Thalapathy vijay remuneration : ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ವಿಜಯ್ ತಮ್ಮ ಮೊದಲ ಚಿತ್ರಕ್ಕೆ ರೂ.500 ಸಂಭಾವನೆ ಪಡೆದಿದ್ದರು. ಆ ಸಿನಿಮಾದಲ್ಲಿ ಅವರು ಅವರು ಮಗುವಿನ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯ ದಳಪತಿ ನಟನೆಯ ಬಹುನಿರೀಕ್ಷಿತ ಸಿನಿಮಾ ಲಿಯೋ ಬಿಡುಗಡೆಗೆ ರೆಡಿಯಾಗಿದೆ. ಕೆಲವು ವರ್ಷಗಳ ಹಿಂದೆ ಚಿತ್ರವೊಂದಕ್ಕೆ 100 ಕೋಟಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ವಿಜಯ್‌, ಕಳೆದ 5 ವರ್ಷಗಳಲ್ಲಿ ಅವರ ಸಂಭಾವನೆ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಇದೇ ತಿಂಗಳು 19 ರಂದು ‘ಲಿಯೋ’ ರಿಲೀಸ್‌ ಆಗಲಿದೆ. ಈ ಚಿತ್ರದಲ್ಲಿ ನಟಿಸಲು ವಿಜಯ್ 120 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾ ನಂತರ ದಳಪತಿ 68ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಪ್ರಸ್ತುತ ನಟ ವಿಜಯ್ ಅವರ ಆಸ್ತಿ ಮೌಲ್ಯ 56 ಮಿಲಿಯನ್, ಅಂದ್ರೆ 445 ಕೋಟಿ ರೂ.


ಇದನ್ನೂ ಓದಿ: BBK 10: “ಇದು ಬಿಗ್ ಬಾಸ್…”: ಪ್ರತೀದಿನ ಕಾರ್ಯಕ್ರಮದಲ್ಲಿ ನೀವು ಕೇಳುತ್ತಿರುವ, ಕೇಳಿರುವ ಧ್ವನಿ ಇವರದ್ದೇ…!


ಹೌದು.. ನಟ ವಿಜಯ್ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎ.ಚಂದ್ರಶೇಖರ್ ಅವರ ಪುತ್ರ. 1984ರಲ್ಲಿ ತಂದೆಯ ‘ವೀಟಿ’ ಚಿತ್ರದಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ವಿಜಯ್‌ ನಾಯಕ ನಟನಾಗಿ ನಟಿಸಿದ ಅನೇಕ ಆರಂಭಿಕ ಚಲನಚಿತ್ರಗಳು ಸೋಲು ಕಂಡರೂ ಸಹ ಅವರ ನಟನೆ ಏನು ಎಂಬುವುದು 90 ರ ದಶಕದ ಸಿನಿ ಪ್ರೇಕ್ಷಕರಿಗೆ ತಿಳಿದಿದೆ.


ತಂದೆಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರೂ ವಿಜಯ್ ಸಿನಿಮಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. "ವಿಜಯ್ ಎಸ್.ಎ.ಚಂದ್ರಶೇಖರ್ ಅವರ ಮಗ.." ಎನ್ನುತ್ತಿದ್ದವರು "ಎಸ್.ಎ.ಚಂದ್ರಶೇಖರ್ ವಿಜಯ್ ಅವರ ತಂದೆ.." ಎನ್ನುತ್ತಿದ್ದಾರೆ. ಆ ಮಟ್ಟಿಗೆ ಅವರು ಕಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ.


ಇದನ್ನೂ ಓದಿ: ಅಕ್ಟೋಬರ್ 18 ರಂದು ಮೈಸೂರಿನಲ್ಲಿ "ಘೋಸ್ಟ್" ಚಿತ್ರಕ್ಕೆ ಶುಭಕೋರಿ ಅದ್ದೂರಿ ಮೆರವಣಿಗೆ


ನಟ ವಿಜಯ್ 1999 ರಲ್ಲಿ ಸಂಗೀತಾ ಎಂಬುವವರನ್ನು ವಿವಾಹವಾದರು. ಅವರಿಗೆ ಜೇಸನ್ ಸಂಜಯ್ ಎಂಬ ಮಗ ಮತ್ತು ದಿವ್ಯಾ ಸಾಶಾ ಎಂಬ ಮಗಳು ಇದ್ದಾರೆ. 23 ವರ್ಷದ ಜೇಸನ್ ಸಂಜಯ್ ಯುಎಸ್ ನಲ್ಲಿ ಚಲನಚಿತ್ರ ನಿರ್ದೇಶನವನ್ನು ಅಧ್ಯಯನ ಮಾಡಿದ್ದಾರೆ. ಅವರು ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ದಿವ್ಯಾ ಸಾಶಾ ಕೂಡ ಅಮೆರಿಕದಲ್ಲಿ ಓದುತ್ತಿದ್ದಾಳೆ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.