ನವದೆಹಲಿ : ಟಿವಿಯ ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಜನಪ್ರಿಯತೆ ಕುಸಿದಂತೆ ಕಾಣುತ್ತಿದೆ. ಹೀಗಾಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು, ಪ್ರೇಕ್ಷಕರು ಇಷ್ಟ ಪಡದ ಸೀಸನ್ ಗಳು ಕೂಡಾ ಇವೆ. ಆದರೂ , ಅನೇಕ ಪ್ರಯೋಗಗಳ ನಂತರ ಶೋ ಮತ್ತೆ ಹಳಿಗೆ ಬರುತ್ತಿತ್ತು. ಆದರೆ ಈ ಬಾರಿ ಹಾಗಾಗುತ್ತಿಲ್ಲ. ಇದು ಮೇಕರ್ಸ್ ತಲೆನೋವಿಗೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ನೀರಿನಂತೆ ಹರಿಸಲಾಗಿದೆ ಹಣ : 
ಉತ್ತಮ ಟಿಆರ್‌ಪಿ (TRP) ಬರಿಸುವ ಉದ್ದೇಶದಿಂದ ಈ ಬಾರಿ ಥೀಮ್ ಅನ್ನು ಬದಲಾಯಿಸಲಾಗಿತ್ತು. ಇದಕ್ಕಾಗಿ, ಕೋಟ್ಯಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಇಂಟಿಮೇಟ್ ದೃಶ್ಯಗಳು ಮತ್ತು ಆಕ್ಷನ್ ಎಲ್ಲವನ್ನು ಶೋನಲ್ಲಿ ತೋರಿಸಲಾಗಿತ್ತು. ಆದರು ಶೋ ಮಾತ್ರ ನಿರೀಕ್ಷಿಸಿದ ಯಶಸ್ಸು ಕಾಣುತ್ತಿಲ್ಲ. ಇನ್ನೂ ಮುಖ್ಯವಾದ ವಿಷಯ ಅಂದರೆ, ಈ ಬಾರಿ  ಸಲ್ಮಾನ್ ಖಾನ್ (Salman Khan) ಕೂಡ ತನ್ನ ಕಮಾಲ ತೋರಿಸುವಲ್ಲಿ ವಿಫಲರಾಗಿದ್ದಾರೆ. 


ಇದನ್ನೂ ಓದಿ : Video: ರಿವಿಲಿಂಗ್ ಡ್ರೆಸ್ ತೊಟ್ಟು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ Nora Fatehi, ಕಂಡು 'ಹಾಯ್ ಗರ್ಮೀ' ಎಂದ ಅಭಿಮಾನಿಗಳು


ಸುಮಾರು 500 ಕೋಟಿ ಖರ್ಚು :
ಟಿಆರ್‌ಪಿ ಲಿಸ್ಟ್ (TRP List) ಬಗ್ಗೆ ಹೇಳುವುದಾದರೆ, ಈ ಶೋ ಟಾಪ್ 8 ರೊಳಗೆ ತನ್ನ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಬಾಲಿವುಡ್ ಲೈಫ್‌ನ ವರದಿಯ ಪ್ರಕಾರ, Bigg Boss ಕಾರ್ಯಕ್ರಮದ ಟಿಆರ್‌ಪಿ ತೀವ್ರವಾಗಿ ಕುಸಿದಿದೆ. ಈಗ ಶೋವನ್ನು 2022 ರ ಮೊದಲು ಮುಗಿಸಲು ಮೇಕರ್ಸ್ ಯೋಜಿಸುತ್ತಿದ್ದಾರೆ. ಮೂರನೇ ವಾರದ ಟಿಆರ್‌ಪಿ  ನಂತರವೇ, ಕಾರ್ಯಕ್ರಮವನ್ನು ಕೊನೆಗೊಳಿಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎನ್ನಲಾಗಿದೆ. 


ಶೋ ಮೇಲೆ ಅಪಾರ ಹಣವನ್ನು ಖರ್ಚು ಮಾಡಲಾಗಿದೆ. ಶೋಗೆ ಹಾಕಲಾದ ಸೆಟಪ್‌ನಿಂದ ಹಿಡಿದು ಸಲ್ಮಾನ್ ಖಾನ್‌ ಫೀಸ್ ವರೆಗೆ   ಎಲ್ಲವನ್ನೂ ಸೇರಿಸಿದರೆ, ಸುಮಾರು 500 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಖರ್ಚು ಮಾಡಲಾಗಿದೆ. ಉತ್ತಮ ಕಂಟೆಂಟ್ ನೀಡುವ ಒತ್ತಡ ಪ್ರಯೊಬ್ಬ ಸ್ಪರ್ಧಿಯ ಮೇಲು ಇರುತ್ತದೆ. ಆದರೂ ಯಾವುದು ವರ್ಕ್ ಔಟ್ ಆದಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಮೇಕರ್ಸ್ ಅನ್ಯ ಮಾರ್ಗವಿಲ್ಲದೆ, ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. 


ಇದನ್ನೂ ಓದಿ : ಮುಂದಿನ ವರ್ಷ ಈ ದಿನಾಂಕದಂದು ಸಪ್ತಪದಿ ತುಳಿಯಲಿರುವ ರಣಬೀರ್ - ಆಲಿಯಾ ಭಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ