Salman Khan: ವೇದಿಕೆ ಮೇಲೆಯೇ ಶರ್ಟ್‌ ಬಿಚ್ಚಿದ ಸಲ್ಮಾನ್ ಖಾನ್.!

Salman Khan: ಇತ್ತಿಚೆಗೆ ಸಲ್ಮಾನ್‌ ಖಾನ್‌ ಅವರ ಪವರ್‌ ಫುಲ್‌ ಎಬಿಎಸ್‌ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಇದನ್ನು ಕಂಡು ಫ್ಯಾನ್ಸ್‌ ಫಿದಾ ಆಗಿದ್ದರು. ಆದರೆ ಮತ್ತೆ ಕೆಲವರು ನೆಗೆಟಿವ್‌ ಕಾಮೆಂಟ್‌ ಮಾಡಿದ್ದರು. ಈ ಗ ಎಲ್ಲರಿಗೂ ಸಲ್ಲು ಭಾಯ್‌ ಉತ್ತರ ನೀಡಿದ್ದಾರೆ. 

Written by - Chetana Devarmani | Last Updated : Apr 11, 2023, 10:20 AM IST
  • ವೇದಿಕೆ ಮೇಲೆಯೇ ಶರ್ಟ್‌ ಬಿಚ್ಚಿದ ಸಲ್ಮಾನ್ ಖಾನ್
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
  • ಸಲ್ಮಾನ್‌ ಖಾನ್‌ ಎಬಿಎಸ್‌ ಕಂಡು ಬೆರಗಾದ ಫ್ಯಾನ್ಸ್‌
Salman Khan: ವೇದಿಕೆ ಮೇಲೆಯೇ ಶರ್ಟ್‌ ಬಿಚ್ಚಿದ ಸಲ್ಮಾನ್ ಖಾನ್.!   title=
Salman khan

ಮುಂಬೈ : ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಆಕ್ಷನ್ ಎಂಟರ್‌ಟೈನರ್ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ನ ಬಹು ನಿರೀಕ್ಷಿತ ಟ್ರೈಲರ್ ಅನ್ನು ಸೋಮವಾರ ಅನಾವರಣಗೊಳಿಸಿದ್ದಾರೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಸಲ್ಮಾನ್ ಅವರು ತಮ್ಮ ವಾಶ್‌ಬೋರ್ಡ್ ಎಬಿಎಸ್ ಅನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ ಎಲ್ಲಾ ಸಾಮಾಜಿಕ ಮಾಧ್ಯಮ ಟ್ರೋಲ್‌ಗಳಿಗೆ ಮುಖ ಹೊಡೆದಂತೆ ಉತ್ತರಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸಿದರು.

ಈವೆಂಟ್‌ನ ಹಲವಾರು ವಿಡಿಯೋಗಳು ಪ್ರಸ್ತುತ ವೈರಲ್ ಆಗುತ್ತಿವೆ, ಇದರಲ್ಲಿ 'ದಬಾಂಗ್' ನಟ ತನ್ನ ಕಪ್ಪು ಶರ್ಟ್ ಅನ್ನು ಬಿಚ್ಚಿ, ಪ್ರೇಕ್ಷಕರಿಗೆ ತನ್ನ ಎಬಿಎಸ್ ಅನ್ನು ತೋರಿಸುವುದನ್ನು ಕಾಣಬಹುದು. ಈ ಹಿಂದೆ, ಸಲ್ಮಾನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್‌ ಆದರು. ಏಕೆಂದರೆ ಕೆಲವು ಬಳಕೆದಾರರು 57 ವರ್ಷ ವಯಸ್ಸಿನ ನಟನ ಮೈಕಟ್ಟು ವಿಷುಯಲ್ ಎಫೆಕ್ಟ್‌ಗಳ (ವಿಎಫ್‌ಎಕ್ಸ್) ಪರಿಣಾಮವಾಗಿದೆ ಮತ್ತು ಜಿಮ್ ಅಲ್ಲ ಎಂದು ಕಾಮೆಂಟ್ ಮಾಡಿದ್ದರು.

ಇದನ್ನೂ ಓದಿ: ರಣಬೀರ್ ಕಪೂರ್ ನರಕಕ್ಕೆ ಹೋಗಲಿ ಎಂದು ಉರ್ಫಿ ಹೇಳಿದ್ದೇಕೆ?

ವಿಡಿಯೋಗದಲ್ಲಿ, "ತುಮ್ಹಾರೆ ಕೊ ಲಗ್ತಾ ಹೈ ವಿಎಫ್‌ಎಕ್ಸ್ ಸೆ ಹೋತಾ ಹೇ (ಇದನ್ನು ವಿಎಫ್‌ಎಕ್ಸ್ ಮೂಲಕ ಮಾಡಲಾಗುತ್ತದೆ ಎಂದು ನೀವು ಭಾವಿಸುತ್ತೀರಿ)" ಎನ್ನುತ್ತಾ ಶರ್ಟ್‌ ಬಿಚ್ಚು ಎಬಿಎಸ್‌ ತೋರಿಸಿದ್ದಾರೆ. ವಿಡಿಯೋ ವೈರಲ್ ಆದ ಕೂಡಲೇ, ಅಭಿಮಾನಿಗಳು ಹೃದಯಗಳು ಮತ್ತು ಫೈರ್ ಎಮೋಟಿಕಾನ್‌ಗಳೊಂದಿಗೆ ಕಾಮೆಂಟ್ ಮಾಡುತ್ತಿದ್ದಾರೆ. 

 

 

ಫರ್ಹಾದ್ ಸಾಮ್ಜಿ ನಿರ್ದೇಶನದ 'ಕಿಸಿ ಕಾ ಭಾಯಿ ಕಿಸಿ ಕಿ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಏಪ್ರಿಲ್ 21, 2023 ರಂದು ಚಿತ್ರಮಂದಿರಗಳಿಗೆ ಬರಲು ಸಿನಿಮಾ ಸಿದ್ಧವಾಗಿದೆ.

ಇದನ್ನೂ ಓದಿ: Bollywood: ಒಬ್ಬರ ಜೊತೆ ಡೇಟಿಂಗ್ ಮಾಡಿ, ಮತ್ತೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್’ನ ನಟಿಯರಿವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News