BBK 10: “ಇದು ಬಿಗ್ ಬಾಸ್…”: ಪ್ರತೀದಿನ ಕಾರ್ಯಕ್ರಮದಲ್ಲಿ ನೀವು ಕೇಳುತ್ತಿರುವ, ಕೇಳಿರುವ ಧ್ವನಿ ಇವರದ್ದೇ…!

Bigg Boss Kannada Season 10: ಕರುನಾಡಿನ ನೆಚ್ಚಿನ ರಿಯಾಲಿಟಿ ಶೋ ಈಗಾಗಲೇ ಪ್ರಾರಂಭವಾಗಿದ್ದು, ಮನೆಯ ಮೊದಲ ನಾಮಿನೇಷನ್‌, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಎಲ್ಲವೂ ಮುಗಿದಿದೆ,

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಕರುನಾಡಿನ ನೆಚ್ಚಿನ ರಿಯಾಲಿಟಿ ಶೋ ಈಗಾಗಲೇ ಪ್ರಾರಂಭವಾಗಿದ್ದು, ಮನೆಯ ಮೊದಲ ನಾಮಿನೇಷನ್‌, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಎಲ್ಲವೂ ಮುಗಿದಿದೆ, ನೂತನ ಕ್ಯಾಪ್ಟನ್ ಆಗಿ ಸ್ನೇಹಿತ್ ಆಯ್ಕೆಯಾಗಿದ್ದಾರೆ. ಇನ್ನು ಈ ಎಲ್ಲದರ ಮಧ್ಯೆ ಪ್ರತೀ ಸೀಸನ್’ನಲ್ಲಿ ಜನರಿಗೆ ಕಾಡುವ ಪ್ರಶ್ನೆಯೆಂದರೆ ‘ಬಿಗ್ ಬಾಸ್’ ಧ್ವನಿ ಯಾರದ್ದು ಎಂಬುದು…!

2 /6

ಈ ಪ್ರಶ್ನೆಗೆ ಈ ವರದಿಯ ಮೂಲಕ ನಿಮಗೆ ಉತ್ತರವನ್ನು ನಾವಿಂದು ನೀಡಲಿದ್ದೇವೆ.

3 /6

ಇವರ ಹೆಸರು ಕೇಳಿದರೆ ನಿಮಗೆ ಪರಿಚಯ ಇಲ್ಲ ಎಂದೆನಿಸಬಹುದು. ಆದ್ರೆ ಇವರು 2010ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ “ಸೀತೆ” ಧಾರಾವಾಹಿಯಲ್ಲಿ ಶ್ರೀರಾಮ ಪಾತ್ರದಲ್ಲಿ ಅಭಿನಯಿಸಿದ್ದರು. ಬೆಂಗಳೂರಿನವರೇ ಆದರೂ, ಕನ್ನಡಕ್ಕಿಂತ ಹೆಚ್ಚಾಗಿ ತಮಿಳಿನಲ್ಲಿ ಗುರುತಿಸಿಕೊಂಡಿದ್ದಾರೆ. ಅಮಿತ್‌ ಭಾರ್ಗವ್‌ ಅವರು 2013ರಲ್ಲಿ ಈಟಿವಿ ಕನ್ನಡದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 1 ಹಾಗೂ 2014 ರಲ್ಲಿ ಏಷ್ಯಾನೆಟ್‌ ಸುವರ್ಣದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 2 ಕ್ಕೆ ಧ್ವನಿ ನೀಡಿದ್ದರು.

4 /6

ಕನ್ನಡದ ಹೆಸರಾಂತ ನಟ ಬಿಎಂ ವೆಂಕಟೇಶ್‌ ಅವರು ಅನೇಕ ಸಿನಿಮಾ, ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರವಾಹಿಯಲ್ಲೂ ಝೇಂಡೆ ಪಾತ್ರ ನಿರ್ವಹಿಸಿದ್ದರು ವೆಂಕಟೇಶ್‌. ಇವರು 2015ರಲ್ಲಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ ಬಾಸ್‌ ಸೀಸನ್‌ 3ಕ್ಕೆ ಧ್ವನಿ ನೀಡಿದ್ದರು.

5 /6

ನಟ, ಮಾಡೆಲ್, ಕಂಠದಾನ ಕಲಾವಿದ ಬಡೆಕ್ಕಿಲ ಪ್ರದೀಪ್ ಅವರು ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ಟಿವಿ 9 ವಾಹಿನಿಯಲ್ಲಿ ವಾರ್ತಾ ವಾಚಕರಾಗಿ ವೃತ್ತಿ ಪ್ರಾರಂಭಿಸಿದ ಪ್ರದೀಪ್, ಬಳಿಕ ತಮಿಳು, ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ಇವರು ಬಿಗ್‌ ಬಾಸ್‌ ಶೋಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಆದರೆ ಬಿಗ್‌ ಬಾಸ್‌ ಆಗಿ ಅಲ್ಲ. ಬದಲಾಗಿ ಕಾರ್ಯಕ್ರಮದ ಕೊನೆಯಲ್ಲಿ ಬಿಗ್ ಬಾಸ್ ನೀಡುವ ಸಂದೇಶಕ್ಕೆ ಧ್ವನಿ ನೀಡುತ್ತಾರೆ.

6 /6

2016ರಿಂದ ಇದುವರೆಗೂ ಬಿಗ್‌ ಬಾಸ್‌ ಆಗಿ ಧ್ವನಿ ನೀಡುತ್ತಿರುವುದು ಶ್ರೀನಿವಾಸ್‌ ಪ್ರಸಾದ್ ಎಂಬವರು.‌ ಆದರೆ ವಾಹಿನಿ ಇವರ ಮುಖ ಪರಿಚಯ ಇನ್ನೂ ಮಾಡಿಲ್ಲ.