MahesH babu Birthday Special : ಪ್ರಿನ್ಸ್‌ ಮಹೇಶ್‌ ಬಾಬು ಅವರ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲು 'ಗುಂಟೂರು ಖಾರಂ' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಡಿಯಲ್ಲಿ ಮೂಡಿಬರಲಿದ್ದು,  ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ. 


COMMERCIAL BREAK
SCROLL TO CONTINUE READING

ಮಹೇಶ್‌ ಬಾಬು ಅವರು ಸದ್ಯ 48ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಿಂದಲೂ ಮಹೇಶ್ ಬಾಬು ಕೋಟಿಗಟ್ಟಲೇ ಸಂಪಾದಿಸುತ್ತಿದ್ದಾರೆ. ಗಳಿಸಿದ ಹಣವನ್ನೆಲ್ಲ ಉದ್ಯದಲ್ಲಿ ತೊಡಗಿಸಿ ಲಾಭ ಪಡೆಯುತ್ತಿದ್ದಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಮಹೇಶ್‌ ಬಾಬು ಅವರ ಆಸ್ತಿ ಹೆಚ್ಚುತ್ತಲೆ ಇದೆ. 


ಕಳೆದ ವರ್ಷ ಮಹೇಶ್‌ ಬಾಬು ಅವರ ತಂದೆ ಅವರನ್ನು ಅಗಲಿದರು. ತಂದೆಯಿಂದ ಪ್ರಿನ್ಸ್‌ ಗೆ ಯಾವುದೇ ಆಸ್ತಿ ಸಿಕ್ಕಿಲ್ಲ, ಕಾರಣ ಘಟ್ಟಮನೇನಿ ಕೃಷ್ಣ ತಮ್ಮ ಆಸ್ತಿಯನ್ನೆಲ್ಲಾ ಮೊಮ್ಮಕ್ಕಳ ಹೆಸರಿಗೆ ಬರೆದಿದ್ದಾರೆ ಎನ್ನಲಾಗುತ್ತಿದೆ. 


ತಂದೆಯಿಂದ ಯಾವುದೇ ಆಸ್ತಿ ಪಡೆಯದ ಮಹೇಶ್‌ ಬಾಬು ಸೂಪರ್‌ ಸ್ಟಾರ್‌ ಆಗಿ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಹೇಶ್‌ ಬಾಬು ತಮ್ಮದೇ ವಿಭಿನ್ನ ಸ್ಟೈಲ್ ಹಾಗೂ ಅಭಿನಯದಿಂದ ಅಭಿಮಾನಿಗಳ ಮನಗೆದ್ದರು.


ಇದನ್ನೂ ಓದಿ-ಮಕ್ಕಳ ಜೊತೆ ಮುದ್ದು ಮಡದಿಯ ಮುಖ ನೋಡುತ್ತ ನಿಂತ ಚಿನ್ನಾರಿ ಮುತ್ತ..! ಫೋಟೋಸ್‌


ಇನ್ನು ಮಹೇಶ್‌ ಬಾಬು ಮದುವೆಯಾಗಿದ್ದು, ಮುಂಬೈ ಮೂಲದ ನಮ್ರತಾ ಶಿರೋಡ್ಕರ್ ಕೂಡ ಶ್ರೀಮಂತರ ಮನೆಮಗಳು. ಇದರಿಂದ 2000 ಕೋಟಿ ರೂ.ವರೆಗೆ ಆಕೆಯ ಆಸ್ತಿ ಮಹೇಶ್ ಅವರ ಫ್ಯಾಮಿಲಿಗೆ ಸೇರುತ್ತದೆ ಎನ್ನಲಾಗುತ್ತಿದೆ. 


ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಮಹೇಶ್ ಬಾಬು ತೆಲುಗು ಚಿತ್ರರಂಗದ ಸ್ಟಾರ್‌ ನಟರಲ್ಲಿ ಒಬ್ಬರು. ಒಂದು ಸಿನಿಮಾಗೆ 60ರಿಂದ 70 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಇದಲ್ಲದೇ ನಟ ಮಹೇಶ್‌ ಬಾಬು ಆಸ್ಪತ್ರೆ, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಹಣ ಹೂಡಿಕೆ ಮಾಡಿದ್ದಾರೆ. 


ದೊಡ್ಡ ಮನೆ,  ದುಬಾರಿ ಕಾರುಗಳು ಮಹೇಶ್ ಬಾಬು ಬಳಿಯಿದೆ, ಹೈದರಾಬಾದ್‌ನಲ್ಲಿರುವ ಅವರ ಬಂಗಲೆಯ ಇಂದಿನ ಮೌಲ್ಯ  40 ಕೋಟಿ ರೂ. ಎನ್ನಲಾಗುತ್ತದೆ. ಹೀಗೆ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿರುವ ದೊಡ್ಡ ಬಂಗಲೆಯನ್ನು ಮಹೇಶ್‌ ಬಾಬು ಹೊಂದಿದ್ದಾರೆ ಎನ್ನಲಾಗುತ್ತಿದೆ. 


ಇನ್ನು ಇತ್ತೀಚೆಗಷ್ಟೇ ಮಹೇಶ್‌ ಬಾಬು 5.4 ಕೋಟಿ ರೇಂಜ್‌ ರೋವರ್ ಕಾರು ಖರೀದಿಸಿದ್ದರು. ಸದ್ಯ ಹಲವು ದುಬಾರಿ ಕಾರುಗಳು ಟಾಲಿವುಡ್ ಪ್ರಿನ್ಸ್ ಬಳಿಯಿದೆ.  ವರದಿ ಪ್ರಕಾರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್‌ ಬಾಬು ಬರೋಬ್ಬರಿ 13 ಸಾವಿರ ಕೋಟಿ ರೂ. ಆಸ್ತಿಯ ಒಡೆಯ ಎನ್ನಲಾಗಿದೆ. 


ಇದನ್ನೂ ಓದಿ-ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಲು ರಾಧಿಕಾ ಸಹಕಾರ ಹೇಗಿತ್ತು ಗೊತ್ತಾ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.