Leopard in serial set : ಇಂಡಸ್ಟ್ರಿಯಲ್ಲಿ ಸಿನಿಮಾ ಶೂಟಿಂಗ್ ವೇಳೆ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಅಪಘಾತಗಳೂ ಸಹ ಸಂಭವಿಸುತ್ತದೆ. ಕಿರುತೆರೆ ಧಾರಾವಾಹಿಗಳ ಶೂಟಿಂಗ್‌ ವೇಳೆ ಅಷ್ಟಾಗಿ ಘಟನೆಗಳು ಜರುಗುವುದಿಲ್ಲ. ಆದರೆ ಇತ್ತೀಚಿಗೆ ಮುಂಬೈನಲ್ಲಿ ಧಾರಾವಾಹಿ ಚಿತ್ರತಂಡಗಳು ವಿಚಿತ್ರ ಘಟನೆಗಳನ್ನು ಎದುರಿಸುತ್ತಿವೆ.


COMMERCIAL BREAK
SCROLL TO CONTINUE READING

ಹೌದು.. ಮರಾಠಿ ಸಿರೀಯಲ್‌ ಶೂಟಿಂಗ್ ಸ್ಪಾಟ್‌ಗಳಿಗೆ ಹುಲಿಗಳು, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಬರುತ್ತಿದೆ. ಇದರಿಂದ ಜೀವ ಭಯದಲ್ಲೇ ಚಿತ್ರೀಕರಣ ಮಾಡಬೇಕಾಗಿದೆ. ಇತ್ತೀಚೆಗಷ್ಟೇ ಸಿರಿಯಲ್‌ ಶೂಟಿಂಗ್ ನಡೆಯುತ್ತಿದ್ದಾಗ ದಿಢೀರನೇ ಚಿರತೆಯೊಂದು ಕಾಣಿಸಿಕೊಂಡು ಘರ್ಜಿಸಿದ ಘಟನೆ ನಡೆದಿದೆ. ಇದರಿಂದ ಹೆದರಿದ ಚಿತ್ರದಂಡ ಅಲ್ಲಿಂದ ಕಾಲ್ಕಿತ್ತಿದೆ. ಸದ್ಯ ಶೂಟಿಂಗ್ ಸ್ಪಾಟ್ ನಲ್ಲಿ ಹುಲಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. 


ಇದನ್ನೂ ಓದಿ : ಮೆಗಾ ಪ್ರಿನ್ಸ್ ವರುಣ್ ತೇಜ್ 14ನೇ ಸಿನಿಮಾಗೆ ʼಮಟ್ಕಾʼ ಟೈಟಲ್ ಫಿಕ್ಸ್..!


ಮುಂಬೈನ ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ 'ಸುಖ ಮಂಜೇ ಕೈ ಆಸ್ತಾ' ಎಂಬ ಮಾರಾಠಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಿದೆ. ಮಂಗಳವಾರ ಚಿತ್ರೀಕರಣ ಜರುಗುತ್ತಿದ್ದ ವೇಳೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ಘಟನೆ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಸೆಟ್‌ನಲ್ಲಿ ಚಿರತೆ ತನ್ನ ಮರಿಗಳೊಂದಿಗೆ ಸುತ್ತಾಡುತ್ತಿರುವುದು ದೃಶ್ಯ ಕಂಡುಬಂದಿದೆ.


ಶೂಟಿಂಗ್ ಸ್ಪಾಟ್‌ಗೆ ಚಿರತೆ ನುಗ್ಗುತ್ತಿರುವುದನ್ನು ಕಂಡು ಅಲ್ಲಿದ್ದವರೆಲ್ಲ ಭಯಭೀತರಾಗಿ ಓಡಿ ಬಂದಿದ್ದಾರೆ. ಆ ಸಮಯದಲ್ಲಿ ಸುಮಾರು 200 ಜನರು ಅಲ್ಲಿದ್ದರು. ಈ ಬಗ್ಗೆ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಶನ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೀಗ ಶೂಟಿಂಗ್ ಸ್ಪಾಟ್ ನಲ್ಲಿ ಆ ಹುಲಿ ಓಡಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 


ಇದನ್ನೂ ಓದಿ :ಮೆಗಾಸ್ಟಾರ್ 'ಭೋಲಾ ಶಂಕರ್' ಟ್ರೈಲರ್ ರಿಲೀಸ್‌..! ಚಿರು ಮಾಸ್‌ ಆಕ್ಷನ್‌ಗೆ ಫ್ಯಾನ್ಸ್‌ ಫಿದಾ


ಅರಣ್ಯ ಪ್ರಾಣಿಗಳು ಶೂಟಿಂಗ್ ಸ್ಪಾಟ್‌ಗೆ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ಹತ್ತು ದಿನಗಳಲ್ಲಿ ಚಿರತೆ ನಾಲ್ಕನೇ ಬಾರಿ ಸೆಟ್‌ಗೆ ಎಂಟ್ರಿ ಕೊಟ್ಟಿದೆ ಎನ್ನುತ್ತಾರೆ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್‌ನ ಪ್ರತಿನಿಧಿ. ಈ ಹಿಂದೆ ‘ಅಜುನಿ’ ಎಂಬ ಧಾರಾವಾಹಿಯ ಶೂಟಿಂಗ್ ನಡೆಯುತ್ತಿದ್ದಾಗ ಚಿರತೆಯೊಂದು ಬಂದಿತ್ತು ಎನ್ನಲಾಗಿದೆ.


ಅಲ್ಲದೆ, ಹಲವು ಬಾರಿ ಹೆಬ್ಬಾವುಗಳು ಸೆಟ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇಲ್ಲಿ ಶೂಟಿಂಗ್‌ಗೆ ಬರಲು ನಟರು ಹೆದರುತ್ತಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಸೂಕ್ತ ಗಮನ ಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಧಾರಾವಾಹಿ ತಯಾರಕರು ಆಗ್ರಹಿಸಿದ್ದಾರೆ. ಸದ್ಯ ಶೂಟಿಂಗ್ ಸ್ಪಾಟ್ ನಲ್ಲಿ ಚಿರತೆಯೊಂದು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.