ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಉದ್ದೇಶದಿಂದ ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಅವರನ್ನು ಮುಂಬೈ ಪೊಲೀಸರು ಬಾಂದ್ರಾ ಪೊಲೀಸ್ ಠಾಣೆಗೆ ಬರಲು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಂಬಂಧಪಟ್ಟ ಜನರ ಹೇಳಿಕೆಗಳನ್ನು ನಿರಂತರವಾಗಿ ದಾಖಲಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿರ್ಮಾಪಕ-ನಿರ್ದೇಶಕ ಮಹೇಶ್ ಭಟ್ ಅವರ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಮಹೇಶ್ ಭಟ್ ಅವರ ಹೇಳಿಕೆಯನ್ನು ಸೋಮವಾರ ಅಂದರೆ ಜುಲೈ 27 ರಂದು ದಾಖಲಿಸಲಾಗುತ್ತಿದೆ ಎನ್ನಲಾಗಿದೆ


ಮೂಲಗಳ ಪ್ರಕಾರ, ಬಾಂದ್ರಾ ಪೊಲೀಸ್ ಠಾಣೆ ಅಧಿಕಾರಿಗಳು ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಮಹೇಶ್ ಭಟ್ ಅವರನ್ನು ವಿಚಾರಣೆಗೆ ಕರೆಯಿಸಿದ್ದಾರೆ. ಮಹೇಶ್ ಭಟ್ ಅವರಿಗೆ ಇಂದು ಮಧ್ಯಾಹ್ನ 12 ರೊಳಗೆ ಬಾಂದ್ರಾ ಪೊಲೀಸ್ ಠಾಣೆ ತಲುಪಲು ತಿಳಿಸಲಾಗಿಟ್ಟು ಎನ್ನಲಾಗಿದೆ.


ಈ ಕುರಿತು ಕಳೆದ ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ "ಮಹೇಶ್ ಭಟ್ ಅವರ ಹೇಳಿಕೆಯನ್ನು ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ದಾಖಲಿಸಿಕೊಳ್ಳಲಾಗುವುದು. ಅಷ್ಟೇ ಅಲ್ಲ ಕಂಗನಾ ರಣಾವತ್ ಅವರನ್ನೂ ಕೂಡ ಸಿಆರ್ಪಿಸಿ ಅಡಿಯಲ್ಲಿ ಕರೆಸಲಾಗಿದೆ. ಜೊತೆಗೆ ಅಗತ್ಯವಿರುವವರನ್ನು ಕರೆಯಿಸಲಾಗುತ್ತಿದೆ" ಎಂದು ಅವರು ಹೇಳಿದ್ದರು


ಈ ಪ್ರಕರಣದಲ್ಲಿ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರನ್ನು ಕೂಡ ವಿಚಾರಣೆಗೆ ಕರೆಯಿಸಲಾಗುವುದೇ ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದ ಅವರು, "ಈಗಾಗಲೇ ಕರಣ್ ಜೋಹರ್ ಮ್ಯಾನೇಜರ್ ಅವರಿಗೆ ಬುಲಾವ್ ಕಳುಹಿಸಲಾಗಿದೆ ಹಾಗೂ ಆವಶ್ಯಕತೆ ಬಿದ್ದರೆ ಕರಣ್ ಜೋಹರ್ ಅವರಿಗೂ ಕೂಡ ಬರಮಾಡಿಕೊಳ್ಳಲಾಗುವುದು" ಎಂದಿದ್ದರು.