Sitara Mahesh babu : ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮಗಳು ಸಿತಾರಾ ಎಲ್ಲರಿಗೂ ಚಿರಪರಿಚಿತ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಿತಾರಾ, ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡುತ್ತಾ ತನ್ನದೇ ಆದ ಐಡೆಂಟಿಟಿಯನ್ನ ಕ್ರಿಯೇಟ್‌ ಮಾಡಿಕೊಂಡಿದ್ದಾರೆ. ಮಹೇಶ್ ಅವರಂತೆಯೇ ಸಿತಾರಾ ಕೂಡ ಜಾಹೀರಾತುಗಳನ್ನು ಮಾಡಲು ಆರಂಭಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸಿತಾರಾ ಈಗಾಗಲೇ ಮಹೇಶ್ ಬಾಬು ಅವರೊಂದಿಗೆ ಅನೇಕ ಧಾರಾವಾಹಿ ಪ್ರಚಾರ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿಂಗಲ್ ಆಗಿ ಕಮರ್ಷಿಯಲ್ ಜಾಹೀರಾತನ್ನು ಮಾಡಿ ಪ್ರಸಿದ್ಧ ಆಭರಣ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದಾರೆ.


ಇದನ್ನೂ ಓದಿ: ಜಗತ್ತಿನ ಅತ್ಯಂತ ಶ್ರೀಮಂತ ನಟ ಯಾರು..? ಶಾರುಖ್, ಟಾಮ್ ಕ್ರೂಸ್ ಅಲ್ಲ.. ಯಾರು ಆ ರಿಚ್‌ ಹೀರೋ..?


ಹೌದು.. ಇತ್ತೀಚೆಗಷ್ಟೇ ಸಿತಾರಾ ಅವರ ಆಭರಣಗಳ ಜಾಹೀರಾತಿನ ಕೆಲವು ಫೋಟೋಗಳು ಬಿಡುಗಡೆಯಾಗಿವೆ. ಇದಲ್ಲದೆ, ಸಿತಾರಾ ಆಭರಣವನ್ನು ಧರಿಸಿರುವ ಫೋಟೋಗಳನ್ನು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರಚಾರ ಮಾಡಲಾಯಿತು. ಈ ಒಂದು ಜಾಹೀರಾತಿನ ಮೂಲಕ ಸಿತಾರಾ ರೆಂಜ್‌ ಚೇಂಜ್‌ ಅಗಿದ್ದು, ಅಪ್ಪನನ್ನೂ ಮೀರಿಸಿದ್ದಾರೆ ಎಂದು ಅಭಿಮಾನಿಗಳು, ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಮಹೇಶ್ ಕೂಡ ಪ್ರತಿಕ್ರಿಯಿಸಿದ್ದು, ಮಗಳನ್ನು ನೋಡಿ ಹೆಮ್ಮೆ ಪಡುತ್ತೇನೆ ಎಂದು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.


ಆದರೆ ಈಗ ಆ ಜಾಹೀರಾತಿಗೆ ಸಿತಾರಾ ತೆಗೆದುಕೊಂಡ ಸಂಭಾವನೆ ಎಷ್ಟು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಸಿನಿಮಾಗಳ ಹೊರತಾಗಿ ಜಾಹೀರಾತಿನಿಂದಲೂ ಮಹೇಶ್ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಸಿತಾರಾ ಕೂಡ ಉತ್ತಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರಿಗೆ ಸಾಕಷ್ಟು ಫಾಲೋವರ್ಸ್ ಇದ್ದಾರೆ. 


ಇದನ್ನೂ ಓದಿ: "ದೇಹ ಹಂಚಿಕೊಂಡಿದ್ದರೆ ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ"


ಸಿತಾರಾ ಕ್ರೇಜ್ ಅನ್ನು ಗಮನದಲ್ಲಿಟ್ಟುಕೊಂಡು ಸಿತಾರಾಗೆ ಇದು ಮೊದಲ ಕಮರ್ಷಿಯಲ್ ಜಾಹೀರಾತಾದರೂ, ಅವರ ಹೆಸರಿನಲ್ಲಿ ಇತ್ತೀಚಿನ ಆಭರಣ ಸಂಗ್ರಹಗಳನ್ನು ಪ್ರಚಾರ ಮಾಡುತ್ತಿದೆ, ಕಂಪನಿಯು ಈ ಜಾಹೀರಾತನ್ನು ಹೆಚ್ಚು ದಿನಗಳವರೆಗೆ ಪ್ರಚಾರ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನಲಾಗಿದೆ. ಇದಕ್ಕಾಗಿ ಸಿತಾರಾ 70 ಲಕ್ಷದಿಂದ ಸುಮಾರು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.