Martain Vs KD: ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆ ಚಿತ್ರಮಂದಿ ಕಣ್ಣಿಟ್ಟಿದ್ದು, ಈಗಾಗಲೇ ಅಂಬಾರಿ ಅರ್ಜುನ್ ನಿರ್ದೇಶನ 'ಮಾರ್ಟಿನ್' ಶೂಟಿಂಗ್ ಬಹುತೇಕ ಮುಗಿದಿದೆ. ಇಷ್ಟರೊಳಗೆ ತೆರೆಕಾಣಬೇಕಿದ್ದ ಮಾರ್ಟಿನ್‌  ಸಿನಿಮಾ, ಯಾಕೋ ಬಿಡುಗಡೆ ನಿಧಾನವಾಗಿ ಸಾಗುತ್ತಿದೆ. ಧ್ರುವ ಫ್ಯಾನ್ಸ್‌ 'ಮಾರ್ಟಿನ್' ಜಪ ಮಾಡುತ್ತಿರುವಾಗಲೇ ಅಭಿಮಾನಿಗಳಿಗೆ ಮತ್ತೊಂದು ಹೊಸ ಅಪ್‌ಡೇಟ್ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ಹೌದು.. ನಿರ್ದೇಶಕ ಜೋಗಿ ಪ್ರೇಮ್ ಫ್ಯಾನ್ಸ್‌ಗೆ  ಗುಡ್‌ ನ್ಯೂಸ್ ಕೊಟ್ಟಿದ್ದು, 'ಮಾರ್ಟಿನ್‌'ಗಿಂತ ತಡವಾಗಿ ಆರಂಭ ಆಗಿದ್ದ 'ಕೆಡಿ' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಹೊಸ ವರ್ಷದ ಸಂಭ್ರಮದ ಮೂಡಿನಲ್ಲಿ ಜೋಗಿ ಪ್ರೇಮ ಜನವರಿ 3 ರಂದು ಕೆಡಿ ಚಿತ್ರದ ಖುಷಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಇಡೀ ತಂಡ ಹೊಸ ವರ್ಷವನ್ನು ಕೇಕ್ ಕಟ್ ಮಾಡಿ ಸಂಭ್ರಮಿಸುವ ವಿಡಿಯೋವನ್ನೂ ಶೇರ್ ಮಾಡಿದ್ದಾರೆ. ಇಲ್ಲಿ ಖುಷಿ ವಿಷಯ ಏನಪ್ಪಾ ಅಂದ್ರೆ, ಈ ವಿಡಿಯೋ ಜೊತೆಗೆ ಇದೇ ವರ್ಷ 'ಕೆಡಿ' ಸಿನಿಮಾ ರಿಲೀಸ್ ಆಗುತ್ತೆ ಅಂತಾನೂ ಹೇಳಿಕೊಂಡಿದ್ದಾರೆ. 


ಇದನ್ನೂ ಓದಿ: ರಾಘವೇಂದ್ರ ರಾಜಕುಮಾರ್ ಅವರಿಂದ ಬಿಡುಗಡೆಯಾಯಿತು "ರಂಗ ಸಮುದ್ರ" ಚಿತ್ರದ ಟ್ರೇಲರ್


10 ನಿಮಿಷ ಹೃದಯ ಬಡಿತವೇ ನಿಂತಿತ್ತು..! ಪವಾಡ ರೀತಿ ಸಾವಿನ ದವಡೆಯಿಂದ ಬದುಕಿಬಂದ ನಟ 


ಸದ್ಯ ಎರಡೂ ಸಿನಿತಂಡಗಳು ಇಂತಹದ್ದೊಂದು ಚರ್ಚೆ ಮಾಡಿಬಹುದು ಅನ್ನೋ ಅನುಮಾನ ಹಲವರಲ್ಲಿದ್ದು, ಇನ್ನೊಂದು ಮೂಲ ಬೇರೆ ಕಥೆಯನ್ನೇ ಹೇಳುತ್ತಿದೆ. ಇದೇ ಸಂಕ್ರಾಂತಿ ವೇಳೆಗೆ 'ಮಾರ್ಟಿನ್' ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಚಿತ್ರತಂಡ ಬಿಗ್ ಅಪ್‌ಡೇಟ್ ಕೊಡಬಹುದು. ಅದಕ್ಕೆ ಬೇಕಿರೋ ಸಕಲ ಸಿದ್ಧತೆಗಳನ್ನೂ ಚಿತ್ರತಂಡ ಮಾಡಿಕೊಳ್ಳುತ್ತಿದೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ 'ಮಾರ್ಟಿನ್' ಮೊದಲು ರಿಲೀಸ್ ಆಗುತ್ತಾ? 'ಕೆಡಿ' ಮೊದಲು ರಿಲೀಸ್ ಆಗುತ್ತಾ? ಅನ್ನೋ ಪ್ರಶ್ನೆಯಂತೂ ಮೂಡಿರೋದು ನಿಜ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.