ಸನ್ನಿ ಡಿಯೋಲ್‌ ಪಾಕಿಸ್ತಾನಕ್ಕೆ ಕಾಲಿಟ್ರೆ ಸುಮ್ನೆ ಬಿಡ್ತೀವಾ? ಗದರ್‌ 2 ನೋಡಿದ ಪಾಕ್‌ ಜನರ ಪ್ರತಿಕ್ರಿಯೆ ಹೇಗಿತ್ತು ನೋಡಿ!

Pakistanis Reaction to Gadar 2 film : ಗದರ್‌ ಪಾರ್ಟ್‌ 2 ಸಿನಿಮಾದಿಂದ ಸನ್ನಿಡಿಯೋಲ್‌ ಗೆದ್ದು ಬೀಗುತ್ತಿದ್ದಾರೆ. ಸದ್ಯ ಭಾಕ್ಸಾಫೀಸ್‌ನಲ್ಲಿ ಸಿನಿಮಾ 300 ಕೋಟಿ ಗಳಿಕೆಮಾಡಿ ಕಮಾಲ್‌ ಮಾಡುತ್ತಿದೆ. ಇನ್ನು ಈ ನಡುವೆ ಗದರ್‌ ಸಿನಿಮಾ ವೀಕ್ಷಿಸಿದ ಪಾಕ್‌ ಮಂದಿಯೂ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಏನಾಗಿತ್ತು ಅವರ ರಿಯಾಕ್ಷನ್‌ ಎನ್ನುವುದರ ಮಾಹಿತಿ ಇಲ್ಲಿದೆ.   

Written by - Savita M B | Last Updated : Aug 19, 2023, 05:42 PM IST
  • ಸನ್ನಿಡಿಯೋಲ್‌ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾ ಗದರ್‌ 2
  • ಸದ್ಯ ಈ ಸಿನಿಮಾ ಪ್ರೇಕ್ಷಕರಿಂದಲೂ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿದೆ.
  • ಪಾಕ್‌ ಮಂದಿ ಗದರ್‌ 2 ಸಿನಿಮಾ ಮತ್ತು ಸನ್ನಿ ಡಿಯೋಲ್‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ
ಸನ್ನಿ ಡಿಯೋಲ್‌ ಪಾಕಿಸ್ತಾನಕ್ಕೆ ಕಾಲಿಟ್ರೆ ಸುಮ್ನೆ ಬಿಡ್ತೀವಾ? ಗದರ್‌ 2 ನೋಡಿದ ಪಾಕ್‌ ಜನರ ಪ್ರತಿಕ್ರಿಯೆ ಹೇಗಿತ್ತು ನೋಡಿ!  title=

Gadar 2 Review : ಸನ್ನಿಡಿಯೋಲ್‌ ಮತ್ತೆ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾ ಗದರ್‌ 2 ಬಾಕ್ಸಾಫೀಸ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಸದ್ಯ ಈ ಸಿನಿಮಾ ಪ್ರೇಕ್ಷಕರಿಂದಲೂ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿದೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಇಲ್ಲಿಯವರೆಗೂ 300 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಕಮಾಯಿ ಮಾಡಿದೆ. 

ಹೀಗೆ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಸಿನಿಮಾದ ಬಗ್ಗೆ ಪಾಕ್‌ ಮಂದಿಯೂ ಮಾತನಾಡಿದ್ದಾರೆ. ಪಾಕಿಸ್ತಾನದ ಜನರನ್ನು ಕೆಟ್ಟದಾಗಿ ತೋರಿಸಿದ್ದಕ್ಕೆ ಸನ್ನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹಾಗಾದರೆ ಈ ಪಾಕ್‌ ಜನ ಈ ಸಿನಿಮಾವನ್ನು ವಿರೋಧ ಮಾಡುತ್ತಿರುವುದೇಕೆ? 

ಹೌದು ಈ ಗದರ್‌ ಸಿನಿಮಾದಲ್ಲಿ 1971ರ ಕಾಲಘಟ್ಟವನ್ನು ತೆರೆಮೇಲೆ ತರಲಾಗಿದೆ. ಆ ಸಮಯದಲ್ಲಿ ನಡೆದ ಇಂಡೋ ಪಾಕ್‌ ಯುದ್ಧದ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಕೆಲವು ದೃಶ್ಯಗಳಲ್ಲಿ ಪಾಕಿಸ್ತಾನಿಯರನ್ನು ಕಥಾನಾಯಕ ಹೊಡೆಯುತ್ತಾನೆ. ಸದ್ಯ ಇದೇ ದೃಶ್ಯಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿವೆ. 

ಇದನ್ನೂ ಓದಿ-Darshan: ಲ್ಯಾಂಬೋರ್ಗಿನಿ ಬಿಟ್ಟು ಪುಟ್ಟ ನ್ಯಾನೋ ಕಾರ್ ಏರಿದ ಒಡೆಯ: ವಿಡಿಯೋ ವೈರಲ್

ಇನ್ನು ಈ ವಿಡಿಯೋಗಳನ್ನು ನೋಡಿರುವ ಪಾಕ್‌ ಮಂದಿ ಗದರ್‌ 2 ಸಿನಿಮಾ ಮತ್ತು ಸನ್ನಿ ಡಿಯೋಲ್‌ ಮೇಲೆ ಗರಂ ಆಗಿದ್ದಾರೆ. ಅಲ್ಲಿನ ಪತ್ರಕರ್ತನೊಬ್ಬ ಗದರ್‌ ಸಿನಿಮಾ ವಿಡಿಯೋ ತೋರಿಸಿ ಪ್ರತಿಕ್ರಿಯೆ ಪಡೆದಿದ್ದಾರೆ. ಹಾಗಾದರೆ ಹೇಗಿವೆ ಪ್ರತಿಕ್ರಿಯೆಗಳು ನೋಡಿ...

*ಎಲ್ಲಾ ವಿಷಯಗಳನ್ನು ಸಿನಿಮಾದಲ್ಲಿ ತೋರಿಸುವದು ದೊಡ್ಡದಲ್ಲ....ಅವನು ಒಮ್ಮೆ ಪಾಕಿಸ್ತಾನಕ್ಕೆ ಬರಲಿ ..ಮುಂದೆ ಏನಾಗುತ್ತದೆ ಎನ್ನುವುದನ್ನು ಅವನೇ ನೋಡಲಿ...ಇಲ್ಲಿನ ಪ್ರತಿ ಮಗುವು ಎಷ್ಟು ಧೈರ್ಯಶಾಲಿ ಎಂದು ಅವನಿಗಿನ್ನೂ ತಿಳಿದಿಲ್ಲ. ಅದನ್ನು ನಾವು ತೋರಿಸುತ್ತೇವೆ. 
*ಸನ್ನಿ ಇಲ್ಲಿಗೆ ಬಂದ್ರೆ ಅವನಿಗೆ ನಮ್ಮ ಕೈ ಮಾತ್ರ ಸಾಕು...̇
*ಅವನ ಆಟ ಅಲ್ಲಿ ಮಾತ್ರ ಇಲ್ಲಿ ನಡೆಯಲ್ಲ. ಇಲ್ಲಿ ಬಂದರೆ ಅವನನ್ನು ಮುಗಿಸಿಯೇ ಬಿಡುತ್ತೇವೆ. 
*ಸನ್ನಿಯನ್ನು ಪಾಕಿಸ್ತಾನಕ್ಕೆ ಕರೆಸಿ ಶಕ್ತಿ ಪ್ರದರ್ಶನ ಮಾಡಬೇಕು..ನಮ್ಮ ನಿತ್ಯದ ಕೆಲಸಗಳನ್ನು ಮಾಡಿಸಬೇಕು. ಹೀಗೆ ಮಾತನಾಡಿದ್ದಾರೆ. 

ಇದನ್ನೂ ಓದಿ-ʼಲಡಾಖ್ʼನಲ್ಲಿ ರಾಹುಲ್ ಗಾಂಧಿ ಬೈಕ್ ರೈಡ್‌..! ಫೋಟೋಸ್‌ ವೈರಲ್‌

Trending News