Actress Piya death : ಮಲಯಾಳಂನ ಸೆಮ್ಮುತ್ತು ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಕೇವಲ 35 ವರ್ಷ. ಮೆಡಿಸಿನ್ ಓದಿದ್ದರೂ ನಟನೆಯ ಮೇಲಿನ ಆಸಕ್ತಿಯಿಂದ ಧಾರಾವಾಹಿ, ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರು. ಸಧ್ಯ ನಟಿಯ ಸಾವು ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ. 


COMMERCIAL BREAK
SCROLL TO CONTINUE READING

ಅವರ ನಿಧನದ ಸುದ್ದಿಯನ್ನು ನಟ ಕಿಶೋರ್ ಸತ್ಯ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಖಚಿತಪಡಿಸಿದ್ದಾರೆ. ನಟಿ ಪ್ರಿಯಾ ಸಾವನ್ನಪ್ಪಿದ ತಕ್ಷಣ ಮಗುವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿತ್ತು. ಸದ್ಯ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಿಯಾ ಅವರಿಗೆ ಇದುವರೆಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ವರದಿಯಾಗಿದ್ದು, ನಿತ್ಯ ತಪಾಸಣೆಗೆಂದು ಆಸ್ಪತ್ರೆಗೆ ಹೋದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಪ್ರಿಯಾ ಸಾವಿನ ನಂತರ ಆಕೆಯ ಪತಿ ಮತ್ತು ತಾಯಿ ಕಂಗಾಲಾಗಿದ್ದಾರೆ ಎಂದು ಕಿಶೋರ್‌ ಮಾಹಿತಿ ನೀಡಿದ್ದಾರೆ. 


ಇದನ್ನೂ ಓದಿ: ವರ ಹಣ, ಸಿಗರೇಟ್‌ ಕೊಟ್ರಷ್ಟೇ ವಧು ಜೊತೆ ಮದುವೆ..! ಹಿಗೋಂದು ವಿಚಿತ್ರ ಸಂಪ್ರದಾಯ


ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ನಟ ಕಿಶೋರ್ ಸತ್ಯ, 'ಪ್ರಿಯಾ ಅವರ ತಾಯಿ ಮತ್ತು ಪತಿ ಈ ಘಟನೆಯಿಂದ ಹೇಗೆ ಚೇತರಿಸಿಕೊಳ್ಳುತ್ತಾರೆ ಎಂದು ನನಗೆ ತಿಳಿದಿಲ್ಲ. 35 ಸಾಯುವ ವಯಸ್ಸು ಅಲ್ಲ. ನನ್ನಲ್ಲಿ ಅನೇಕ ಉತ್ತರವಿಲ್ಲದ ಪ್ರಶ್ನೆಗಳಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಈ ಪೋಸ್ಟ್ ಅವರ ಅಭಿಮಾನಿಗಳು ಕಾಮೆಂಟ್‌ ಮೂಲಕ ಕಂಬನಿ ಮಿಡಿದಿದ್ದಾರೆ.


ಪ್ರಿಯಾ ಮದುವೆಯ ನಂತರ ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲ. 8 ತಿಂಗಳ ಹಿಂದೆ ಗರ್ಭಿಣಿಯಾಗಿದ್ದ ಅವರು ನಿಯಮಿತವಾಗಿ ವೈದ್ಯಕೀಯ ತಪಾಸಣೆ ಒಳಗಾಗುತ್ತಿದ್ದರು. ಆದರೆ ದಿಢೀರ್ ಹೃದಯಾಘಾತಕ್ಕೆ ಒಳಗಾಗಿದ್ದು, ಆಶ್ಚರ್ಯ ಉಂಟಾಗಿದೆ. ಅಲ್ಲದೆ, ವೈದ್ಯರಿಂದ ಇನ್ನೂ ಯಾವುದೇ ಸ್ಪಷ್ಟಣೆ ದೊರೆತಿಲ್ಲ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.