Kannappa Movie : ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್‌ ಬಾಬು ಅವರ ಪುತ್ರ ಮಂಚು ವಿಷ್ಣು ನಟನೆಯ ಕಣ್ಣಪ್ಪ ಸಿನಿಮಾ ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಕಣ್ಣಪ್ಪ ಸಿನಿಮಾ, ಶಿವ ಭಕ್ತ ಬೇಡರ ಕಣ್ಣಪ್ಪನ ಜೀವನ ಚರಿತ್ರೆ ಆಧಾರಿತ ಚಿತ್ರವಾಗಿದೆ. ಇಂದು ವಿಷ್ಣು ಹುಟ್ಟು ಹಬ್ಬದ ಪ್ರಯುಕ್ತ ಕಣ್ಣಪ್ಪ ಸಿನಿಮಾದ ಪೊಸ್ಟರ್‌ ರಿಲೀಸ್‌ ಆಗಿದ್ದು, ಸಂಚಲನ ಸೃಷಿಸುತ್ತಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಮಾ (Movie Artists Association) ಚುನಾವಣೆ ಮೂಲಕ ವಿಷ್ಣು ಸುದ್ದಿಯಲ್ಲಿದ್ದರು. ಇದೀಗ ಬಿಗ್ ಬಜೆಟ್ ಸಿನಿಮಾ ಕಣ್ಣಪ್ಪ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಇದು ಮಂಚು ವಿಷ್ಣು ಮತ್ತು ಮೋಹನ್ ಬಾಬು ಅವರ ಕನಸಿನ ಯೋಜನೆಯಾಗಿದ್ದು, ಈ ಪ್ರಾಜೆಕ್ಟ್ ಘೋಷಣೆಯಾದಾಗಿನಿಂದಲೂ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗುತ್ತಿವೆ. 


ಇದನ್ನೂ ಓದಿ:BBK 10: ʼಸಂಗೀತಾ ಅವಕಾಶವಾದಿ, ಸಮಯ ಸಾಧಕಿʼ:ದೊಡ್ಮನೆಯಲ್ಲಿ ಗುಡುಗಿದ ಮೈಕಲ್!


ಅಷ್ಟೇ ಅಲ್ಲದೆ, ಈ ಚಿತ್ರದಲ್ಲಿ ಪ್ರಭಾಸ್, ಶಿವರಾಜ್‌ ಕುಮಾರ್‌, ಮೋಹನ್ ಲಾಲ್, ನಯನತಾರಾ ಮುಂತಾದವರು ನಟಿಸುತ್ತಿರುವುದು ವಿಶೇಷವಾಗಿದೆ. ಈ ಸಿನಿಮಾದ ರೇಂಜ್ ಹೇಗಿರಲಿದೆ ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ಮಂಚು ವಿಷ್ಣು ತಮ್ಮ ಹುಟ್ಟುಹಬ್ಬದ ಪ್ರಯುಕ್ತ (ನವೆಂಬರ್ 23) ಪೋಸ್ಟರ್ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.


BBK 10: ನೊಂದು ಬೆಂದರವರ ಗುಂಪಿಗೆ ನಾಯಕರಾದ ಕಾರ್ತಿಕ್‌ ಮಹೇಶ್!‌


ಈ ಚಿತ್ರದ ಸಂಪೂರ್ಣ ಶೂಟಿಂಗ್ ಕೂಡ ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿದೆ. 80ರಷ್ಟು ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ಈ ಸಿನಿಮಾ ವಿಶುವಲ್ ವಂಡರ್ ಆಗಲಿದೆಯಂತೆ. ಒಟ್ಟಾರೆಯಾಗಿ ಬ್ರೇಕ್‌ಗಾಗಿ ಕಾಯುತ್ತಿರುವ ವಿಷ್ಣುಗೆ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್‌ ನೀಡುತ್ತಾ ಅಂತ ಕಾಯ್ದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.