Vasishta Simha VIP: ರಾಯಲ್ ಸ್ಟಾರ್ ವಸಿಷ್ಠ ಸಿಂಹ ಅಭಿನಯದ ಮುಂದಿನ ಚಿತ್ರ "ವಿಐಪಿ"!

Vasishta Simha VIP: ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರವು ಹಾಲಿವುಡ್ ಸ್ಟೈಲ್‍ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ. ಮೋಹನ್ ಕುಮಾರ್ "ವಿಐಪಿ" ಚಿತ್ರಕ್ಕೆ ಕಥೆ ಬರೆದಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Jan 15, 2024, 08:07 PM IST
  • ನಟ ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ "ವಿಐಪಿ" ಎಂದು ಹೆಸರಿಡಲಾಗಿದೆ
  • ಮಕರ ಸಂಕ್ರಾಂತಿ ಹಬ್ಬದ ಪರ್ವಕಾಲದಲ್ಲಿ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ
  • ಕಲಾಸೃಷ್ಟಿ ಪ್ರೊಡಕ್ಷನ್ಸ್ ನಿರ್ಮಾಣದ, ಬ್ರಹ್ಮ ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ
Vasishta Simha VIP: ರಾಯಲ್ ಸ್ಟಾರ್ ವಸಿಷ್ಠ ಸಿಂಹ ಅಭಿನಯದ ಮುಂದಿನ ಚಿತ್ರ "ವಿಐಪಿ"! title=
ವಸಿಷ್ಠ ಸಿಂಹ ಈಗ 'ವಿಐಪಿ'

ಬೆಂಗಳೂರು: ತಮ್ಮ ಅಮೋಘ ಅಭಿನಯ ಹಾಗೂ ಕಂಚಿನ ಕಂಠದ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ "ವಿಐಪಿ" ಎಂದು ಹೆಸರಿಡಲಾಗಿದೆ. ಮಕರ ಸಂಕ್ರಾಂತಿ ಹಬ್ಬದ ಪರ್ವಕಾಲದಲ್ಲಿ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ.

ಕಲಾ ಸೃಷ್ಟಿ ಪ್ರೊಡಕ್ಷನ್ಸ್ ನಿರ್ಮಾಣದ, ಬ್ರಹ್ಮ ನಿರ್ದೇಶನದ ಈ ಚಿತ್ರವು ವಿಭಿನ್ನ ಕಥಾಹಂದರವನ್ನು ಹೊಂದಿದೆ. ಮತ್ತೊಂದು ವಿಶೇಷವೆಂದರೆ "ವಿಐಪಿ" ಅಭಿಮಾನಿಗಳು ವಸಿಷ್ಠ ಸಿಂಹ ಅವರಿಗೆ ರಾಯಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ವಸಿಷ್ಠ ಸಿಂಹ ಈ ಚಿತ್ರದಿಂದ ರಾಯಲ್ ಸ್ಟಾರ್ ವಸಿಷ್ಠ ಸಿಂಹ ಆಗಿ ಮಿಂಚಲಿದ್ದಾರೆ.

ಇದನ್ನೂ ಓದಿ: Bigg Boss Prathap: ಬೆಂಗಳೂರಿನಲ್ಲಿದೆ ಡ್ರೋನ್ ಪ್ರತಾಪ್ ದೊಡ್ಡ ಮನೆ.. ಹೇಗಿದೆ ನೋಡಿ!

ಬೆಂಗಳೂರಿನ ಸುತ್ತಮುತ್ತಾ "ವಿಐಪಿ" ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಬಿರುಸಿನಿಂದ ಸಾಗಿದೆ. ಕೊಡಗು ಮತ್ತು ಸಕಲೇಶಪುರದಲ್ಲೂ ಚಿತ್ರೀಕರಣ ನಡೆಯಲಿದೆ. ಕಲಾಸೃಷ್ಠಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಈ ಚಿತ್ರಕ್ಕೆ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಗಿಣಿ ಅಭಿನಯದ "ಸಾರಿ" ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರವು ಹಾಲಿವುಡ್ ಸ್ಟೈಲ್‍ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ. ಮೋಹನ್ ಕುಮಾರ್ "ವಿಐಪಿ" ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಇದನ್ನೂ ಓದಿ: Emraan Hashmi : ಭಾರತದ ಅತ್ಯಂತ ದುಬಾರಿ 'ರೋಲ್ಸ್ ರಾಯ್ಸ್' ಖರೀದಿಸಿದ ಇಮ್ರಾನ್ ಹಶ್ಮಿ

ರಾಜೀವ್ ಗಣೇಶನ್ ಚಿತ್ರಕಥೆ ಬರೆದು ಛಾಯಾಗ್ರಾಹಕರಾಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ ಸಾಹಸ  ನಿರ್ದೇಶನ ಚಿತ್ರದಲ್ಲಿರಲಿದೆ. ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News