Allu Arjun-Rashmika ಜೊತೆ 'ಪುಷ್ಪಾ 2' ರಲ್ಲಿ ನಟಿಸಬೇಕೆ? ತಕ್ಷಣ ಈ ಕೆಲಸ ಮಾಡಿ

'Pushpa: The Rule'' Casting Call - 'ಪುಷ್ಪಾ' ಚಿತ್ರದ ಮೊದಲ ಭಾಗದ ಅಪಾರ ಯಶಸ್ಸಿನ ಬಳಿಕ ಇದೀಗ ಆ ಚಿತ್ರದ ಎರಡನೇ ಭಾಗವಾಗಿರುವ 'ಪುಷ್ಪಾ: ದಿ ರೂಲ್' ಬಿಡುಗಡೆಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ, ನೀವೂ ಕೂಡ ಈ ಚಿತ್ರದಲ್ಲಿದ್ದರೆ ಹೇಗಿರುತ್ತದೆ? ಎಂಬುದನ್ನೊಮ್ಮೆ ಯೋಚಿಸಿ ನೋಡಿ,  

Written by - Nitin Tabib | Last Updated : Jul 1, 2022, 09:44 PM IST
  • ಅಲ್ಲು ಅರ್ಜುನ್-ರಷ್ಮಿಕಾ ಮಂದಣ್ಣ ಜೊತೆಗೆ ನಟಿಸುವ ಸುವರ್ಣ ಅವಕಾಶ
  • ಪುಷ್ಪಾ ದಿ ರೂಲ್ ಗಾಗಿ ಆಡಿಶನ್ ಕರೆ
  • ಎಲ್ಲಿ ಮತ್ತು ಯಾವಾಗ ಈ ಆಡಿಶನ್ ನಡೆಯಲಿದೆ ತಿಳಿಯಲು ಸುದ್ದಿ ಓದಿ
Allu Arjun-Rashmika ಜೊತೆ 'ಪುಷ್ಪಾ 2' ರಲ್ಲಿ ನಟಿಸಬೇಕೆ? ತಕ್ಷಣ ಈ ಕೆಲಸ ಮಾಡಿ title=
Pushpa The Rule Casting Call

'Pushpa: The Rule'' Casting Call - ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಕನ್ನಡದ ಪ್ರತಿಭಾವಂತ ನಟಿ ರಶ್ಮಿಕಾ ಮಂದಣ್ಣ ಪುಷ್ಪ: ದಿ ರೈಸ್ ಚಿತ್ರದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಹಾಡುಗಳಿಂದ ಹಿಡಿದು ಡೈಲಾಗ್‌ಗಳವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಭಾರೀ ಹಿಟ್ ಆಗಿತ್ತು. ಕೆಲವರು ರಶ್ಮಿಕಾ ಮಂದಣ್ಣ- ಅಲ್ಲು ಅರ್ಜುನ್ ಹುಕ್ ಡ್ಯಾನ್ಸ್ ಸ್ಟೆಪ್ಸ್ ರೀಲ್ ಮಾಡಿದ್ದರೆ, ಮತ್ತೊಂದೆಡೆ ಎಲ್ಲರೂ 'ಮೈ ಜುಕೇಗಾ ನಹಿ' ರೀಲ್ ನಲ್ಲಿ ಕಾಣಿಸಿಕೊಂಡರು. ಚಿತ್ರದ ಮೊದಲ ಭಾಗದ ಯಶಸ್ಸಿನ ನಂತರ, ಅಭಿಮಾನಿಗಳು ಅದರ ಎರಡನೇ ಭಾಗವಾದ 'ಪುಷ್ಪ: ದಿ ರೂಲ್'ಗಾಗಿ ಸಾಕಷ್ಟು ಉತ್ಸುಕರಾಗಿದ್ದಾರೆ. ಆದರೆ, ನೀವೂ ಕೂಡ ಈ ಚಿತ್ರದಲ್ಲಿದ್ದರೆ ಹೇಗಿರುತ್ತದೆ? ಎಂಬುದನ್ನೊಮ್ಮೆ ಊಹಿಸಿ ನೋಡಿ,

ಪುಷ್ಪಾ: ದಿ ರೂಲ್ ಗಾಗಿ ಆಡಿಶನ್
'ಪುಷ್ಪಾ' ಚಿತ್ರದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪುಷ್ಪಾ ಚಿತ್ರದ ಎರಡನೇ ಭಾಗವಾಗಿರುವ 'ಪುಷ್ಪಾ: ದಿ ರೂಲ್' ಗಾಗಿ ಆಡಿಶನ್ ಮಾಹಿತಿಯನ್ನು ನೀಡಲಾಗಿದೆ. ತಿರುಪತಿಯಲ್ಲಿ ಈ ಚಿತ್ರಕ್ಕಾಗಿ ಆಡಿಶನ್ ನಡೆಯಲಿದೆ ಎಂದು ಹೇಳಲಾಗಿದೆ. ಈ ಕುರಿತಾದ ಪೋಸ್ಟರ್ ನಲ್ಲಿ ಚಿತ್ರದಲ್ಲಿ ನಟನೆಗಾಗಿ ಮಹಿಳೆಯರು-ಪುರುಷರು ಹಾಗೂ ಮಕ್ಕಳು ಬೇಕಾಗಿದ್ದಾರೆ ಮತ್ತು 3 ರಿಂದ 5 ಜುಲೈಗೆ ಈ ಆಡಿಶನ್ ನಡೆಯಲಿದೆ ಎನ್ನಲಾಗಿದೆ. ಇದರ ಜೊತೆಗೆ ಪೋಸ್ಟರ್ ನಲ್ಲಿ ಆಡಿಶನ್ ಸ್ಥಳವನ್ನು ಕೂಡ ಸೂಚಿಸಲಾಗಿದೆ. ಇದಲ್ಲದೆ ಸೆಲೆಕ್ಷನ್ ಗಾಗಿ ಚಿತ್ತೂರು ಭಾಷೆಯ ಸ್ಲ್ಯಾಂಗ್ ಅವಶ್ಯಕ ಎಂದು ಹೇಳಲಾಗಿದೆ.

ಇದನ್ನೂ ಓದಿ-Pavitra Lokesh : ಪವಿತ್ರ ಲೋಕೇಶ್-ನರೇಶ್ ಮದ್ವೆ ವಿಚಾರ : ಕ್ಷಣ ಕ್ಷಣಕ್ಕೂ ಸಿಗ್ತಾಯಿದೆ ಟ್ವಿಸ್ಟ್!

ಪಾತ್ರದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ
ಆದರೆ, ಈ ಕಾಸ್ಥಿಂಗ್ ಕಾಲ್ ನಲ್ಲಿ ಎಷ್ಟು ಪಾತ್ರಗಳು ಬೇಕಾಗಿವೆ ಮತ್ತು ಯಾವ ರೀತಿಯ ಪಾತ್ರಗಳಿಗಾಗಿ ಆಡಿಷನ್ ನಡೆಯುತ್ತಿದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಕಾಸ್ಟಿಂಗ್ ಕಾಲ್ ಘೋಷಣೆಯಾಗಿದೆ ಎಂದರೆ ಚಿತ್ರದ ಎರಡನೇ ಭಾಗಕ್ಕೆ ಅದ್ದೂರಿ ತಯಾರಿ ನಡೆಯುತ್ತಿದೆ ಮತ್ತು ಹೆಚ್ಚಿನ ಸಂಖ್ಯೆಯ ಜನರ ಅವಶ್ಯಕತೆ ಇದೆ ಎಂಬುದು ಮಾತ್ರ ಇದರಿಂದ ಸ್ಪಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಹ ಆಡಿಷನ್‌ನಲ್ಲಿ ಆಯ್ಕೆಯಾದರೆ, ನೀವು ತೆರೆಯ ಮೇಲೆ ಅಲ್ಲು ಅರ್ಜುನ್ ಜೊತೆ ಆಕ್ಷನ್ ಸೀನ್ ನಲ್ಲಿ ಅಥವಾ ರಶ್ಮಿಕಾ ಮಂದಣ್ಣ ಜೊತೆಗೆ ಯಾವುದಾದರೊಂದು ರೋಮ್ಯಾಂಟಿಕ್ ಸೀನ್ ನಲ್ಲಿ ನಿಮ್ಮನ್ನು ನೀವು ನೋಡಬಹುದು.

ಇದನ್ನೂ ಓದಿ-Ramya Raghupathi : ನನ್ನ ಬಗ್ಗೆ ಮಾತನಾಡುವುದಕ್ಕೆ ಪವಿತ್ರಾ ಲೋಕೇಶ್ ಯಾರು? : ರಮ್ಯಾ ರಘುಪತಿ

ಪುಷ್ಪಾ ಗಳಿಕೆ
'ಪುಷ್ಪ: ದಿ ರೈಸ್' ಚಿತ್ರ 17 ಡಿಸೆಂಬರ್ 2021 ರಂದು ಬೆಳ್ಳಿ ತೆರೆಗೆ ಅಪ್ಪಳಿಸಿತ್ತು. ಪುಷ್ಪಾ ಮೊದಲ ಭಾಗದ ಕಲೆಕ್ಷನ್ ಕುರಿತು ಹೇಳುವುದಾದರೆ, ಚಿತ್ರದ ಹಿಂದಿ ಅವತರಣಿಕೆ ಮೊದಲ ದಿನ ಕೇವಲ 3.33 ಕೋಟಿ ಕಲೆಕ್ಷನ್ ಮಾಡಿತ್ತು, ಆದರೆ ನಂತರ ಚಿತ್ರವು ಸಾಕಷ್ಟು ಪ್ರೇಕ್ಷಕರನ್ನು ತನ್ನತ್ತ ಆಕರ್ಶಿಸಿದೆ. ಚಿತ್ರದ ಒಟ್ಟು ಕಲೆಕ್ಷನ್ 108.26 ಕೋಟಿ ರೂ.ಗಳಾಗಿದೆ  ಒಟಿಟಿ ಬಿಡುಗಡೆಯ ನಂತರ ಚಿತ್ರವು ಸಾಕಷ್ಟು ಮೌತ್ ಪಬ್ಲಿಸಿಟಿಯನ್ನು ಪಡೆದುಕೊಂಡಿದೆ ಮತ್ತು ಪುಷ್ಪದ ಎರಡನೇ ಭಾಗವು ಬಂಪರ್ ಗಳಿಕೆ ಮಾಡಲಿದೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News