Sai Pallavi: ನಟಿ ಸಾಯಿ ಪಲ್ಲವಿಗೆ ಸಹೋದರಿ ಇರುವುದು ಎಲ್ಲರಿಗೂ ಗೊತ್ತು.. ಅವರೇ ಇದೀಗ ಅಕ್ಕನಿಗಿಂತ ಮೊದಲು ಮದುವೆಯಾಗಲಿದ್ದಾರೆ.. ಹೌದು ಪೂಜಾ ಕಣ್ಣನ್ ಇತ್ತೀಚೆಗೆ ಈ ಕುರಿತು ಬಹಿರಂಗಪಡಿಸಿದ್ದಾರೆ.. 


COMMERCIAL BREAK
SCROLL TO CONTINUE READING

ಇನ್ನು ಪೂಜಾ ಕಣ್ಣನ್‌ ಸಹ ನಟಿಯಾಗಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ.. ಅವರು 2021 ರಲ್ಲಿ ಬಿಡುಗಡೆಯಾದ ಚಿತಿರೈ ಸೆವ್ವಾನಂ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾ ಕಮರ್ಷಿಯಲ್ ಆಗಿ ಹೆಚ್ಚು ಓಡಲಿಲ್ಲ.. ಹೀಗಾಗಿ ಪೂಜಾ ಕಣ್ಣನ್ ಮತ್ತೆ ನಟಿಸಲಿಲ್ಲ. ಸದ್ಯ ಆಕೆ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ-BBK10: ಫಿನಾಲೆಗೆ ದಿನಗಣನೆ ಇರುವಾಗಲೇ ಖ್ಯಾತ ನಟ-ನಟಿ Bigg Boss ಮನೆಗೆ ಎಂಟ್ರಿ! ಇದು ವೈಲ್ಡ್ ಕಾರ್ಡ್ ಪ್ರವೇಶನಾ..?


ಇತ್ತೀಚೆಗಷ್ಟೇ ಆಕೆ ಮದುವೆ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ತನ್ನ ಗೆಳೆಯನನ್ನು ಪರಿಚಯಿಸಿದ ನಟಿ.. "ಅವನ ಹೆಸರು ವಿನೀತ್, ನನ್ನ ಭರವಸೆಯ ಕಿರಣ.. ನನ್ನ ಕ್ರೈಂ ಪಾರ್ಟ್ನರ್‌" ಎಂದು ಬರೆದುಕೊಂಡಿದ್ದಾರೆ.. ಸದ್ಯ ಪೂಜಾ ಕಣ್ಣನ್ ಮತ್ತು ವಿನೀತ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. 


ಮತ್ತೊಂದೆಡೆ, ಸಾಯಿ ಪಲ್ಲವಿ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಸ್ವಲ್ಪ ಬ್ರೇಕ್ ಕೊಟ್ಟಿದ್ದ ಸಾಯಿ ಪಲ್ಲವಿ ತಾಂಡೇಲ್ ಎಂಬ ಸಿನಿಮಾದಲ್ಲಿ ನಾಗ ಚೈತನ್ಯಗೆ ಜೋಡಿಯಾಗಲಿದ್ದಾರೆ... ಕಾರ್ತಿಕೇಯ 2 ಖ್ಯಾತಿಯ ಚಂದೂ ಮೊಂಡೇಟಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು... ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿದೆ. ಇದೊಂದು ಭಾವನಾತ್ಮಕ ಪ್ರೇಮ ಕಥೆ ಎನ್ನಲಾಗುತ್ತಿದೆ. ಈ ಹಿಂದೆ ಸಾಯಿ ಪಲ್ಲವಿ-ನಾಗ ಚೈತನ್ಯ ಕಾಂಬಿನೇಷನ್ ನಲ್ಲಿ ಬಿಡುಗಡೆಯಾಗಿದ್ದ ಲವ್ ಸ್ಟೋರಿ ಯಶಸ್ವಿಯಾಗಿತ್ತು. 


ಇದನ್ನೂ ಓದಿ-Vasishta Simha VIP: ರಾಯಲ್ ಸ್ಟಾರ್ ವಸಿಷ್ಠ ಸಿಂಹ ಅಭಿನಯದ ಮುಂದಿನ ಚಿತ್ರ "ವಿಐಪಿ"!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.