Bigg Boss Kannada: ಶುರುವಾಯ್ತು ತಯಾರಿ.. ಪ್ರೋಮೋ ಶೂಟ್‌ನಲ್ಲಿ ಕಿಚ್ಚ ಸುದೀಪ್‌ ಭಾಗಿ

Bigg Boss Season 9: ಕನ್ನಡ ಕಿರುತೆರೆಯಲ್ಲಿ ಎಷ್ಟೇ ರಿಯಾಲಿಟಿ ಶೋಗಳು ಬಂದರೂ ಸಹ ಬಿಗ್‌ ಬಾಸ್‌ ಮಾತ್ರ ಎಂದಿಗೂ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿಯೇ ಉಳಿದಿದೆ. ವರ್ಷದಿಂದ ವರ್ಷಕ್ಕೆ ಬಿಗ್‌ ಬಾಸ್‌ ನೋಡುಗರ ಸಂಖ್ಯೆ ಹೆಚ್ಚಗುತ್ತಲೇ ಇದೆ. 

Written by - Chetana Devarmani | Last Updated : Jul 13, 2022, 11:39 AM IST
  • ಶುರುವಾಯ್ತು ಬಿಗ್‌ ಬಾಸ್‌ ಸೀಸನ್‌ 9 ತಯಾರಿ
  • ಪ್ರೋಮೋ ಶೂಟ್‌ನಲ್ಲಿ ಕಿಚ್ಚ ಸುದೀಪ್‌ ಭಾಗಿ
  • ಹೊಸ ಅಪ್ಡೇಟ್‌ ಹಂಚಿಕೊಂಡ ಪರಮೇಶ್ವರ್ ಗುಂಡ್ಕಲ್
Bigg Boss Kannada: ಶುರುವಾಯ್ತು ತಯಾರಿ.. ಪ್ರೋಮೋ ಶೂಟ್‌ನಲ್ಲಿ ಕಿಚ್ಚ ಸುದೀಪ್‌ ಭಾಗಿ  title=
ಕಿಚ್ಚ ಸುದೀಪ್‌

Bigg Boss Season 9: ಕನ್ನಡ ಕಿರುತೆರೆಯಲ್ಲಿ ಎಷ್ಟೇ ರಿಯಾಲಿಟಿ ಶೋಗಳು ಬಂದರೂ ಸಹ ಬಿಗ್‌ ಬಾಸ್‌ ಮಾತ್ರ ಎಂದಿಗೂ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿಯೇ ಉಳಿದಿದೆ. ವರ್ಷದಿಂದ ವರ್ಷಕ್ಕೆ ಬಿಗ್‌ ಬಾಸ್‌ ನೋಡುಗರ ಸಂಖ್ಯೆ ಹೆಚ್ಚಗುತ್ತಲೇ ಇದೆ. ಈ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ಗಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಅದರಲ್ಲೂ ಈ ಬಾರಿ ಎರಡೆರಡು ಬಿಗ್‌ ಬಾಸ್‌ ಇರಲಿದ್ದು, ಎಲ್ಲರೂ ಸಂತಸಗೊಂಡಿದ್ದಾರೆ. 

ಇದನ್ನೂ ಓದಿ: T20 ವಿಶ್ವಕಪ್‌ಗೆ ಮೊದಲೇ ಕೆ.ಎಲ್‌.ರಾಹುಲ್-ಅಥಿಯಾ ಶೆಟ್ಟಿ ವಿವಾಹ.. ಮದುವೆ ಡೇಟ್‌ ಫಿಕ್ಸ್‌!

ಈ ನಡುವೆ ಬಿಗ್‌ ಬಾಸ್‌ ಆಯೋಜಕ ಪರಮೇಶ್ವರ್‌ ಗುಂಡ್ಕಲ್‌ ಹೊಸ ಅಪ್‌ಡೇಟ್‌ ನೀಡಿದ್ದು, ಜನರಲ್ಲಿ ಖುಷಿ ಹೆಚ್ಚಾಗಿದೆ. ಬಿಗ್‌ ಬಾಸ್‌ ಆರಂಭಕ್ಕೆ ಕಾಯುತ್ತಿರುವ ಜನರಿಗೆ ಪರಮೇಶ್ವರ್‌ ಗುಂಡ್ಕಲ್‌ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಈಗಾಗಲೇ ಬಿಗ್‌ ಬಾಸ್‌ಗೆ ಸಿದ್ಧತೆ ಶುರುವಾಗಿದ್ದು, ಈ ಬಗ್ಗೆ ಕೆಲವು ಫೊಟೋಗಳನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. 

ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಕುರಿತು ಮತ್ತೊಂದು ಇಂಟರೆಸ್ಟಿಂಗ್‌ ಮಾಹಿತಿ ಹೊರ ಬಿದ್ದಿದೆ. ಬಿಗ್‌ ಬಾಸ್‌ ಸೀಸನ್‌ 9 ಕ್ಕೆ ಭರದ ಸಿದ್ಧತೆ ನಡೆಯುತ್ತಿರುವ ಬಗ್ಗೆ ಪರಮೇಶ್ವರ್‌ ಗುಂಡ್ಕಲ್‌ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ದೊಡ್ಮನೆಯ ಕೆಲಸ ಆರಂಭವಾಗಿದ್ದು, ಆಕರ್ಷಕವಾಗಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗುತ್ತಿದೆ. 

 

 

ಕನ್ನಡದ ಈ ಹಿಂದೆ ಬಂದ ಎಲ್ಲ ಸೀಸನ್‌ಗಳ ಪ್ರೋಮಗಳು ಬಲು ವಿಶೇಷವಾಗಿದ್ದವು. ಅಂತೆಯೇ ಈ ಬಾರಿ ಯಾವ ರೀತಿಯಲ್ಲಿ ಪ್ರೋಮೋ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ. ಈ ಪ್ರೋಮೋ ಶೂಟ್‌ಗಾಗಿ ಕಿಚ್ಚ ಸುದೀಪ್ ಪ್ರತಿ ಬಾರಿಯೂ ವಿಭಿನ್ನವಾದ ಗೆಟಪ್ ಹಾಕಿದ್ದರು. ಈ ಸಲ ಸುದೀಪ್‌ ಯಾವ ರೀತಿ ಪ್ರೋಮೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

ಇದನ್ನೂ ಓದಿ: Bigg Boss Kannada: ಶುರುವಾಗಲಿದೆ ಮಿನಿ ಬಿಗ್​ಬಾಸ್! ಯಾರಿಗೆಲ್ಲ ಅವಕಾಶ?

ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ಪ್ರೋಮೋ ಶೂಟಿಂಗ್ ಮುಗಿದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕಿಚ್ಚ ಸುದೀಪ್‌ ಜೊತೆ ನಿಂತಿರುವ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ ಬಾಸ್‌ ಸೀಸನ್‌ 9 ರ ಪ್ರೋಮೋ ಕೂಡ ಹೊರ ಬೀಳಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News