Darshan Arrest Live Updates: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ A1, ದರ್ಶನ್‌ A2

Wed, 12 Jun 2024-10:42 pm,

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ಕೂಡ ದರ್ಶನ್ ಅವರ ಅಭಿಮಾನಿ.

Darshan Arrest Live Updates: ಪವಿತ್ರಾ ಗೌಡಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ನ್ಯಾಯಾಲಯ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರದಂತೆ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್​ ಮತ್ತು ಉಳಿದ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ಕೂಡ ದರ್ಶನ್ ಅವರ ಅಭಿಮಾನಿ. ಪವಿತ್ರಾ ಗೌಡ ಕಾರಣಕ್ಕೆ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯ ಹಾಳಾಗುತ್ತಿದೆ ಎಂದು ಸಿಟ್ಟಾಗಿದ್ದರಂತೆ. ಇದೇ ಕೋಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರಂತೆ. ಇದೇ ಕಾರಣಕ್ಕೆ ರೇಣುಕಾಸ್ವಾಮಿಗೆ ಬುದ್ಧಿಕಲಿಸಲು ಅಭಿಮಾನಿ ಬಳಗದ ನೆರವಿನಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿದ್ದರು ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Latest Updates

  • Darshan case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ A1, ದರ್ಶನ್‌ A2

    COMMERCIAL BREAK
    SCROLL TO CONTINUE READING

    ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಸ್ಪೋಟಕ ಮಾಹಿತಿಗಳನ್ನು ಹೊರತೆಗೆಯುತ್ತಿದ್ದಾರೆ. ದರ್ಶನ್, ಪವಿತ್ರಾಗೌಡ 13 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಕೊಲೆ ಪ್ರಕರಣದಲ್ಲಿ ಯಾರ್ಯಾರು ಎಷ್ಟನೇ ಆರೋಪಿಗಳನ್ನಾಗಿ ಮಾಡಲಾಗಿದೆ ಎಂಬುದು ಈ ಕೇಸಲ್ಲಿ ಪ್ರಮುಖವಾಗುತ್ತೆ. ಕೋರ್ಟ್ ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.

    A1- ಪವಿತ್ರಗೌಡ, ಬೆಂಗಳೂರು
    A2-ದರ್ಶನ್ , ಬೆಂಗಳೂರು
    A3-ಪುಟ್ಟಸ್ವಾಮಿ, ಅಕ್ಕೂರು ಗ್ರಾಮ ಚೆನ್ನಪ್ಪಟ್ಟಣ ರಾಮನಗರ
    4- ರಾಘವೇಂದ್ರ, ಕೋಳಿ ಬರ್ಜನ ಹಟ್ಟಿ ದೊಡ್ಡಪೇಟೆ, ಚಿತ್ರದುರ್ಗ
    5-ನಂದೀಶ್, ಚಾಮಲಾಪುರ ಗ್ರಾಮ ಮಂಡ್ಯ
    6-ಜಗದೀಶ@ಜಗ್ಗ
    7-ಅನು
    8-ರವಿ
    9- ರಾಜು
    10-ವಿನಯ, ಆರ್ ಆರ್ ನಗರ ಬೆಂಗಳೂರು
    11- ನಾಗರಾಜ್ ರಾಮಕೃಷ್ಣನಗರ ಮೈಸೂರು
    12-ಲಕ್ಷ್ಮಣ್, ಆರ್ ಪಿ ಸಿ ಲೇಔಟ್ ಬೆಂಗಳೂರು
    13-ದೀಪಕ್ , ಬಿಇಎಂಲೇಎಲ್ ಔಟ್ ಆರ್ ಆರ್ ನಗರ ಬೆಂಗಳೂರು
    14-ಪ್ರದೂಷ್, ಗಿರಿನಗರ ಬೆಂಗಳೂರು
    15-ಕಾರ್ತಿಕ್@ಕಪ್ಪೆ, ಗಿರಿನಗರ ಬೆಂಗಳೂರು
    16-ಕೇಶವಮೂರ್ತಿ, ಗಿರಿನಗರ ಬೆಂಗಳೂರು
    17-ನಿಖಿಲ್ ನಾಯಕ್, ಕೆಂಬತಹಳ್ಳಿ, ಬೆಂಗಳೂರು ಎಂದು ಕೋರ್ಟ್ ಗೆ ಮಾಹಿತಿ ನೀಡಲಾಗಿದೆ.  
     

  • Darshan case : ಶವ ಸಾಗಿದ್ದ ವಾಹನದಲ್ಲಿ ವಿಸ್ಕಿ ಬಾಟಲ್‌, ಲೇಡಿಸ್‌ ವ್ಯಾನಿಟಿ ಬ್ಯಾಗ್‌ ಪತ್ತೆ

    COMMERCIAL BREAK
    SCROLL TO CONTINUE READING

    ಇನ್‌ಸ್ಟಾದಲ್ಲಿ ಪವಿತ್ರಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಇನ್ನಿಲ್ಲವಾಗಿದ್ದಾನೆ. ಈ ಆರೋಪ ಹಿನ್ನೆಲೆ ನಟ ದರ್ಶನ್ ಅಂಡ್ ಟೀಂ ಅಂದರ್ ಆಗಿದ್ದಾರೆ. ಕಳೆದೆರಡು ದಿನಗಳಿಂದ ಅನ್ನಪೂರ್ಣೇಶ್ವರ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳ ಮಹಜರು ಮಾಡ್ತಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಕಿಡ್ನಾಪ್, ಕೊಲೆಗೆ  ದರ್ಶನ್ ಅಂಡ್ ಅವರ ಟೀಂ‌ ಬಳಸಿದ ನಾಲ್ಕು ವಾಹನಗಳಲ್ಲಿ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್ ನಲ್ಲಿ ಲೇಡಿಸ್ ವ್ಯಾನಿಟ್ ಬ್ಯಾಗ್ ಸಹ ಪತ್ತೆಯಾಗಿದೆ. ಆರೋಪಿ ವಿನಯ್, ಪ್ರದೋಶ್ ಹೆಸರಿನಲ್ಲಿ ನೋಂದಣಿಯಾಗಿದ್ಸ ಈ ಎರಡು ವಾಹನಗಳು ಮಾಗಡಿ ರಸ್ತೆ ಡಿಸಿಪಿ ಕಚೇರಿ ಹಿಂಬದಿ ನಿಲ್ಲಿಸಲಾಗಿದೆ. ಸ್ಕಾರ್ಪಿಯೋದಲ್ಲಿ ರೇಣುಕಾಸ್ವಾಮಿ ದೇಹ ಸಾಗಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸದ್ಯ ಈ ಸಿಸಿಟಿವಿ ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ.

  • Darshan murder case latest updates : ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಸಮ್ಮುಖದಲ್ಲಿ ಸ್ಥಳ ಮಹಜರು

    COMMERCIAL BREAK
    SCROLL TO CONTINUE READING

    ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ವಿನಯ್ ಶೆಡ್ ನಲ್ಲಿ ಪೊಲೀಸ್ರು ಮಹಜರು ನಡೆಸಿದ್ದಾರೆ. ದರ್ಶನ್, ಪವಿತ್ರಾಗೌಡ, ವಿನಯ್ ಪವನ್ ಸೇರಿದಂತೆ ಎಲ್ಲಾ ಆರೋಪಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ವಿನಯ್ ಶೆಡ್ ನಲ್ಲಿ ಸಾಕಷ್ಟು ಸೀಜಿಂಗ್ ವೆಹಿಕಲ್ ಗಳು ನಿಂತಿದ್ದು, ಈ ಹಿಂದೆ ದರ್ಶನ್ ಸಾಕಷ್ಟು ಬಾರಿ ಈ ಶೆಡ್ ಬಂದು ಹೋಗಿರೋ ಸಾಧ್ಯತೆ ಹೆಚ್ಚಿದೆ. ಅಷ್ಟೇ ಅಲ್ಲದೇ ವಿನಯ್ ಅಂಡ್ ಟೀಮ್ ಈ ಶೆಡ್ ನಲ್ಲಿ ಈ ಹಿಂದೆ ಇದೇ ರೀತಿ ಕೃತ್ಯಕ್ಕೆ ಕೈ ಹಾಕಿದ್ರಾ..? ಸೆಟಲ್ಮೆಂಟ್ ವಿಚಾರದಲ್ಲಿ ಈ ಶೆಡ್ ನಲ್ಲಿ ಯಾರಿಗಾದ್ರೂ ಹಲ್ಲೆ ನಡೆಸಿದ್ರಾ ಅನ್ನೋ ಮಾಹಿತಿಯನ್ನ ಪೊಲೀಸರು ಕೆದಕುತ್ತಿದ್ದಾರೆ. ಇನ್ನೂ ಶೆಡ್ ನಲ್ಲಿ ನಿನ್ನೆಯೇ ಸೋಕೋ ಟೀಮ್ ಮತ್ತು ಎಫ್ ಎಸ್ ಎಲ್ ಟೀಮ್ ಕೆಲ ಸಾಕ್ಷಗಳನ್ನ ಕಲೆ ಹಾಕಿದ್ದಾರೆ. ಶೆಡ್ ನಲ್ಲಿ ಸಿಕ್ಕ ಸಿಗರೇಟ್ ತುಂಡುಗಳು ಚೇರ್ ಮತ್ತ ಟೇಬಲ್ ಮೇಲಿರೋ ಫ್ರಿಂಗರ್ ಪ್ರಿಟ್. ಗೋಡೆ ಮೇಲೆ ರಕ್ತದ ಕಲೆ ಏನಾದ್ರು ಇದ್ಯಾ ಅನ್ನೋ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ್ದಾರೆ.
     

  • Darshan murder case :  ನಾಲ್ಕು ಗಂಟೆಗಳ ಕಾಲ ನಟ ದರ್ಶನ  ವಿಚಾರಣೆ

    COMMERCIAL BREAK
    SCROLL TO CONTINUE READING

     

    ನಟ ದರ್ಶನ ಹಾಗೂ ಪವಿತ್ರ ಗೌಡ ಸೇರಿ 13 ಜನರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರಿಪಡಿಸಿ ಆರು ದಿನ ಪೊಲೀಸ್ ಕಸ್ಟಡಿಗೆ ‌ಪಡೆದುಕೊಂಡಿದ್ದರು. ಇಂದು ಸಹ ಡಿಸಿಪಿ ಗಿರೀಶ್ ನಾಲ್ಕು ಗಂಟೆಗಳ ಕಾಲ ನಟ ದರ್ಶನ  ವಿಚಾರಣೆ ನಡೆಸಿದ್ದಾರೆ. ಆದರೆ ದರ್ಶನ್ ಮಾತ್ರ ನಂದೇನೂ ತಪ್ಪಿಲ್ಲ ಎಂದು ಹೇಳಿದ್ದಾರಂತೆ. ಇನ್ನೂ ನಗರ ಪೊಲೀಸ್ ಆಯುಕ್ತ ದಯಾನಂದ್ ಸಹ ವಿಚಾರಣೆ ದರ್ಶನ್ ವಿಚಾರಣೆ ನಡೆಸಿದ ಸಮಯದಲ್ಲಿ ತನಗೆ ಏನೂ ಗೊತ್ತಿಲ್ಲವೆಂಬತೆ ದರ್ಶನ್ ವರ್ತಿಸಿದ್ದಾರೆ ಎನ್ನಲಾಗಿದೆ..
     

  • Darshan-Pavithra Gowda case : ಸರೆಂಡರ್‌ ಆಗಲು 30 ಲಕ್ಷ ರೂ. ಡೀಲ್‌

    COMMERCIAL BREAK
    SCROLL TO CONTINUE READING

    ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಾಕಿಂಗ್‌ ವಿಚಾರವೊಂದು ಬಯಲಿಗೆ ಬಂದಿದೆ. ಕೊಲೆ ಬಳಿಕ ಕಾರ್ತಿಕ್‌ ಮತ್ತು ತಂಡಕ್ಕೆ ಪೊಲೀಸರಿಗೆ ಶರಣಾಗುವಂತೆ 30 ಲಕ್ಷ ರೂ. ಡೀಲ್‌ ಮಾಡಿಕೊಂಡಿದ್ದ ವಿಚಾರ ಬಯಲಾಗಿದೆ.. ಪ್ರದೋಶ್‌ಗೆ ದರ್ಶನ್‌ ಹಣ ನೀಡಿರುವ ವಿಚಾರ ಪೊಲೀಸ್‌ ತನಿಖೆ ವೇಳೆ ಹೊರ ಬಿದ್ದಿದೆ..

  • Protest In Hubballi: ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ

    COMMERCIAL BREAK
    SCROLL TO CONTINUE READING

    ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ನಟ ದರ್ಶನ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ರೇಣುಕಾ ಸ್ವಾಮಿಯ ಅಮಾನುಷ ಹತ್ಯೆಯನ್ನು ಖಂಡಿಸಿ  ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ, ರಾಜ್ಯ ಬೇಡ ಜಂಗಮ ಸಂಘಟನೆಯ ಯುವ ಘಟಕದ ಅಧ್ಯಕ್ಷರು ಹಾಗೂ ಇತ್ತೀಚೆಗೆ ಕೊಲೆಗೀಡಾಗಿದ್ದ ನೇಹಾ ತಂದೆ ನಿರಂಜನ ಹಿರೇಮಠ ನೇತೃತ್ವದಲ್ಲಿ  ಹುಬ್ಬಳ್ಳಿಯಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

  • G Parameshwar On Darshan Arrest : ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು

    COMMERCIAL BREAK
    SCROLL TO CONTINUE READING

    ನಟ ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ‌. ತನಿಖೆಯಲ್ಲಿ ಬರುವ ಅಂಶಗಳನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ‌. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.

    ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅವರ ಆಪ್ತೆ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ದರ್ಶನ್ ದೂರು ಕೊಡಬಹುದಾಗಿತ್ತು. ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಅದನ್ನು ಬಿಟ್ಟು, ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಹೊಡೆದು ಸಾಯಿಸಿದ್ದಾರೆ ಎಂಬ ಮಾಹಿತಿ ಇದೆ. ದೂರು ಕೊಟ್ಟಿದ್ದರೆ ಇದೆಲ್ಲವನ್ನು ತಡೆಯಲು ಅವಕಾಶವಿತ್ತು. ಆದರೆ, ಘಟನೆ ನಡೆದು ಹೋಗಿದೆ. ಯಾರು ಏನು ಮಾಡುವುದಕ್ಕೆ ಆಗುವುದಿಲ್ಲ. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಇಲಾಖೆ ಕೈಗೊಳ್ಳುತ್ತದೆ ಎಂದು ತಿಳಿಸಿದರು.

  • Jaggesh Tweet: ಹಿರಿಯ ನಟ ಜಗ್ಗೇಶ್‌ ಮಾರ್ಮಿಕ ಟ್ವೀಟ್‌ ! 

    COMMERCIAL BREAK
    SCROLL TO CONTINUE READING

    "ಸರ್ವ ಆತ್ಮಾನೇನಬ್ರಹ್ಮ ಸರ್ವ ಜೀವಿಯಲ್ಲಿ ದೇವರಿದ್ದಾನೆ ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!" ಹೀಗೆ ಕರ್ಮಕ್ಕೆ ತಕ್ಕ ಫಲ ಸಿಗುವುದು ಎಂಬ ಅರ್ಥ ಕೊಡುವ ಕೆಲ ಸಾಲುಗಳನ್ನ ಬರೆದು ತಮ್ಮ ಎಕ್ಸ್‌ ಖಾತೆಯಲ್ಲಿ (ಹಿಂದಿನ ಟಿಟ್ಟರ್‌) ಬರೆದು ಪೋಸ್ಟ್‌ ಮಾಡಿದ್ದಾರೆ. 

    "ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ!ಕಲಿಯುಗದಲ್ಲಿ ದೇವರು ಕಲ್ಲಲ್ಲಾ ಎಲ್ಲಾ ಕರ್ಮಕ್ಕೂ ತತಕ್ಷಣ ಫಲಿತಾಂಶ 
    ಉಂಟು! ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!" ಹೀಗೆ ಬರೆದು ನಟ ಜಗ್ಗೇಶ್‌ ಪೋಸ್ಟ್‌ ಮಾಡಿದ್ದಾರೆ. ದರ್ಶನ್‌ ಕೊಲೆ ಪ್ರಕರಣದ ಬೆನ್ನಲ್ಲೆ ಜಗ್ಗೇಶ್‌ ಇಂತಹದ್ದೊಂದು ಮಾರ್ಮಿಕ ಟ್ವೀಟ್‌ ಮಾಡಿದ್ದಾರೆ. 

     

     

  • Darshan Vijaylakshmi: ಮೊದಲ ಬಾರಿಗೆ ಬೇಸರ ಹೊರ ಹಾಕಿದ ಪತ್ನಿ ವಿಜಯಲಕ್ಷ್ಮಿ

    COMMERCIAL BREAK
    SCROLL TO CONTINUE READING

    ರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್ ಸ್ಟಾಗ್ರಾಮ್ ನಲ್ಲಿ ಡಿಪಿ ಡಿಲೀಟ್ ಮಾಡಿದ್ದಾರೆ. ದರ್ಶನ್ ರನ್ನು ಅನ್‌ಫಾಲೋ ಕೂಡ ಮಾಡಿದ್ದಾರೆ. ಯಾವ ಕಾರಣಕ್ಕೂ ಮಗನಿಗೆ ಈ ವಿಷಯ ಗೊತ್ತಾಗಬಾರದು ಅಂತ ಕ್ಲೋಸ್ ಸರ್ಕಲ್ ನಲ್ಲಿ ಹೇಳಿಕೊಂಡಿದ್ರಂತೆ. ನಿನ್ನೆಯಿಂದ ಅಳುತ್ತಾ ಕುಳಿತ್ತಿದ್ದ ವಿಜಯ ಲಕ್ಷ್ಮಿ, ಮಗನಿಗೋಸ್ಕರ ಅಷ್ಟೇ ಬದುಕುತ್ತೇನೆ ಎಂದಿದ್ದರಂತೆ. 

  • Darshan Arrect Case Live : ನಟ ದರ್ಶನ್ ಮೇಲಿನ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು

    COMMERCIAL BREAK
    SCROLL TO CONTINUE READING

    ಪವಿತ್ರಾ ಗೌಡಗೆ ಅಶ್ಲೀಲ‌ ಮೆಸೇಜ್  ಮಾಡಿದ್ದ ಅನ್ನೋ ಕಾರಣಕ್ಕೆ ದರ್ಶನ್ ಅಭಿಮಾನಿ ರಘು ರೇಣುಕಾಸ್ವಾಮಿಯನ್ನ ಸೀದಾ ಕರ್ಕೊಂಡ್ ಬಂದು ಆರ್ ಆರ್ ನಗರದ ಶೆಡ್ ಗೆ ಬಿಟ್ಟಿದ್ದರಂತೆ ಎನ್ನಲಾಗಿದೆ. ಶೆಡ್ ಗೆ ರೇಣುಕಾಸ್ವಾಮಿ ಕರ್ಕೊಂಡ್ ಬರ್ತಿದ್ದಂತೆ ಪವಿತ್ರಾ ಗೌಡ ಮತ್ತು ದರ್ಶನ್ ಇಬ್ಬರು ಬಂದಿದ್ದರಂತೆ. ಈ ವೇಳೆ ರೇಣುಕಾಸ್ವಾಮಿ ಮೇಲೆ ಪವಿತ್ರಾ ಗೌಡ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ. 

  • Pavithra Gowda : ಪವಿತ್ರಗೌಡ ಗೆ ಗುಪ್ತಾಂಗದ ಫೊಟೋ ಕಳಿಸಿದ್ದನಂತೆ ರೇಣುಕಾ ಸ್ವಾಮಿ 

    COMMERCIAL BREAK
    SCROLL TO CONTINUE READING

    ಫೆಬ್ರವರಿಯಿಂದ ಪವಿತ್ರ ಗೌಡ ಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಕಾಟ ಕೊಡಲು ಶುರು ಮಾಡಿದ್ದು, ದರ್ಶನ್ ಯಾಕೆ ನಾನು ok ನಾ ಅನ್ನೋ ಅರ್ಥದಲ್ಲಿ ಸಂದೇಶ ರವಾನೆ ಮಾಡುತ್ತಿದ್ದನಂತೆ. ಕಳೆದ ಶುಕ್ರವಾರ ರೇಣುಕಾ ಸ್ವಾಮಿ ಗುಪ್ತಾಂಗದ ಫೊಟೋ ಕಳಿಸಿದ್ದನಂತೆ ಎನ್ನಲಾಗಿದೆ.

    ಬ್ಲಾಕ್ ಮಾಡಿದ್ರೂ ಬೇರೆ ಅಕೌಂಟ್ ಗಳ ಮೂಲಕ ಅಶ್ಲೀಲ ಸಂದೇಶ ರವಾನಿಸುತ್ತಿದ್ದನಂತೆ ಎಂದು ಆರೋಪಿಸಲಾಗಿದೆ. ಇದರಿಂದ ವಿಚಲಿತಗೊಂಡ ಪವಿತ್ರ ಗೌಡ ಮನೆಗೆಲಸದ ಪವನ್ ಬಳಿ ಹೇಳಿಕೊಂಡಿದ್ದಾರೆ. ದರ್ಶನ್ ಬಳಿ ಹೇಳಬೇಡ ಅಂದಿದ್ದರೂ ಪವನ್ ಹೇಳಿದ್ದಾರೆ. ವಿಷಯ ತಿಳಿದ ದರ್ಶನ್ ಆತನನ್ನ ಕರೆಸಿ ವಾರ್ನ್‌ ಮಾಡು ಹೇಳಿದ್ದರಂತೆ ಎನ್ನಲಾಗಿದೆ. 

  • ದರ್ಶನ್‌ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ ಫೋಟೋ ಡಿಲೀಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಪತಿ ನಟ ದರ್ಶನ್ ಅವರನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಅನ್‌​ಫಾಲೋ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರ ಈ ನಡೆ ಸಾಕಷ್ಟು ದಚ್ಚು ಫ್ಯಾನ್ಸ್‌ ಆತಂಕಕ್ಕೆ ಕಾರಣವಾಗಿದೆ.

    COMMERCIAL BREAK
    SCROLL TO CONTINUE READING

     

     

  • ನಟ ದರ್ಶನ್ ಸೇರಿ 13 ಜನ ಆರೋಪಿಗಳ ಮೊಬೈಲ್ ಸೀಜ್

    COMMERCIAL BREAK
    SCROLL TO CONTINUE READING

    ಪವಿತ್ರಾ ಗೌಡ ಮತ್ತು ದರ್ಶನ್ ಸೇರಿ 13 ಜನರ ಫಿಂಗರ್ ಪ್ರಿಂಟ್ ಹಾಗೂ ಫುಟ್ ಪ್ರಿಂಟ್ ಅನ್ನು ಪೊಲೀಸರು ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್ ಗಳನ್ನ ಮ್ಯಾಚ್ ಮಾಡಲಿದ್ದಾರೆ. ಎಫ್ಎಸ್ಎಲ್ ವರದಿಗೆ ಕಳಿಸಲು ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಫುಟ್ ಮತ್ತು ಫ್ರಿಂಗರ್ ಫ್ರಿಂಟ್ ಮ್ಯಾಚ್ ಆದ್ರೆ 6 ದಿನಗಳ ನಂತರ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯೋ ಸಾಧ್ಯತೆ ಹೆಚ್ಚಾಗಿದೆ. 

  •  Darshan in Police Custody: 6 ದಿನಗಳ ಕಾಲ ಪೊಲೀಸ್​ ಕಸ್ಟಡಿ

    COMMERCIAL BREAK
    SCROLL TO CONTINUE READING

    ರೇಣುಕಾ ಸ್ವಾಮಿ ಹತ್ಯೆ ಆರೋಪದ ಮೇಲೆ ಬಂಧಿತರಾದ ನಟ ದರ್ಶನ್ ಅವರನ್ನು 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ಇವರನ್ನು ಇರಿಸಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಠಾಣೆಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link