ನವದೆಹಲಿ : ವಯೋ ಸಹಜ ಕಾಯಿಲೆಯಿಂದ ನಿನ್ನೆ ನಿಧನರಾದ ಬಾಲಿವುಡ್ ಗಾಯಕಿ ಲತಾ ಮಂಗೇಶ್ಕರ್ ಅವರು ಸೆಪ್ಟೆಂಬರ್ 28, 1929 ರಂದು ಜನಿಸಿದರು. ಭಾರತೀಯ ಸಿನಿ ರಂಗದ ಶ್ರೇಷ್ಠ ಹಿನ್ನೆಲೆ ಗಾಯಕರಲ್ಲಿ ಒಬ್ಬರು.  ಲತಾ ಮಂಗೇಶ್ಕರ್ ಅವರು ಭಾರತೀಯ ಚಲನಚಿತ್ರ ಮತ್ತು ಸಂಗೀತ ಉದ್ಯಮದಲ್ಲಿ ಅತ್ಯಂತ ಗೌರವಾನ್ವಿತ ಸೆಲೆಬ್ರಿಟಿಗಳಲ್ಲಿ ಒಬ್ಬರು. 36 ಭಾರತೀಯ ಭಾಷೆಗಳಲ್ಲಿ ಹಾಡು ಹಾಡಿದ್ದಾರೆ. ಅಲ್ಲದೆ,  1989 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆಡಿದ್ದಾರೆ, ಲತಾ ಮಂಗೇಶ್ಕರ್ ಅವರು ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯರಾಗಿದ್ದರು.


COMMERCIAL BREAK
SCROLL TO CONTINUE READING

ಲತಾ ಮಂಗೇಶ್ಕರ್(Lata Mangeshkar) ಅವರ ವೃತ್ತಿ ಮೂಲಕ ಗಳಿಸಿದ ಒಟ್ಟು ಆಸ್ತಿ ಮೌಲ್ಯ 368 ಕೋಟಿ ರೂ. ಆದರೆ, ಅವರ ನಿಧನದ ನಂತರ ಎಲ್ಲರ ಮನದಲ್ಲಿ ಮೂಡಿರುವ ಪ್ರಶ್ನೆ ಏನೆಂದರೆ ಅವರ ಆಸ್ತಿಯ ಒಡೆಯ ಯಾರು? ಅದಕ್ಕೆ ಉತ್ತರ ಇಲ್ಲಿದೆ!


ಲತಾ ಮಂಗೇಶ್ಕರ್ ಅಂತ್ಯಕ್ರಿಯೆಯಲ್ಲಿ ಶಾರುಖ್ ಉಗುಳಿದ್ದಾರಾ? ವೈರಲ್ ವಿಡಿಯೋ ಬಗ್ಗೆ ಬಿಜೆಪಿ ಮುಖಂಡರ ಆಕ್ಷೇಪವೇನು?


Trustednetworth.com ನ ವರದಿಯ ಪ್ರಕಾರ, ಲತಾ ಮಂಗೇಶ್ಕರ್ ಅವರ ಅದ್ದೂರಿ ಮನೆ, ಕೆಲವು ಐಷಾರಾಮಿ ಕಾರುಗಳು(Luxury Cars) ಮತ್ತು ಅವರ ಹೂಡಿಕೆಗಳು ಸೇರಿದಂತೆ ಅವರ ಜೀವಮಾನದ ಗಳಿಕೆಯ ಒಟ್ಟು  ಮೌಲ್ಯ 368 ಕೋಟಿ ರೂ. ಆಗಿದೆ. ಲತಾ ಮಂಗೇಶ್ಕರ್ ಅವರು  ಏಳು ದಶಕಗಳ ಕಾಲ ತನ್ನ ಸುಪ್ರಸಿದ್ಧ ವೃತ್ತಿಜೀವನದಲ್ಲಿ ವಿಶ್ರಾಂತಿಯಿಲ್ಲದೆ ಕೆಲಸ ಮಾಡಿದ್ದಾರೆ. ನೈಟಿಂಗೇಲ್ ಆಫ್ ಇಂಡಿಯಾ, ಕ್ವೀನ್ ಆಫ್ ಮೆಲೋಡಿ, ವಾಯ್ಸ್ ಆಫ್ ದಿ ಮಿಲೇನಿಯಮ್ ಮತ್ತು ಇನ್ನೂ ಅನೇಕ ಬಿರುದುಗಳನ್ನು ಪಡೆದಿದ್ದಾರೆ, ಕೆಲವು ವರದಿಗಳ ಪ್ರಕಾರ, ಲತಾ ಮಂಗೇಶ್ಕರ್ ಅವರ ಸಹೋದರ, ಹೃದಯನಾಥ್ ಮಂಗೇಶ್ಕರ್ ಅವರ ಆಸ್ತಿಯ ಮಾಲೀಕರಾಗಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.


ನಿನ್ನೆ ಮುಂಬೈ(Mumbai)ನ ಶಿವಾಜಿ ಪಾರ್ಕ್‌ನಲ್ಲಿ ಪೂರ್ಣ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ಮಾಡಲಾಯಿತು. ಲತಾ ಮಂಗೇಶ್ಕರ್ ಅವರಿಗೆ ಕೊನೆಯ ವಿದಾಯ ಹೇಳಲು ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳು ಆಗಮಿಸಿದ್ದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.