ ಮತ್ತಷ್ಟು  ಗುಣಮಟ್ಟದ ಕೆಲಸ ಮಾಡಿ ಇನ್ನಷ್ಟು ಗುರುತಿಸಿಕೊಳ್ಳುತ್ತೇವೆ. ಈ ಗೋಲ್ಡ್ ಅವಾರ್ಡ್‌ ನಮ್ಮ ಕನ್ನಡಿಗರಿಗೆ, ಕೇಳುಗರಿಗೆ ಅರ್ಪಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.