ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಟಿ ಪವಿತ್ರಾ ಲೋಕೇಶ್ ಅವರದ್ದೇ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಮಾಧ್ಯಮಗಳಿಂದ ಹಿಡಿದು ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಗ್ಗೆಯೇ ಗುಸುಗುಸುಗಳು ಕೇಳಿಬರುತ್ತಿವೆ. ಈಗಾಗಲೇ 3 ಮದುವೆಯಾಗಿರೋ ನಟಿ ಪವಿತ್ರ ಅವರು ನರೇಶ್ ಜೊತೆಗೆ 4ನೇ ಮದುವೆಯಾಗಿದ್ದಾರಂತೆ, ಅವರ ಜೊತೆಯೇ ಇದ್ದಾರಂತೆ ಅನ್ನೋ ಸುದ್ದಿಗಳು ಹರಿದಾಡಿದ್ದವು.


COMMERCIAL BREAK
SCROLL TO CONTINUE READING

ನಟಿಯ ಮದುವೆ ಬಗ್ಗೆ ಹಲವಾರು ಅಂತೆ-ಕಂತೆ ಸುದ್ದಿಗಳು ಟಾಲಿವುಡ್ ಮತ್ತು ಸ್ಯಾಂಡಲ್‍ವುಡ್ ತುಂಬಾ ಹರಿದಾಡುತ್ತಿವೆ. ನರೇಶ್ ಅವರ 3ನೇ ಪತ್ನಿ ರಮ್ಯಾ ಮಾಧ‍್ಯಮಗಳ ಮುಂದೆ ಬಂದು ಪವಿತ್ರ ಮತ್ತು ತಮ್ಮ ಪತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ತಮ್ಮ ಪತಿ ಹೊಂದಿರುವ ಸಂಬಂಧಗಳ ಬಗ್ಗೆಯೂ ಅನೇಕ ಆರೋಪ ಮಾಡಿದ್ದರು. ಇದರ ಬೆನ್ನಲ್ಲಿಯೇ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ನಟಿ ಪವಿತ್ರ ಲೋಕೇಶ್ ತಮ್ಮ ಹಾಗೂ ನರೇಶ್ ನಡುವಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದರು.


ಇದನ್ನೂ ಓದಿ: Allu Arjun-Rashmika ಜೊತೆ 'ಪುಷ್ಪಾ 2' ರಲ್ಲಿ ನಟಿಸಬೇಕೆ? ತಕ್ಷಣ ಈ ಕೆಲಸ ಮಾಡಿ


ನಟಿ ಪವಿತ್ರ ಲೋಕೇಶ್ ಮತ್ತು ನರೇಶ್ ನಡುವಿನ ಸಂಬಂಧದ ನಡುವಿನ ವಿವಾದದ ಮಧ್ಯೆ ಡೈಮಂಡ್ ನೆಕ್ಲೆಸ್ ವಿಷಯ ಮುನ್ನೆಲೆಗೆ ಬಂದಿತ್ತು. ಇದೀಗ ಪವಿತ್ರ ಲೋಕೇಶ್ ಧರಿಸಿರೋ ಡೈಮಂಡ್ ನೆಕ್ಲೆಸ್ ಸುತ್ತ ಅನುಮಾನದ ಹುತ್ತವೇ ನಿರ್ಮಾಣವಾಗಿದೆ. ತೆಲುಗು ಹಾಸ್ಯನಟ ಆಲಿ ಬರ್ತ್ ‍ಡೇ ಪಾರ್ಟಿಯಲ್ಲಿ ಡೈಮಂಡ್ ನೆಕ್ಲೆಸ್ ಹಾಕಿಕೊಂಡು ಪವಿತ್ರ ಮಿಂಚಿದ್ದಾರೆ. ನರೇಶ್ ಹೋಗಿರೋ ಪಾರ್ಟಿಗೆ ಡೈಮಂಡ್ ನೆಕ್ಲೆಸ್ ಧರಿಸಿ ನಟಿ ಪವಿತ್ರ ದರ್ಶನ ಕೊಟ್ಟಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ನನ್ನ ಅತ್ತೆಯ ಡೈಮಂಡ್ ನೆಕ್ಲಸ್ ಪವಿತ್ರ ಬಳಿ ಇದೆ ಎಂದು ನರೇಶ್ ಪತ್ನಿ ರಮ್ಯಾ ಅವರು ಅರೋಪ ಮಾಡಿದ್ದರು.


ಈಗ ಪವಿತ್ರಾ ಲೋಕೇಶ್‍ಗೆ ನರೇಶ್ ಡೈಮೆಂಡ್ ನೆಕ್ಲೇಸ್ ಕೊಟ್ಟಿದ್ದಾರಾ? ಪವಿತ್ರ ಕೊರಳಲ್ಲಿರುವ ಡೈಮೆಂಡ್ ನೆಕ್ಲೆಸ್ ನಿಜಕ್ಕೂ ನರೇಶ್ ತಾಯಿಯ ನೆಕ್ಲೆಸ್..? ಅನ್ನೋ ಪ್ರಶ್ನೆಗಳು ಮೂಡಿವೆ. ಈ ನೆಕ್ಲೆಸ್ ಬಗ್ಗೆ ಎದ್ದಿರುವ ಊಹಪೋಹಗಳಿಗೆ ನಟಿ ಪವಿತ್ರ ಅವರೇ ಸ್ಪಸ್ಟನೆ ಕೋಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ: ತಮ್ಮೂರಿನ ವಿದ್ಯಾರ್ಥಿಗಳಿಗೆ "777 ಚಾರ್ಲಿ" ಸಿನಿಮಾ ತೋರಿಸಲು ಮುಂದಾದ ಕಿರಣ್ ರಾಜ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ