Namrata Shirodkar Movies : ಬಾಲಿವುಡ್ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ ನಮ್ರತಾ ಶಿರೋಡ್ಕರ್ ತೆಲುಗಿನಲ್ಲಿ ಕೇವಲ ಎರಡು ಸಿನಿಮಾ ಮಾಡಿದ್ದಾರೆ. ಅವುಗಳಲ್ಲಿ ಒಂದು ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಅಂಜಿ' ಮತ್ತು ಇನ್ನೊಂದು ಮಹೇಶ್ ಬಾಬು ಅವರ 'ವಂಶಿ'. ಶೂಟಿಂಗ್ ವೇಳೆ ಮಹೇಶ್ ಬಾಬು ಜೊತೆ ಪ್ರೀತಿ ಶುರುವಾಯ್ತು. ಐದು ವರ್ಷಗಳ ನಂತರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ ನಮ್ರತಾ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಮಹೇಶ್‌ ಬಾಬು ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುವುದರ ಜೊತೆಗೆ ಮಕ್ಕಳ ಲಾಲನೆ ಪಾಲನೆಯಲ್ಲಿ ನಮ್ರತಾ ಬ್ಯುಸಿಯಾದರು. 


COMMERCIAL BREAK
SCROLL TO CONTINUE READING

ನಮ್ರತಾ ಶಿರೋಡ್ಕರ್ 2005ರಲ್ಲಿ ಮಹೇಶ್ ಬಾಬು ಜೊತೆ ಸಪ್ತಪದಿ ತುಳಿದರು. ನಮ್ರತಾ ಮದುವೆಗೂ ಮುನ್ನ ತೆಲುಗು, ಮಲಯಾಳಂ, ಮರಾಠಿ, ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೌದು ಮಹೇಶ್‌ ಬಾಬು ಪತ್ನಿ ಕನ್ನಡದಲ್ಲೂ ನಟಿಸಿದ್ದಾರೆ ಎಂದರೆ ಅಚ್ಚರಿಯಾಗಬಹುದು. 


ಇದನ್ನೂ ಓದಿ: ದರ್ಶನ್‌ ತಂದೆ ತೂಗುದೀಪ ಶ್ರೀನಿವಾಸ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೇ? ಕೊನೆಗೂ ಬಯಲಾದ ಸತ್ಯ! 


ರವಿಚಂದ್ರನ್ ನಟಿಸಿ ಸುಬ್ರಹ್ಮಣ್ಯಂ ನಿರ್ದೇಶನ ಮಾಡಿರುವ ಚೋರ ಚಿತ್ತ ಚೋರ ಸಿನಿಮಾದಲ್ಲಿ ನಮ್ರತಾ ಅಭಿನಯಿಸಿದ್ದಾರೆ. ಈ ಸಿನಿಮಾ 1999ರಲ್ಲಿ ಬಿಡುಗಡೆ ಕಂಡಿತು. ಕನ್ನಡದಲ್ಲಿ ನಮ್ರತಾ ಮಾಡಿರುವುದು ಕೇವಲ ಒಂದೇ ಒಂದು ಸಿನಿಮಾ ಅಂದರೆ ಅದು ಚೋರ ಚಿತ್ತ ಚೋರ. 


ನಮ್ರತಾ 1993 ರಲ್ಲಿ ಮಿಸ್ ಯೂನಿವರ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ 6 ನೇ ಸ್ಥಾನವನ್ನು ಪಡೆದರು. ಅದೇ ವರ್ಷ ಅವರು ಮಿಸ್ ಇಂಡಿಯಾ ಪ್ರಶಸ್ತಿಯನ್ನು ಸಹ ಗೆದ್ದರು. ಮಹೇಶ್ ಮತ್ತು ನಮ್ರತಾ ಟಾಲಿವುಡ್‌ನ ಅತ್ಯಂತ ಸುಂದರ ಜೋಡಿಗಳಲ್ಲಿ ಒಬ್ಬರು. ಈ ಜೋಡಿಗೆ ಗೌತಮ್ ಮತ್ತು ಸಿತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ. 


ಇದನ್ನೂ ಓದಿ: Bollywood : 6 ಬಾರಿ ಮದುವೆ ಮುರಿದರೂ 7ನೇ ಬಾರಿ ಉದ್ಯಮಿ ಕೈ ಹಿಡಿದ ಖ್ಯಾತ ನಟಿ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.