ಕ್ರೇಜಿಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ.. ಹಸೆಮಣೆ ಏರಲಿದ್ದಾರೆ ಮನೋರಂಜನ್ ರವಿಚಂದ್ರನ್!
Manoranjan Ravichandran Marriage: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಶುಭ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಶುಭ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ನಟ ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಹಿರಿಯ ಪುತ್ರ ಮನೋರಂಜನ್ ಅವರ ಮದುವೆಯ ಬಗ್ಗೆ ಮಾಹಿತಿ ದೊರೆತಿದೆ.
ಇದನ್ನೂ ಓದಿ: Bigg Boss Kannada: ಶುರುವಾಯ್ತು ತಯಾರಿ.. ಪ್ರೋಮೋ ಶೂಟ್‌ನಲ್ಲಿ ಕಿಚ್ಚ ಸುದೀಪ್ ಭಾಗಿ
ಸದ್ಯದಲ್ಲೇ ಮನೋರಂಜನ್ ರವಿಚಂದ್ರನ್ ಹಸೆಮಣೆ ಏರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಹಿತಿ ಪ್ರಕಾರ, ಆಗಸ್ಟ್ 21 ಹಾಗೂ 22ರಂದು ಮನೋರಂಜನ್ ವಿವಾಹ ನೆರವೇರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಗೀತ ಎಂಬ ಹುಡುಗಿಯ ಜೊತೆ ಮನೋರಂಜನ್ ಸಪ್ತಪದಿ ತುಳಿಯಲಿದ್ದಾರೆ. ಬೆಂಗಳೂರು ಮೂಲದ ಸಂಗೀತ ಅವರನ್ನ ಮನೋರಂಜನ್ ವರಿಸಲಿದ್ದಾರೆ.
2017ರಲ್ಲಿ ಸಾಹೇಬ ಸಿನಿಮಾ ಮೂಲಕ ಮನೋರಂಜನ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಬೃಹಸ್ಪತಿ ಸಿನಿಮಾದಲ್ಲಿ ನಡಿಸಿದರು. ನಂತರ 2021ರಲ್ಲಿ ಅವರ ಮುಗಿಲು ಪೇಟೆ ತೆರೆಕಂಡಿತು. ಈ ವರ್ಷ ಪ್ರಾರಂಭ ಸಿನಿಮಾ ಬಿಡುಗಡೆ ಆಯಿತು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಮೂವರು ಮಕ್ಕಳಿದ್ದು, 2019ರಲ್ಲಿ ಅವರ ಪುತ್ರಿಯ ಮದುವೆ ಅದ್ದೂರಿಯಾಗಿ ನಡೆಯಿತು. ಇದೀಗ ಅವರ ಪುತ್ರ ಮನೋರಂಜನ್ ಮದುವೆ ಕುರಿತು ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಅವರ ಕುಟುಂಬದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಸಿನಿಮಾದಲ್ಲಿ ಮಾಲಾಶ್ರೀ ಅಭಿನಯ! ಯಾವ ಪಾತ್ರ?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.