ನವದೆಹಲಿ: ಇನ್‌ಸ್ಟಾಗ್ರಾಮ್‌ನ  ಪೋಸ್ಟ್‌ನಲ್ಲಿ, ನಟಿ ಲಾರಾ ದತ್ತಾ ಯಾವುದೇ ಮೇಕಪ್ ಇಲ್ಲದೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಅವರು ಶೇರ್ ಮಾಡಿಕೊಂಡಿರುವ ಫೋಟೋಗಳಲ್ಲಿ ಒಂದಕ್ಕೆ ಮೇಕಪ್ ಇಲ್ಲದೆ ಇದ್ದರೆ, ಇನ್ನೊಂದರಲ್ಲಿ ಮೇಕಪ್ ಹೊಂದಿರುವ ಫೋಟೋ ಇದೆ.


COMMERCIAL BREAK
SCROLL TO CONTINUE READING

'ಈಗ ನಿಜವಾಗಿರುವುದನ್ನು ತೋರಿಸಿಕೊಳ್ಳುತ್ತಿರುವುದು, ಇದು ರಾತ್ರಿ ಏಳು ಗಂಟೆ ವೇಳೆ ಇದ್ದಿರುವಂತಹ ನನ್ನ ಅವತಾರವಾಗಿದೆ, ಮುಂದಿನ ಫೋಟೋ ಎರಡು ಗಂಟೆಗಳ ನಂತರದ್ದು, ಎಂದು ಅವರು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Karnataka Hijab Ban: ನಾಳೆ ಸುಪ್ರೀಂನಲ್ಲಿ ಹೈಕೋರ್ಟ್ ಆದೇಶ ವಿರುದ್ಧದ ಅರ್ಜಿ ವಿಚಾರಣೆ


ಇನ್ನೂ ಮುಂದುವರೆದು" ಇದರ ಮೂಲಕ ನಾನು ಹೇಳಲು ಹೊರಟಿರುವುದೆನೆಂದರೆ, ನೀವು ಗ್ಲ್ಯಾಮರ್  ಫೋಟೋಗಳಲ್ಲಿ ನೋಡುವಂತೆ, ನಾವು ಎದ್ದ ಕೊಡಲೇ ಹೀಗೆ ಇರುವುದಿಲ್ಲ ಎನ್ನುವುದನ್ನು ತಿಳಿಯುವುದು ಮುಖ್ಯವಾಗಿದೆ.ಯಾಕೆಂದರೆ ನಾವು ಈ ಹಂತಕ್ಕೆ ಬರಲು ತಂಡದ ಶ್ರಮವಿರುತ್ತದೆ. ನನ್ನ ವಿಷಯದಲ್ಲಿ, ಕೇಶ ವಿನ್ಯಾಸಕಿ ಕ್ಲಾರಬೆಲ್ಲೆಸಲ್ಡಾನ್ಹಾ, ಅದ್ಬುತ ಎಂದು ಹೇಳಬಹುದು.ನಿಮ್ಮ ದಿನಗಳು ಹೇಗಿದ್ದರೂ ಸಹಿತ ಬಟ್ಟೆ ಧರಿಸುವುದು ಮತ್ತು ನಿಮಗಾಗಿ ಕಾಣಿಸಿಕೊಳ್ಳುವುದು ಮುಖ್ಯವಾಗುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ.


ಈ ಬಾರಿ ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ತಯಾರಿ..!


ಈ ಫೋಟೋಗಳನ್ನು ನೋಡಿದ ತಕ್ಷಣ ಅಭಿಮಾನಿಗಳು ಅವರ ಈ ನಡೆಗೆ ಫಿದಾ ಆಗಿದ್ದಾರೆ, ನೀವು ಯಾವಾಗಲೂ ಗ್ಲಾಮರಸ್ ಎಂದು ಅವರನ್ನು ಶ್ಲಾಘಿಸಿದ್ದಾರೆ.ಕೆಲವರು ಅವರನ್ನು ಸ್ಫೂರ್ತಿದಾಯಕ ಎಂದು ಬಣ್ಣಿಸಿದ್ದಾರೆ.


ಲಾರಾ ದತ್ತಾ 2000 ರಲ್ಲಿ ಭುವನಸುಂದರಿ ಪ್ರಶಸ್ತಿಯನ್ನು ಗೆದ್ದರು.ತದನಂತರ ಅವರು 2003 ರಲ್ಲಿ 'ಅಂದಾಜ್' ಚಿತ್ರದ ಮೂಲಕ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದರು. ನಂತರ ಅವರು 'ಮಸ್ತಿ', 'ನೋ ಎಂಟ್ರಿ', 'ಭಾಗಂ ಭಾಗ್', 'ಹೌಸ್‌ಫುಲ್', ' ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ