Hema Malini Affair: ಬಾಲಿವುಡ್ ನಟಿ ಹೇಮಾ ಮಾಲಿನಿ. ಎಷ್ಟು ಸೌಂದರ್ಯವತಿ ಎಂದರೆ ಡ್ರೀಮ್ ಗರ್ಲ್ ಎಂದೇ ಫೇಮಸ್. ಬ್ಯೂಟಿ ಮಾತ್ರವಲ್ಲ ನಟನೆಯಿಂದಲೂ ನೋಡುಗರ ಮನಗೆದ್ದ ಚಲುವೆ. ಅದೆಷ್ಟೋ ಬಾಲಿವುಡ್ ನಟರು ಸಹ ಹೇಮಾ ಮಾಲಿನಿ ಸೌಂದರ್ಯ ಕಂಡು ಹುಚ್ಚರಾಗಿದ್ದರು. ಆಕೆಯನ್ನು ಮದುವೆಯಾಗುವ ಕನಸು ಕಾಣುತ್ತಿದ್ದರು. ಅವರಲ್ಲಿ ಜಿತೇಂದ್ರ ಕೂಡ ಒಬ್ಬರು. ಹೇಮಾ ಮಾಲಿನಿಯ್ನು ತುಂಬಾ ಇಷ್ಟ ಪಟ್ಟಿದ್ದರು. ಜಿತೇಂದ್ರ ಅವರು ಸಂಜೀವ್ ಕುಮಾರ್ ಅವರ ಗೆಳೆಯ. ಸಂಜೀವ್, ಹೇಮಾಳನ್ನು ಪ್ರೀತಿಸಲು ಪ್ರಾರಂಭಿಸಿದರು. ಹೇಮಾಗೆ ಪ್ರೇಮ ಪತ್ರ ಬರೆಯಲು ಯೋಚಿಸಿದರು. ತನ್ನ ಸ್ನೇಹಿತ ಜಿತೇಂದ್ರನ ಬಳಿ ಆ ಲವ್ ಲೆಟರ್ ನೀಡಿ ಹೇಮಾ ಮಾಲಿನಿಗೆ ಕೊಡಲು ತಿಳಿಸಿದರು.
ಇದನ್ನೂ ಓದಿ : Prabhutva: ಪ್ರಭುತ್ವ ಸಿನಿಮಾದ ಹಿಂದಿ ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?
ಜಿತೇಂದ್ರ ಇದಕ್ಕೆ ಒಪ್ಪಿದರು. ಆದರೆ ಅವರು ಹೇಮಾಗೆ ಪತ್ರವನ್ನು ನೀಡಲು ಹತ್ತಿರ ಹೋದಾಗ, ತಮ್ಮ ಮನಸ್ಸನ್ನು ಬದಲಾಯಿಸಿದರು. ಹೇಮಾ ಅವರನ್ನು ಮೆಚ್ಚಿಸುವಂತೆ ಪ್ರೇಮ ಪತ್ರದ ಮೇಲೆ ತಮ್ಮ ಹೆಸರನ್ನು ಬರೆದರು. ಜಿತೇಂದ್ರ ಹೇಮಾ ಕುಟುಂಬದ ಮುಂದೆಯೂ ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿದ್ದ ಕಾರಣ ನಟಿಯ ಕುಟುಂಬಸ್ಥರು ಕೂಡ ತಮ್ಮ ಮಗಳನ್ನು ಜಿತೇಂದ್ರನಿಗೆ ಮದುವೆ ಮಾಡಿಕೊಡಬೇಕೆಂದು ಬಯಸಿದ್ದರು. ಮತ್ತೊಂದೆಡೆ ಹೇಮಾ ಧರ್ಮೇಂದ್ರನ ವ್ಯಾಮೋಹಕ್ಕೆ ಒಳಗಾಗಿದ್ದರು, ಆದ್ದರಿಂದ ಅವಳು ಜಿತೇಂದ್ರನ ಪ್ರೇಮ ಪ್ರಸ್ತಾಪಕ್ಕೆ ಹೆಚ್ಚು ಗಮನ ಕೊಡಲಿಲ್ಲ. ಮನೆಯವರ ಒತ್ತಡದಿಂದಾಗಿ ಜಿತೇಂದ್ರನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಳು.
ಇದನ್ನೂ ಓದಿ : Malavika Avinash: ನಟಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು! ಹೀಗಿದೆ ಆರೋಗ್ಯ ಸ್ಥಿತಿ..
ಮದುವೆ ದಿನಾಂಕ ನಿಗದಿಯಾಗಿದ್ದು, ಚೆನ್ನೈನಲ್ಲಿ ವಿವಾಹ ಮನೆಯವರ ಒತ್ತಡದ ಮುಂದೆ ಹೇಮಾ ಕೂಡ ಏನೂ ಮಾಡಲಾಗಲಿಲ್ಲ. ಹೀಗಿರುವಾಗ ಧರ್ಮೇಂದ್ರ ಅವರು, ಜಿತೇಂದ್ರ ಹೇಮಾಳನ್ನು ಮದುವೆಯಾಗಲಿದ್ದಾನೆ ಎಂದು ಜಿತೇಂದ್ರನ ಪ್ರೇಯಸಿ ಶೋಭಾಗೆ ತಿಳಿಸಿದ್ದರು. ಇದರಿಂದ ಬೇಸರಗೊಂಡ ಶೋಭಾ ಕೂಡಲೇ ಚೆನ್ನೈಗೆ ವಿಮಾನ ಹತ್ತಿ ಜಿತೇಂದ್ರನ ಬಳಿ ಬಂದು ಹೇಮಾಳ ಮದುವೆ ಮುರಿದು ಹಾಕಿದರು. ಅಂತಿಮವಾಗಿ 1980 ರಲ್ಲಿ ಹೇಮಾ ಧರ್ಮೇಂದ್ರನ ಎರಡನೇ ಹೆಂಡತಿಯಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.