Malaika Arora-Arjun Kapoor Breakup News : 12 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿರುವ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ 2019ರಲ್ಲಿ ಅಧಿಕೃತವಾಗಿ ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಇಲ್ಲಿಂದ ಮಲೈಕಾ ಅರೋರಾ-ಅರ್ಜುನ್ ಕಪೂರ್ ಅವರ ರಿಲೇಶನ್‌ಶಿಪ್‌ ಬಗ್ಗೆ ಒಂದಿಲ್ಲ ಒಂದು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. 


COMMERCIAL BREAK
SCROLL TO CONTINUE READING

ಆದರೆ ಇದೀಗ ಬಾಲಿವುಡ್ ಅಂಗಳದಲ್ಲಿ ಮತ್ತೊಮ್ಮೆ ಇವರಿಬ್ಬರ ಬ್ರೇಕಪ್ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಈ ಸುದ್ದಿ ನಿಜವೇ? ಅನ್ನೋದನ್ನು ತಿಳಿಯಲು ಮುಂದೆ ಓದಿ. 


ಬಾಲಿವುಡ್‌ ಬ್ಯೂಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಡೇಟಿಂಗ್‌ ಮಾಡುತ್ತಿರುವ ವಿಷಯವನ್ನು ತಾವೇ ಹೇಳಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಒಬ್ಬರಿಗೊಬ್ಬರು ಅನ್ಯುನ್ಯವಾಗಿದ್ದರು. ಆಗಾಗ್ಗೆ ಇಬ್ಬರು ಜೊತೆ ಇರುವ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. 


ಇದನ್ನೂ ಓದಿ-ಸನ್ನಿ ಡಿಯೋಲ್‌ ಪಾಕಿಸ್ತಾನಕ್ಕೆ ಕಾಲಿಟ್ರೆ ಸುಮ್ನೆ ಬಿಡ್ತೀವಾ? ಗದರ್‌ 2 ನೋಡಿದ ಪಾಕ್‌ ಜನರ ಪ್ರತಿಕ್ರಿಯೆ ಹೇಗಿತ್ತು ನೋಡಿ!


ಸದ್ಯ ಬಾಲಿವುಡ್‌ನಲ್ಲಿ ಇವರಿಬ್ಬರ ಬ್ರೇಕಪ್ ಸುದ್ದಿ ಓಡಾಡುತ್ತಿದೆ. ಹೌದು ಇತ್ತೀಚೆಗೆ ಅರ್ಜುನ್ ಕಪೂರ್ ಒಂಟಿಯಾಗಿ ಪ್ರವಾಸ ಮಾಡಿದ್ದು, ಆ ಫೋಟೊವನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೇ ಮಲೈಕಾ ಅರೋರಾ ಕೂಡ ಎಪಿ ಧಿಲ್ಲೋನ್ ಪಾರ್ಟಿಗೆ ಒಂಟಿಯಾಗಿ ಹೋಗಿದ್ದರು. ಸದ್ಯ ಇವೇ ಪೋಟೋಗಳು ಅವರಿಬ್ಬರ ಬ್ರೇಕಪ್‌ ಆಗಿದೆ ಎನ್ನುವ ವದಂತಿಗೆ ಕಾರಣವಾಗಿವೆ. 


ಇನ್ನು ಕೆಲವು ಮೂಲಗಳ ಪ್ರಕಾರ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಒಟ್ಟಿಗೆ ಇದ್ದಾರೆ, ಬ್ರೇಕಪ್‌ ವಿಚಾರವೆಲ್ಲವೂ ಸುಳ್ಳು ಎನ್ನಲಾಗುತ್ತಿದೆ. ಅಲ್ಲದೇ ಆ ಪೋಟೋಗಳಿಗೆ ನೆಟ್ಟಿಗರು 12 ವರ್ಷಗಳ ಗ್ಯಾಪ್ ಇರುವ ಜೋಡಿ ಹೆಚ್ಚು ದಿನ ಒಟ್ಟಿಗೆ ಇರಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. 


ಇದನ್ನೂ ಓದಿ-ಮಗಳ ಜೊತೆ ಶ್ರೇಯಾ ಫೋಟೋ ಶೂಟ್..! ಕ್ಯೂಟ್‌ ಎಂದ ಫ್ಯಾನ್ಸ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.