Bigg Boss Kannada season 11: ‘ಬಿಗ್‌ಬಾಸ್ ಕನ್ನಡ ಸೀಸನ್ 11’ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ನಟ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಸೆಪ್ಟೆಂಬರ್ 29ರಿಂದ ಈ ರಿಯಾಲಿಟಿ ಶೋ ಪ್ರಾರಂಭವಾಗುತ್ತಿದೆ. 11ನೇ ಸೀಸನ್ ಎಂಬ ಕಾರಣಕ್ಕೆ ಈಗ ಹೊಸ ಲೆಕ್ಕ ಅಂತಾ ವಾಹಿನಿಯವರು ತಿಳಿಸಿದ್ದಾರೆ. ಹೀಗಾಗಿ ಈ ಬಾರಿಯ ʼಬಿಗ್ ಬಾಸ್‌ʼನಿಂದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಬಾರಿ ʼಸ್ವರ್ಗ ಹಾಗೂ ನರಕʼ ಎನ್ನುವ ಕಾನ್ಸೆಪ್ಟ್​ನೊಂದಿಗೆ ʼಬಿಗ್‌ಬಾಸ್ʼ ಮೂಡಿಬರಲಿದೆ ಅಂತಾ ವಾಹಿನಿಯವರು ಸೂಚನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈಗಾಗಲೇ ʼಬಿಗ್‌ಬಾಸ್‌'ನ ಹೊಸ ಪ್ರೋಮೋ ರಿಲೀಸ್ ಆಗಿದ್ದು, ತೀವ್ರ ಕುತೂಹಲ ಹೆಚ್ಚಿಸಿದೆ. ಈ ಬಾರಿ ಯಾರೆಲ್ಲಾ ʼಬಿಗ್‌ಬಾಸ್ʼ ಶೋಗೆ ಕಾಲಿಡುತ್ತಾರೆ? ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಈ ಬಾರಿಯ ʼಬಿಗ್‌ಬಾಸ್‌ʼ ಮನೆಗೆ ಹಿರಿಯ ನಟಿ ಪ್ರೇಮಾ, ಹುಲಿ ಕಾರ್ತಿಕ್‌, ರೀಲ್ಸ್‌ ರೇಷ್ಮಾ, ನಟಿಯರಾದ ಭವ್ಯಾ ಗೌಡ, ಸುಕೃತಾ ನಾಗ್, ತುಕಾಲಿ ಮಾನಸ, ನಟರಾದ ಸುನಿಲ್ ರಾವ್, ತ್ರಿವಿಕ್ರಮ್, ದರ್ಶನ್‌‌‌‌‌‌‌ ರೀತಿ ಇರುವ ಅವಿನಾಶ್‌, ಗೌರವ ಶೆಟ್ಟಿ, ವರುಣ್‌ ಆರಾಧ್ಯ ಮುಂತಾದವರು ಎಂಟ್ರಿ ಕೊಡಲಿದ್ದಾರೆಂದು ಹೇಳಲಾಗಿದೆ. ಆದರೆ ಭಾನುವಾರ 18 ಸ್ಪರ್ಧಿಗಳ ಗ್ರ್ಯಾಂಡ್ ಎಂಟ್ರಿಯೊಂದಿಗೆ 'ಬಿಗ್ ಬಾಸ್ ಕನ್ನಡ 11' ಶುರುವಾಗಲಿದೆ. ಅಂದೇ ಅಧಿಕೃತವಾಗಿ ಯಾರ್ಯಾರು ʼಬಿಗ್‌ಬಾಸ್‌ʼ ಮನೆಗೆ ಹೋಗುತ್ತಾರೆ ಅನ್ನೋದರ ಬಗ್ಗೆ ತಿಳಿದುಬರಲಿದೆ. 


ಇದನ್ನೂ ಓದಿ: Video: ಸಹೋದರಿಯ ಮದುವೆಯಲ್ಲಿ ಮಸ್ತ್‌ ಸ್ಟೆಫ್ಸ್‌ ಹಾಕಿದ ಸಾಯಿ ಪಲ್ಲವಿ! ವಿಡಿಯೋ ನೋಡಿ ನೀವು ಫ್ಲಾಟ್‌ ಆಗೋದು ಗ್ಯಾರಂಟಿ


ʼಬಿಗ್‌ಬಾಸ್‌ʼ ಮನೆಗೆ ವಕೀಲ್ ಸಾಬ್! 


ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಾನು ಹೋರಾಟ ನಡೆಸುತ್ತೇನೆ ಅಂತಾ ಸದಾ ಸುದ್ದಿಯಲ್ಲಿರುವ ಲಾಯರ್‌ ಕೆ.ಎನ್.ಜಗದೀಶ್‌ ಅವರು ಸಹ ಈ ಬಾರಿಯ ʼಬಿಗ್‌ಬಾಸ್‌ʼ ಮನೆಗೆ ಹೋಗುತ್ತಾರೆಂದು ಹೇಳಲಾಗಿದೆ. ಒಂದಲ್ಲ ಒಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಲಾಯರ್‌ ಜಗದೀಶ್‌ ಅವರಿಗೆ ʼಬಿಗ್‌ಬಾಸ್‌ʼ ಆಫರ್‌ ಸಿಕ್ಕಿದೆ ಎಂದು ಹೇಳಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲುಪಾಲಾಗಿರುವ ನಟ ದರ್ಶನ್ ಪರ ಹೋರಾಟಕ್ಕೆ ಪೊಲೀಸರಿಂದ ಪರ್ಮಿಷನ್ ಲೆಟರ್ ತಂದಿದ್ದ ಲಾಯರ್‌ ಜಗದೀಶ್‌ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಟೋಲ್‌ ವಸೂಲಿ, ಭ್ರಷ್ಟಾಚಾರ ಸೇರಿದಂತೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿರುವ ಜಗದೀಶ್‌ ಅವರು ʼಬಿಗ್‌ಬಾಸ್‌ʼಗೆ ಹೋಗಬೇಕು ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಅನೇಕರು ಮನವಿ ಮಾಡಿಕೊಂಡಿದ್ದಾರೆ.


ಒಂದು ವೇಳೆ ಲಾಯರ್‌ ಜಗದೀಶ್‌ ಅವರು ʼಬಿಗ್‌ಬಾಸ್‌ʼ ಮನೆ ಪ್ರವೇಶಿಸಿದರೆ ಇದುವರೆಗಿನ TRP ದಾಖಲೆಯೇ ಉಡೀಸ್‌ ಆಗಲಿದ್ದು, ಹೊಸ ದಾಖಲೆಯೇ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಸದಾ ಪ್ರತಿಭಟನೆ, ಹೋರಾಟ ಎಂದು ಧ್ವನಿ ಎತ್ತುವ ಲಾಯರ್‌ ಜಗದೀಶ್‌ ʼಬಿಗ್‌ಬಾಸ್‌ʼಗೆ ಉತ್ತಮ ಸ್ಪರ್ಧಿ ಎಂದು ನೆಟಿಜನ್ಸ್‌ ಅಭಿಪ್ರಾಯಟ್ಟಿದ್ದಾರೆ. ʼಬಿಗ್‌ಬಾಸ್‌ʼ ಮನೆಯೊಳಗೆ ʼವಕೀಲ್‌ ಸಾಬ್‌ʼ ಎಂಟ್ರಿಯಾದರೆ ಈ ಬಾರಿಯ ಸೀಸನ್‌ ಹೇಗಿದೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿದೆ. 


ಇದನ್ನೂ ಓದಿ: ಪಬ್ಲಿಕ್‌ನಲ್ಲೇ ಪತಿ ಜೊತೆ ಲಿಪ್‌ ಲಾಕ್‌ ಮಾಡಿದ ಖ್ಯಾತ ನಟಿ... ವೈರಲ್‌ ಆಗ್ತಿದೆ ಸೌತ್‌ ಸುಂದರಿಯ ಫೋಟೋ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.