Jai Hanuman : ಸಂಕ್ರಾಂತಿ ಹಬ್ಬದಂದು ತೆರೆಕಂಡ ʼಹನುಮಾನ್ʼ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್‌ ಪ್ರದರ್ಶನ ಕಂಡಿದೆ. ಇದಲ್ಲದೆ, ಈಗಾಗಲೇ ಈ ಚಿತ್ರ ರೂ. 100 ಕೋಟಿಗೂ ಹೆಚ್ಚು ಲಾಭ ತಂದುಕೊಟ್ಟಿದೆ. ಈ ಸಿನಿಮಾದ ಮುಂದುವರಿದ ಭಾಗವಾಗಿ ‘ಜೈ ಹನುಮಾನ್’ ಸಿನಿಮಾ ತಯಾರಾಗಲಿದೆ ಎಂದು ಈ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಹೇಳಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌ ಒಂದು ಹೊರಬಿದ್ದಿದೆ.. 


COMMERCIAL BREAK
SCROLL TO CONTINUE READING

ಹೌದು.. ʼಹನುಮಾನʼನಲ್ಲಿ ತ್ರೇತಾಯುಗದಲ್ಲಿ ಹನುಮಂತ ಶ್ರೀರಾಮನಿಗೆ ಯಾವ ಪ್ರತಿಜ್ಞೆ ಮಾಡಿದ..? ರಾಮನಿಗೆ ಮಾರುತಿ ಕೊಟ್ಟ ಭರವಸೆ ಏನೆಂಬುದನ್ನು ʼಜೈ ಹನುಮಾನ್ʼ ಚಿತ್ರದಲ್ಲಿ ಪ್ರಶಾಂತ್ ವರ್ಮ ತೋರಿಸಲಿದ್ದಾರೆ.. ಈ ವಿಚಾರ ಸಿನಿಮಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದಲ್ಲದೆ, ಜೈ ಹನುಮಾನ್ ಚಿತ್ರ 2025 ರಲ್ಲಿ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ. 


ಇದನ್ನೂ ಓದಿ:ಅನೀಶ್ ಮೀಟ್ ಚಿರು..! ʼಆರಾಮ್ ಅರವಿಂದ ಸ್ವಾಮಿʼಗೆ ಮೆಗಾಸ್ಟಾರ್ ಮೆಚ್ಚುಗೆ 


ಸಿನಿಮಾದ ಎರಡನೇ ಭಾಗ ಘೋಷಣೆಯಾದಾಗಿನಿಂದ ಈ ಸಿನಿಮಾದಲ್ಲಿ ಶ್ರೀರಾಮ ಮತ್ತು ಹನುಮಂತನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದೆ ಎಂದು ಪ್ರಶಾಂತ್ ವರ್ಮಾ ಹೇಳಿದ್ದಾರೆ. ಅಲ್ಲದೆ, ದೊಡ್ಡ ನಟರ ಸಾರಥ್ಯದಲ್ಲಿ ಈ ಚಿತ್ರ ಬಿಗ್‌ ಬಜೆಟ್‌ ವೆಚ್ಚದಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ.


ಇನ್ನು ಇತ್ತೀಚಿಗೆ ನಿರ್ದೇಶಕ ಪ್ರಶಾಂತ್‌ ವರ್ಮಾ ಸಂದರ್ಶವೊಂದರಲ್ಲಿ, ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು ನಟಿಸಿದರೆ ಚೆನ್ನಾಗಿರುತ್ತದೆ ಅಂತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಮಹೇಶ್ ಬಾಬು ಶ್ರೀರಾಮನ ಅವರತಾರದಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 


ಇದನ್ನೂ ಓದಿ:ಕಿಚ್ಚನ ಸಿನಿ ಜರ್ನಿಗೆ 28 ವರ್ಷದ ಸಂಭ್ರಮ.. ಮೊದಲ ಬಾರಿ ಕಾಮೆರಾ ಮುಂದೆ ಬಂದ ಅನುಭವ ಹಂಚಿಕೊಂಡ ಸುದೀಪ!


ಇಷ್ಟೇ ಅಲ್ಲದೆ ಹನುಮಂತನ ಪಾತ್ರವೂ ಈ ಸಿನಿಮಾದಲ್ಲಿ ಬಹು ದೊಡ್ಡದು. ಅದನ್ನು ಬಿಂಬಿಸುವ ನಟನನ್ನು ನೋಡಿ ಭಕ್ತಿ ಉಕ್ಕಿ ಬರಬೇಕು. ನಿಜ ಜೀವನದಲ್ಲೂ ಭಕ್ತಿ ಭಾವ ಇರಬೇಕು. ಹನುಮಂತನ ಪಾತ್ರದಲ್ಲಿ ಚಿರಂಜೀವಿ ನಟಿಸಿದರೆ ಚೆನ್ನಾಗಿರುತ್ತದೆ ಅಂತ ಪ್ರಶಾಂತ್‌ ವರ್ಮಾ ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ.


ಜೈ ಹನುಮಾನ್ ಸಿನಿಮಾದ ಕೆಲಸ ಒಂದು ವರ್ಷದ ಹಿಂದೆಯೇ ಶುರುವಾಗಿತ್ತು. ಈ ಸಿನಿಮಾವನ್ನು ಹೇಗೆ ಶೂಟ್ ಮಾಡಬೇಕು. ವಿಎಫ್‌ಎಕ್ಸ್ ಕೆಲಸದಂತಹ ವಿಷಯಗಳಲ್ಲಿ ಸ್ಪಷ್ಟತೆ ಇರಬೇಕು. ಮೇಲಾಗಿ ಮುಂಬರುವ ಸಿನಿಮಾಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ ಅಂತ ಸಿನಿಮಾದ ಕುರಿತು ಪ್ರಶಾಂತ್‌ ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.