Bollywood Celebrities Childhood Pics: ಕೆಲವು ವಿಶೇಷ ಸಂದರ್ಭಗಳಲ್ಲಿ ಖ್ಯಾತನಾಮರು ಸಾಮಾನ್ಯವಾಗಿ ತಮ್ಮ ಥ್ರೋಬ್ಯಾಕ್ ಅಥವಾ ಬಾಲ್ಯದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇದನ್ನು ಅವರ ಅಭಿಮಾನಿಗಳು ಕೂಡ ಬಹಳ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಹಲವಾರು ಸೆಲೆಬ್ರಿಟಿಗಳು ತಮ್ಮ ಒಡಹುಟ್ಟಿದವರ ಜೊತೆ ಕೆಲವು ಬಾಲ್ಯದ ಚಿತ್ರಗಳನ್ನು ಆಗಾಗೆ ಹಂಚಿಕೊಳ್ಳುತ್ತಾರೆ. ಈಗ ನೀವು ಮೇಲೆ ನೋಡುತ್ತಿರುವ ಈ ಫೋಟೋದಲ್ಲಿ ಕಂಡುಬರುವ ಸೆಲೆಬ್ರಿಟಿಗಳನ್ನು ನೀವು ಗುರುತಿಸಬಹುದೇ.. ಬಹುಶಃ ಇದು ಸ್ವಲ್ಪ ಕಷ್ಟ.


COMMERCIAL BREAK
SCROLL TO CONTINUE READING

ಮಲೈಕಾ ಅರೋರಾ, ಅಸಂಖ್ಯಾತ ಬಾಲ್ಯದ ನೆನಪುಗಳನ್ನು ಹೊಂದಿರುವ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಕ್ರೈಂ ಪಾರ್ಟನರ್‌ ಜೊತೆ ಕಾಣಿಸಿಕೊಂಡಿದ್ದಾರೆ. ಅವರ ಸಹೋದರಿ ಅಮೃತಾ ಅರೋರಾ ಜೊತೆಗಿನ ಬಾಲ್ಯದ ಫೋಟೋಗಳನ್ನು ಮಲೈಕಾ ಶೇರ್‌ ಮಾಡಿದ್ದಾರೆ. ಮಲೈಕಾ ಮತ್ತೆ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ, ಸಹೋದರಿಯರಿಬ್ಬರೂ ಹೊಲಿಗೆ ಯಂತ್ರದ ಕೆಳಗೆ ಕುಳಿತು ಕ್ಯಾಮೆರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಎರಡನೇ ಫೋಟೋದಲ್ಲಿ, ಮಲೈಕಾ ಅಮೃತಾ ಬಿಗ್‌ ಸ್ಮೈಲ್‌ ಮಾಡುತ್ತಿದ್ದಾರೆ. ಮೂರನೇ ಚಿತ್ರವನ್ನು ನೋಡುವಾಗ, ನಿಮಗೆ ನಗು ತಡೆಯಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ: Salman Khan: ವೇದಿಕೆ ಮೇಲೆಯೇ ಶರ್ಟ್‌ ಬಿಚ್ಚಿದ ಸಲ್ಮಾನ್ ಖಾನ್.!


ಮೂರನೆಯ ಚಿತ್ರವು ಅವರ ಹದಿಹರೆಯದ ಸಮಯದ್ದಾಗಿದ್ದು, ಅದರಲ್ಲಿ ಅವರ ಕೇಶವಿನ್ಯಾಸವು ತಮಾಷೆಯಂತೆಯೇ ವಿಚಿತ್ರವಾಗಿದೆ. ಇದನ್ನು ನೋಡಿ ಬಳಕೆದಾರರಿಗೂ ನಗು ತಡೆಯಲಾಗುತ್ತಿಲ್ಲ. ಅದೇ ಸಮಯದಲ್ಲಿ, ಸ್ವತಃ ಮಲೈಕಾ ಕೂಡ ಈ ಹೇರ್ ಸ್ಟೈಲ್ ಅನ್ನು ಗೇಲಿ ಮಾಡುತ್ತಿದ್ದಾರೆ. 


 


ರಾಧಿಕಾ ಪಂಡಿತ್‌ ಅವರ Personal Photographer ಇವರೇ.! ಸಿಕ್ಕಾಪಟ್ಟೆ ಫೇಮಸ್‌ ಈ ವ್ಯಕ್ತಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.