Manvita Kamath Mother : ಕೆಂಡಸಂಪಿಗೆ ನಟಿ ಮಾನ್ವಿತಾ ಕಾಮತ್‌ ತಾಯಿ ಅವರು ನಿಧನರಾಗಿದ್ದಾರೆ. ಏಪ್ರಿಲ್‌ 15ರಂದು ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಬನ್ನೇರು ಘಟ್ಟ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಸುಜಾತಾ ಕಾಮತ್ ಮೃತಪಟ್ಟಿದ್ದಾರೆ. ತಾಯಿ ಸುಜಾತ ಕಾಮತ್‌ ಅವರನ್ನು ಕಳೆದುಕೊಂಡಿದ್ದು ನಟಿಗೆ ಘಾಸಿಯನ್ನು ಉಂಟುಮಾಡಿದೆ. 


COMMERCIAL BREAK
SCROLL TO CONTINUE READING

ಮಾನ್ವಿತಾ ಕಾಮತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಯುವನಟಿ.ಮಂಗಳೂರಿನಲ್ಲಿ ಪತ್ರಿಕೋದ್ಯಮ ಮತ್ತು ಇಂಗ್ಲೀಷ್ ಸಾಹತ್ಯದಲ್ಲಿ ಪದವಿ ಪಡೆದ ಇವರು ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸುತ್ತಾರೆ.


ದುನಿಯಾ ಸೂರಿಯವರ `ಕೆಂಡಸಂಪಿಗೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್, ತಮ್ಮ ಮೊದಲ ಚಿತ್ರದಲ್ಲಿಯೇ ಸೈಮಾ ಪ್ರಶಸ್ತಿ ಪಡೆದರು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ ಮಾನ್ವಿತಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಟಗರು ಚಿತ್ರ. ಸದ್ಯ ಇವರು ಕನ್ನಡದ ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದರು. 


ಇದನ್ನೂ ಓದಿ-Hema Malini : ಈ ಖ್ಯಾತ ನಟನೊಂದಿಗೆ ನಿಶ್ಚಯವಾಗಿತ್ತು ಹೇಮಾ ಮಾಲಿನಿ ಮದುವೆ! ಮಂಟಪದಲ್ಲಿ ಸಂಬಂಧ ಮುರಿದು ಬಿದ್ದಿದ್ಯಾಕೆ?


ಇಂಡಸ್ಟ್ರಿಯಲ್ಲಿ ಆಕೆಗೆ ಯಾವುದೇ ಸಂಪರ್ಕವಿಲ್ಲದಿದ್ದರೂ ಸಹ, ಇದೀಗ ಎಲ್ಲರ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ. ಅತೀ ಹೆಚ್ಚು ನಟನಾ ಕೌಶಲ್ಯ ಹೊಂದಿರುವ ಈ ನಟಿ ಕೆಂಡಸಪಿಗೆ ಚಿತ್ರದ ಮೂಲಕ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಅಲ್ಲದೇ ಈ ನಟಿ ಚೌಕ ಚಿತ್ರದ ಅಪ್ಪ ಐ ಲವ್‌ ಯೂ ಪಾ ಎಂಬ ಸೆಂಟಿಮೆಂಟ ಸಾಂಗ್‌ನಿಂದ ಎಲ್ಲರ ಹೃದಯದಾಳವನ್ನು ತಲುಪಿದ್ದಾರೆ.  


ನಟನೆ ಯಿಂದ ಎಲ್ಲರ ಗಮನ ಸೆಳೆದ ನಟಿ ಇಂದು ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಇದೀಗ ನಟಿ ತಾಯಿಯ ನಿಧನದಿಂದಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಅವರ ತಾಯಿ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸೋಣ.


ಇದನ್ನೂ ಓದಿ-Karnataka Election 2023: ʻಬಂದೆ ಬಿಡ್ತು ಊರಬ್ದಂಗೆ ನಡೆಯೋ ಎಲೆಕ್ಷನ್ನು..ʼ ಉಪೇಂದ್ರ ಧ್ವನಿಯಲ್ಲಿ ಕೇಳಿ ಚುನಾವಣೆ ಸಾಂಗ್‌.!  .


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.