ನವದೆಹಲಿ: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಅಪರ್ಣಾ ದಾಸ್ ಮತ್ತು ʼಮಂಜುಮ್ಮೇಲ್ ಬಾಯ್ಸ್ʼ ಖ್ಯಾತಿಯ ನಟ ದೀಪಕ್ ಪರಂಬೋಲ್ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಈ ಜೋಡಿಯ ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. 


COMMERCIAL BREAK
SCROLL TO CONTINUE READING

ಹಲವು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿತ್ತು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಸಮಾರಂಭ ಮಾಡಿಕೊಂಡು ಅಧಿಕೃತವಾಗಿ ತಮ್ಮ ಪ್ರೀತಿಯ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಈ ಲವ್ ಬರ್ಡ್ಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.


ಇದನ್ನೂ ಓದಿ: Richest Actress: 10 ಸಾವಿರ ಸೀರೆ, 1250 ಕೆಜಿ ಬೆಳ್ಳಿ, 28 ಕೆಜಿ ಚಿನ್ನ.. ಈಕೆ ದೇಶದ ಶ್ರೀಮಂತ ನಟಿ, ಕನ್ನಡದ ಬೆಡಗಿ ಯಾರು ಗೊತ್ತಾ!


ಅಪರ್ಣಾ ದಾಸ್ ಮತ್ತು ದೀಪಕ್ ಪರಂಬೋಲ್ ಜೋಡಿ ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಡಕಂಚೇರಿಯ ದೇವಸ್ಥಾನದಲ್ಲಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ವಿವಾಹ ನೆರವೇರಿತು. ಅವರ ಮದುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


ನಟ ದೀಪಕ್ ಪರಂಬೋಲ್ ʼಮಲರ್ವಾಡಿ ಆರ್ಟ್ಸ್ ಕ್ಲಬ್ʼ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅವರ ʼಮಂಜುಮ್ಮೆಲ್ ಬಾಯ್ಸ್ʼ ಚಿತ್ರವು ಬಾಕ್ಸಾಆಫೀಸ್‌ನಲ್ಲಿ ಸಖತ್‌ ಸೌಂಡ್‌ ಮಾಡಿತ್ತು. 100 ಕೋಟಿ ಕ್ಲಬ್‌ ಸೇರುವ ಮೂಲಕ ಗಮನ ಸೆಳೆದಿದೆ. ದೀಪಕ್ ಸದ್ಯ ʼವರಶಂ ಪರಿʼ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.


ಇದನ್ನೂ ಓದಿ: Rajkumar Birthday: ರಾಜ್‌ ಕುಮಾರ್‌ 5 ಮಕ್ಕಳು.. 11 ಮೊಮ್ಮಕ್ಕಳು ಹೇಗಿದ್ದಾರೆ ನೋಡಿದ್ದೀರಾ? ಪುತ್ರರಂತೆ ಅಳಿಯ ಸಹ ಫೇಮಸ್‌ ನಟ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.