Kushi Film : ಸೆಪ್ಟಂಬರ್‌ 1 ಕ್ಕೆ ರಿಲೀಸ್‌ ಆಗಿ ಪ್ರೇಕ್ಷಕರಿಂದ ಸಾಕಷ್ಟು ಉತ್ತಮ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿರುವ ಖುಷಿ ಸಿನಿಮಾ ವಿಜಯ್‌ ಮಾತ್ತು ಸ್ಯಾಮ್‌ಗೆ ಕಂಬ್ಯಾಕ್ ಚಿತ್ರ ಆಗಲಿದೆ ಎನ್ನುವ ನಿರೀಕ್ಷೆಗಳು ಹುಟ್ಟಿವೆ. ಸಿಂಪಲ್‌ ಕಥೆಯನ್ನು ಚೆಂದವಾಗಿ ತೆರೆಯ ಮೇಲೆ ತರುವ ಪ್ರಯತ್ನವನ್ನು ಮಾಡಿದ ಚಿತ್ರತಂಡ ಯಶಸ್ಸಿನ ಏಣಿಯನ್ನು ಏರಲು ರೆಡಿಯಾಗಿದೆ. 


COMMERCIAL BREAK
SCROLL TO CONTINUE READING

ಶಿವ ನಿರ್ವಾಣ ನಿರ್ದೇಶನದಡಿಯಲ್ಲಿ ಮೂಡಿಬಂದಿರುವ ಸಖತ್‌ ರೋಮ್ಯಾಂಟಿಕ್‌ ಸಿನಿಮಾ ಸಿನಿಪ್ರಿಯರ ಹೃದಯ ಗೆಲ್ಲುವುದು ಕನ್ಫರ್ಮ್‌ ಎನ್ನಲಾಗಿದೆ. ಇನ್ನು ಈ ಚಿತ್ರದಲ್ಲಿ ಪ್ರೀತಿಯಲ್ಲಿ ಬೀಳುವ ನಾಯಕ-ನಾಯಕಿ ಕುಟುಂಬಕ್ಕೆ ವಿರುದ್ಧವಾಗಿ ಮದುವೆಯಾಗುತ್ತಾರೆ. ಎಲ್ಲ ದಂಪತಿಗಳಿಗೂ ಮಾದರಿಯಾಗುವ ಪ್ರಯತ್ನ ಮಾಡುತ್ತಾರೆ. ಆದರೆ ಪ್ರೀತಿಸಿ ಮದುವೆಯಾದ ಈ ಜೋಡಿಯ ಮಧ್ಯ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡುತ್ತವೆ. ಇದೆಲ್ಲವನ್ನು ಮೀರಿ ಇವರಿಬ್ಬರ ಸಂಬಂಧ ಹಾಗೆ ಉಳಿದುಕೊಳ್ಳತ್ತಾ ಅನ್ನೋದೇ ಈ ಸಿನಿಮಾದ ಒನ್‌ ಲೈನ್‌ ಸ್ಟೋರಿ. 


ಇದನ್ನೂ ಓದಿ-Bollywood : 5 ಅಫೇರ್, 2 ಮದುವೆ.. ಆದರೂ‌ ಒಂಟಿ ಜೀವನ ಕಳೆಯುತ್ತಿರುವ ಖ್ಯಾತ ನಟಿ


ಇದೀಗ ಈ ಖುಷಿ ಸಿನಿಮಾದ ಸ್ಟೋರಿ ಸಮಂತಾ ಜೀವನದ ನಿಜವಾದ ಕಥೆನಾ? ಎನ್ನುವ ಚರ್ಚೆಯೊಂದು ಸೋಷಿಯಲ್‌ ಮಿಡಿಯಾದಲ್ಲಿ ನಡೆಯುತ್ತಿದೆ. ನಟ ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅವರು ಸದ್ಯ ಡಿವೋರ್ಸ್‌ ಪಡೆದು ದೂರವಾಗಿದ್ದಾರೆ. 


ಮದುವೆ ನಂತರ ಇವರಿಬ್ಬರು ಟಾಲಿವುಡ್‌ ಕ್ಯೂಟ್‌ ಕಪಲ್‌ ಎಂದು ಗುರುತಿಸಿಕೊಂಡಿದ್ದ ಚೈಸ್ಯಾಮ್‌ ನಡುವೆ ಇದ್ದಕ್ಕಿದ್ದಂತೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿದ್ದರಿಂದ ಸಮಂತಾಗೆ ಗರ್ಭಪಾತವಾಗಿತ್ತು ಎನ್ನುವ ವದಂತಿಗಳು ಇದ್ದವು. ಇದೇ ಇವರಿಬ್ಬರು ದೂರಾಗಲು ಕಾರಣ ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು. 


ಇನ್ನು ಖುಷಿ ಸಿನಿಮಾದಲ್ಲಿ ಈ ರೀತಿಯಾಗಿಲ್ಲ ಅಂದರೆ  ವಿಪ್ಲವ್ ಹಾಗೂ ಆರಾಧ್ಯ ಡಿವೋರ್ಸ್ ಪಡೆಯಲಿಲ್ಲ. ಅವರಿಬ್ಬರು ಕೊನೆಗೆ ಒಂದಾಗುತ್ತಾರೆ. ಆದ್ದರಿಂದ ಇದು ಸಮಂತಾ ಲೈಫ್‌ ಸ್ಟೋರಿ ಅಲ್ಲ. ಕೆಲ ವಿಚಾರಗಳಲ್ಲಿ ಹೋಲಿಕೆ ಇದೆ ಆದರೆ ಇದು ಆಕೆಯ ನಿಜ ಜೀವನದ ಕಥೆ ಎನ್ನಲು ಸಾಧ್ಯವಿಲ್ಲ.


ಇದನ್ನೂ ಓದಿ-ಸೋನು ಶ್ರೀನಿವಾಸ್ ಗೌಡ ಹಾಟ್‌ ಅವತಾರ.. ಕೈಯಲ್ಲಿ ಗ್ಲಾಸ್‌, ಸಿಗರೇಟು.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.