'ದಿ ಕಾಶ್ಮೀರ್ ಫೈಲ್ಸ್' (The Kashmir Files) ಸಿನಿಮಾವು ದೇಶಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತಾದ ಕಥೆಯನ್ನು ಹೊಂದಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನ ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  KGF2 vs Beast: ಬಾಕ್ಸಾಫೀಸ್ ಕಾಳಗ.. 'ಕೆಜಿಎಫ್ 2' ಚಿತ್ರಕ್ಕೆ ಸವಾಲೆಸೆಯಲು ಸಜ್ಜಾದ 'ಬೀಸ್ಟ್'!


ಪಾಂಡವಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿರುವ ಕೋಕಿಲ ಚಿತ್ರಮಂದಿರದಲ್ಲಿ (Kokila Theatre) 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು ಅಭಿಮಾನಿಯೊಬ್ಬ ಏಕಾಂಗಿಯಾಗಿ ಹತ್ತು ಪ್ರವೇಶದ ಹಣ ಪಾವತಿಸಿ, ಹತ್ತು ಟಿಕೇಟ್ ಪಡೆದುಕೊಂಡು ನೋಡಿದ್ದಾರೆ.


ಭಾರತದ ಮೇಲಿನ ಅಭಿಮಾನದಿಂದ ಒಬ್ಬರೇ ಚಿತ್ರ ವೀಕ್ಷಿಸಿದ ಅಪರೂಪದ ಪ್ರಸಂಗ ನಡೆದಿದೆ. ಭಾರತ ದೇಶದ ಇತಿಹಾಸವನ್ನು ತಿಳಿದುಕೊಳ್ಳುವ ಉದ್ದೇಶದಿಂದ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು ವೀಕ್ಷಿಸಲು ಪಾಂಡವಪುರ ಟೌನ್ ಹಾರೋಹಳ್ಳಿ ಗ್ರಾಮದ ನಿವಾಸಿ ಡೈಮೆಂಡ್ ರವಿ ಎಂಬುವರು ಪಾಂಡವಪುರ ಕೋಕಿಲ ಚಿತ್ರಮಂದಿರಕ್ಕೆ ತೆರಳಿ, ಚಲನಚಿತ್ರ ವೀಕ್ಷಿಸಿದ್ದಾರೆ.


ಫಿಲ್ಮ್‌ (Film) ನೋಡಲು ಯಾರೂ ಬಂದಿಲ್ಲ. ಚಲನಚಿತ್ರ ಪ್ರದರ್ಶನ ಇಲ್ಲ. ನೀವೊಬ್ಬರೇ ಬಂದಿರೋದು ಎಂದು ಚಿತ್ರಮಂದಿರದವರು ಹೇಳಿದ್ದಾರೆ. ಆಗ ನಾನು ಈ ಚಿತ್ರ ನೋಡಲೇಬೇಕು, ಹತ್ತು ಟಿಕೇಟ್ ನಾನೊಬ್ಬನೇ ಖರೀದಿಸುತ್ತೇನೆ. ಟಿಕೇಟ್ ಕೊಡಿ ಎಂದು ಹೇಳಿ, ಹತ್ತು ಟಿಕೇಟ್ ಅನ್ನು ಒಬ್ಬರೇ ಖರೀದಿಸಿ, ಚಿತ್ರಮಂದಿರದ ಒಳಗೆ ಏಕಾಂಗಿಯಾಗಿ ಕುಳಿತು ಚಿತ್ರ ವೀಕ್ಷಿಸಿದ್ದಾರೆ. 


ಇದನ್ನೂ ಓದಿ:  Mysore University Convocation: ಪಾರ್ವತಮ್ಮ & ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ 2 ಚಿನ್ನದ ಪದಕ ಘೋಷಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.