ಈ ಬಾರಿ ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ತಯಾರಿ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೇ ಸೆಪ್ಟಂಬರ್‌ 02 ಕ್ಕೆ 47ನೇ ವಸಂತಕ್ಕೆ ಕಾಲಿಡುತಿದ್ದಾರೆ, ತಮ್ಮ ಅಭಿಮಾನಿಗಳನ್ನ ತನ್ನ ಪ್ರೀತಿಯ ಸ್ನೇಹಿತರು ಎಂದು ಕರೆಯೋ ಕಿಚ್ಚ ಕಳೆದೆರೆಡು ವರ್ಷ ತಮ್ಮ ಹುಟ್ಟುಹಬ್ಬವನ್ನ ಕೋವಿಡ್‌ ಕಾರಣಾಂತರದಿಂದ ಕುಟುಂಬದ ಜೊತೆ ಮಾತ್ರ ಆಚರಿಸಿಕೊಂಡಿದ್ದರು.

Written by - K Karthik Rao | Edited by - Manjunath N | Last Updated : Aug 28, 2022, 06:56 PM IST
  • ಸೆಪ್ಟಂಬರ್‌ 2 ರಂದು ಜೆಪಿ ನಗರದ ತಮ್ಮ ನಿವಾಸದ ಬಳಿ ಸುದೀಪ್‌ ಅಭಿಮಾನಿಗಳನ್ನ ಭೇಟಿಯಾಗಲಿದ್ದಾರೆ.
  • ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲಿದ್ದಾರೆ.
ಈ ಬಾರಿ ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ತಯಾರಿ..! title=

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೇ ಸೆಪ್ಟಂಬರ್‌ 02 ಕ್ಕೆ 47ನೇ ವಸಂತಕ್ಕೆ ಕಾಲಿಡುತಿದ್ದಾರೆ, ತಮ್ಮ ಅಭಿಮಾನಿಗಳನ್ನ ತನ್ನ ಪ್ರೀತಿಯ ಸ್ನೇಹಿತರು ಎಂದು ಕರೆಯೋ ಕಿಚ್ಚ ಕಳೆದೆರೆಡು ವರ್ಷ ತಮ್ಮ ಹುಟ್ಟುಹಬ್ಬವನ್ನ ಕೋವಿಡ್‌ ಕಾರಣಾಂತರದಿಂದ ಕುಟುಂಬದ ಜೊತೆ ಮಾತ್ರ ಆಚರಿಸಿಕೊಂಡಿದ್ದರು.

ಆದರೆ ಈ ಭಾರಿ ಕಿಚ್ಚ ಅಭೀಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲಿದ್ದಾರೆ. ಕಿಚ್ಚನ ಬರ್ತಡೇ ಅಂದ್ರೆ ಅಭಿಮಾನಿಗಳು, 'ಕಿಚ್ಚೋತ್ಸವ', 'ಕಿಚ್ಚನ ಹಬ್ಬ' ಅಂತಲೇ ಆಚರಿಸುತ್ತಾರೆ. ಹೀಗಾಗಿ, ಸೋಷಿಯಲ್ ಮೀಡಿಯಾದಲ್ಲಿ 'ಕಿಚ್ಚೋತ್ಸವ', 'ಕಿಚ್ಚನ ಹಬ್ಬ' ಟ್ರೆಂಡ್ ಆಗುತ್ತಿದೆ. ಶಿವಣ್ಣ ಹಾಗೂ ಸುದೀಪ್‌ ಸ್ನೇಹದ ಬಾಂದವ್ಯ ಎಂತದ್ದು ಎಂದು ಇಡೀ ಕರ್ನಾಟಕಕ್ಕೆ ಗೊತ್ತು, ಹೀಗೆ ಇಬ್ಬರ ನಡುವೆ ಮದುರ ಸ್ನೇಹದ ಜೊತೆಗೆ ಉತ್ತಮ ಒಡನಾಟ ಕೂಡ ಇದೆ. ಈಗ ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಶಿವಣ್ಣ #KingKicchaBdayCDP ಬಿಡುಗಡೆ ಮಾಡಿ ಅಭಿಮಾನಿಗಳ ಕಿಚ್ಚೋತ್ಸವಕ್ಕೆ ಸಾಥ್‌ ನೀಡಿದ್ದಾರೆ.

ಅಂದು ಅಭಿಮಾನಿಗಳು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಸರ್ಕಾರಿ ಶಾಲೆಗಳು, ದತ್ತು ಆಶ್ರಮಗಳು, ಬಡ ವಿದ್ಯಾರ್ಥಿಗಳು ಹಾಗೂ ಅನೇಕ ಕುಟುಂಬಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ ಹಾಗೂ ಕರ್ನಾಟಕದ ಪ್ರಸಿದ್ದ ದೇವಾಲಯಗಳಲ್ಲಿ ಕಿಚ್ಚನ ಹೆಸರಲ್ಲಿ ಪೋಜೆ ಸಲ್ಲಿಸಿ ತಮ್ಮ ಅಭೀಮಾನವನ್ನ ಮೆರೆಯುತ್ತಾರೆ. ಈಗಾಗಲೇ ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹಲವು ಗಿಫ್ಟ್‌ ಸಿಕ್ಕಾಗಿದೆ.ಅಭಿನಯ ಚಕ್ರವರ್ತಿಗೆ ಗೌರವ ಸಲ್ಲಿಸಲು ಕೋಟ್ಯಂತರ ಫ್ಯಾನ್ಸ್ ಒಗ್ಗೂಡುತ್ತಿದ್ದಾರೆ.‌ಈ ಬಾರಿ 'ವಿಕ್ರಾಂತ್‌ ರೋಣ' ಥೀಮ್‌ ಜೊತೆಗೆ ಸುದೀಪ್‌ ಅವರ ಹುಟ್ಟುಹಬ್ಬ ಆಚರಿಸಲು ಕನ್ನಡಿಗರು ಸಜ್ಜಾಗಿದ್ದು, ಕನ್ನಡ ಚಿತ್ರರಂಗದ ಸ್ಟಾರ್ಸ್‌ ಕೂಡ ಈ ಸಂಭ್ರಮಾಚರಣೆಯ ಭಾಗವಾಗುತ್ತಿದ್ದಾರೆ.

ಜೊತೆಗೆ ಕಿಚ್ಚ ಸುದೀಪ್‌ ಅವರ ಬಾಲಿವುಡ್‌ ಸ್ನೇಹಿತರು & ಟಾಲಿವುಡ್‌ ಮತ್ತು ಕಾಲಿವುಡ್‌ ಫ್ರೆಂಡ್ಸ್‌ ಕೂಡ ಈ ಸೆಲೆಬ್ರೇಷನ್‌ಗೆ ಸಾಥ್‌ ನೀಡ್ತಾಇದ್ದಾರೆ.ಸೆಪ್ಟಂಬರ್‌ 2 ರಂದು ಜೆಪಿ ನಗರದ ತಮ್ಮ ನಿವಾಸದ ಬಳಿ ಸುದೀಪ್‌ ಅಭಿಮಾನಿಗಳನ್ನ ಭೇಟಿಯಾಗಲಿದ್ದಾರೆ.ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲಿದ್ದಾರೆ.ಸಾವಿರಾರು ಸಂಖ್ಯೆಯಲ್ಲಿ ಅಭೀಮಾನಿಗಳ ಸಾಗರವೇ ಸೇರಬಹುದಾಗಿದೆ ಯಾಕೆಂದರೆ ಇತ್ತೀಚಿಗೆ ಸುದೀಪ್‌ ರವರು ಅಭಿಮಾನಿಗಳನ್ನ ಭೇಟಿಯಾಗಿ ತುಂಬಾ ದಿನಗಳೇ ಕಳೆದಿದೆ ಅದ್ರಲ್ಲೂ ಎರಡು ವರ್ಷಗಳ ನಂತರದ ಸಂಭ್ರಮಾಚರಣೆ ಇದಾಗಿರುವುದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಅಭೀಮಾನಿಗಳು ಸೇರುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News