Leena Manimekalai case : ಸೋಷಿಯಲ್‌ ಮೀಡಿಯಾದಲ್ಲಿ ಸಿಗರೇಟ್‌ ಸೇದುವ ʼಕಾಳಿʼ ಸಾಕ್ಷಾ ಚಿತ್ರದ ಪೋಸ್ಟರ್‌ ಹಂಚಿಕೊಂಡು ವಿವಾದಕ್ಕೆ ಕಾರಣವಾಗಿದ್ದ ನಿರ್ದೇಶಕಿ ಲೀನಾ ಮಣಿಮೇಘಲೈ ಅವರನ್ನು ಸುಪ್ರೀಂಕೋರ್ಟ್ ಬಂಧಿಸದಂತೆ ತಡೆಯಾಜ್ಞೆ ಜಾರಿ ಮಾಡಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಕಾಳಿ ಸಿನಿಮಾ ಪೋಸ್ಟರ್‌ ಮೂಲಕ ಲೀನಾ ಭಾರಿ ವಿವಾದ ಸೃಷ್ಟಿಸಿದ್ದರು. 


COMMERCIAL BREAK
SCROLL TO CONTINUE READING

ತಮಿಳುನಾಡು ಮೂಲದ ಸಿನಿಮಾ ನಿರ್ದೇಶಕಿ ಲೀನಾ ಮಣಿಮೇಘಲೈ ಕೆನಡಾದಲ್ಲಿ ನೆಲೆಸಿದ್ದಾರೆ. ʼಕಾಳಿʼ ಹೆಸರಿನ ಡಾಕ್ಯುಮೆಂಟರಿ ನಿರ್ದೇಶಿಸಲು ಯೋಜಿಸಿ ಸ್ವತಃ ತಾವೇ ಕಾಳಿಯಂತೆ ವೇಷ ಧರಿಸಿ, ಸಿಗರೇಟ್‌ ಸೇದುತ್ತಿರುವಂತೆ ಚಿತ್ರ ತೆಗೆಸಿಕೊಂಡಿದ್ದರು. ಈ ಪೋಸ್ಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿತ್ತು. ಅಲ್ಲದೆ, ಹಿಂದೂಗಳ ವಿರೋಧಕ್ಕೆ ಕಾರಣವಾಗಿತ್ತು. ಲೀನಾ ವಿರುದ್ಧ ದೇಶದ ಹಲವೆಡೆ ದೂರುಗಳು ಸಹ ದಾಖಲಾಗಿದ್ದವು.


ಇದನ್ನೂ ಓದಿ: Pushpa 2: ಪುಷ್ಪಾ 2 ಶೂಟಿಂಗ್‌ ಸ್ಟಾರ್ಟ್‌.. ಅಲ್ಲು ಅರ್ಜುನ್‌ ನ್ಯೂ ಲುಕ್‌ ಸೂಪರ್‌..!


ಇದೀಗ ತಮ್ಮ ಮೇಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಲೀನಾ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೆ, ಯಾರ ಭಾವನೆಗೂ ಧಕ್ಕೆ ತರುವಂತೆ ನಾನು ಕಾಳಿಯನ್ನು ಚಿತ್ರಿಸಿಲ್ಲ, ಎಲ್ಲವನ್ನೂ ಒಳಗೊಂಡಿರುವ ಅರ್ಥ ನೀಡುವಂತೆ ಕಾಳಿ ಪೋಸ್ಟರ್ ಅನ್ನು ಚಿತ್ರಿಸಿದೆʼ ಎಂದು ತಮ್ಮ ಪೋಸ್ಟರ್‌ನ್ನು ಸಮರ್ಥಿಸಿಕೊಂಡಿದ್ದಾರೆ. ಲೀನಾ ಹೇಳಿಕೆ ನಂತರ ಸುಪ್ರೀಂಕೋರ್ಟ್ ಅವರನ್ನು ಬಂಧಿಸದಂತೆ ತಡೆಯಾಜ್ಞೆ ಜಾರಿ ಮಾಡಿದೆ.


ಕಳೆದ ವರ್ಷ ಸೋಷಿಯಲ್‌ ಮೀಡಿಯಾದಲ್ಲಿ ಕಾಳಿ ಪೋಸ್ಟ್‌ ಹಂಚಿಕೊಂಡಿದ್ದ ನಿರ್ದೇಶಕಿ ಲೀನಾ, ʼನನ್ನ ಕಾಳಿ ಸ್ವತಂತ್ರ್ಯ ಚೇತನ, ಆಕೆ ಪುರುಷ ಪ್ರಧಾನ ಪ್ರಭುತ್ವ ಮತ್ತು ಬಂಡವಾಳಶಾಹಿಯನ್ನು ನಿರ್ಮೂಲನೆ ಮಾಡುವವಳು ಎಂದು ಶೀರ್ಷಿಕೆ ಬರೆದುಕೊಂಡಿದ್ದರು. ಅಲ್ಲದೆ, ಕಾಳಿ ಜನರ ಮೈಮೇಲೆ ಬರ್ತಾಳೆ, ಆಕೆ ಮಾಂಸ ತಿನ್ನುತ್ತಾಳೆ, ಗಾಂಜಾ, ಕಳ್ಳು, ಸಾರಾಯಿ ಕುಡಿಯುತ್ತಾಳೆ, ಅವರಳು ಯಾರ ಸ್ವತ್ತೂ ಅಲ್ಲ, ಆಕೆಯನ್ನು ಸ್ವಾಧೀನಪಡಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲʼ ಎಂದಿದ್ದರು.