Shreyas Talpade health : ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಶ್ರೇಯಸ್ ತಲ್ಪಾಡೆ ಗುಣಮುಖರಾಗಿದ್ದಾರೆ. ಪ್ರಾಯೋಗಿಕವಾಗಿ, ನಾನು ಸತ್ತು ಹೋಗಿದ್ದೆ ಎಂದು ಹೇಳಿಕೊಂಡಿರುವ ನಟ ಇದು ನನ್ನ ಜೀವನದಲ್ಲಿ ಎರಡನೇ ಅವಕಾಶ ಎಂದು ಬದುಕಿ ಬಂದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಹೌದು.. ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯದ ಕುರಿತು ಮಾತನಾಡಿರುವ ಅವರು, ಹಿಂದೆಂದೂ ನಾನು ಆಸ್ಪತ್ರೆಗೆ ದಾಖಲಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಅವರ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾರೂ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಶ್ರೇಯಸ್ ಹೇಳಿದರು.
ಇದನ್ನೂ ಓದಿ: ಬಾಯ್ತುಂಬ ʻದೀದೀʼ ಎನ್ನುವ ಪ್ರತಾಪ್ ಬಗ್ಗೆ ಸಂಗೀತಾ ಈ ರೀತಿ ಮಾತಾಡೋದಾ?
ಡಿಸೆಂಬರ್ 14 ರಂದು ತಮ್ಮ ಪತ್ನಿ ದೀಪ್ತಿ ಆಸ್ಪತ್ರೆಗೆ ಕರೆದೊಯ್ದಿದ್ದನ್ನು ನೆನಪಿಸಿಕೊಂಡ ಶ್ರೇಯಸ್, “ಕೊನೆಯ ಗಳಿಗೆಯಲ್ಲಿ, ನನಗೆ ಉಸಿರುಗಟ್ಟಿದಂತಾಯಿತು, ಎಡಗೈ ನೋವು ಪ್ರಾರಂಭವಾಯಿತು. ನನಗೆ ನನ್ನ ವ್ಯಾನಿಟಿ ವ್ಯಾನ್‌ಗೆ ಹೋಗಲು, ನನ್ನ ಬಟ್ಟೆಗಳನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಆಕ್ಷನ್ ಸೀಕ್ವೆನ್ಸ್‌ಗಳನ್ನು ಶೂಟ್ ಮಾಡುತ್ತಿರುವುದರಿಂದ ಮೊದಲಿಗೆ ಸ್ನಾಯು ಎಳೆತ ಅಂತ ನಾನು ಭಾವಿಸಿದೆ. ನಾನು ಈ ರೀತಿಯ ಆಯಾಸವನ್ನು ಎಂದಿಗೂ ಅನುಭವಿಸಿರಲಿಲ್ಲ.
ಕಾರನ್ನು ಹತ್ತಿದ ತಕ್ಷಣ, ನೇರವಾಗಿ ಆಸ್ಪತ್ರೆಗೆ ಹೋಗಬೇಕೆಂದು ನನಗೆ ಅನಿಸಿತು, ಆದರೆ ನಾನು ಮೊದಲು ಮನೆಗೆ ಹೋಗಬೇಕೆಂದು ಯೋಚಿಸಿದೆ. ನನ್ನ ಹೆಂಡತಿ ದೀಪ್ತಿ ನನ್ನನ್ನು ಆ ಸ್ಥಿತಿಯಲ್ಲಿ ನೋಡಿದಳು ಮತ್ತು 10 ನಿಮಿಷಗಳಲ್ಲಿ ನಾವು ಆಸ್ಪತ್ರೆಗೆ ಹೋದೆವು. ನಾವು ಬಹುತೇಕ ಆಸ್ಪತ್ರೆಯ ಗೇಟ್ ಹತ್ರ ಬಂದಿರಬಹುದು, ಗೇಟ್ ಅಡ್ಡ ಬ್ಯಾರಿಕೇಡ್ ಹಾಕಲಾಗಿತ್ತು, ಆಗ ನಾವು ಯು-ಟರ್ನ್ ತೆಗೆದುಕೊಳ್ಳಬೇಕಾಯಿತು. ಮರುಕ್ಷಣವೇ ನಾನು ಪ್ರಜ್ಞೆ ತಪ್ಪಿದೆ, ಅದು ಕಾರ್ಡಿಯಾಕ್ ಅರೆಸ್ಟ್ ಆಗಿತ್ತು,
ಇದನ್ನೂ ಓದಿ: 'ನನ್ನ ಮದುವೆ...'- ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ನೀಡಿದ್ರು ಗುಡ್ ನ್ಯೂಸ್!
ಆ ಕೆಲವು ನಿಮಿಷಗಳ ಕಾಲ ನನ್ನ ಹೃದಯ ಬಡಿಯುವುದನ್ನು ನಿಲ್ಲಿಸಿತ್ತು. ನಾವು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ದೀಪ್ತಿ ಕಾರಿನ ಬಾಗಿಲಿನಿಂದ ಹೊರಬರಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವಳು ನನ್ನ ಮೇಲೆ ಹತ್ತಿ ಸಹಾಯಕ್ಕಾಗಿ ಕೂಗಿದಳು, ಕೆಲವರು ನಮ್ಮ ರಕ್ಷಣೆಗೆ ಬಂದರು. ತಕ್ಷಣ ವೈದ್ಯರು ಸಿಪಿಆರ್, ಎಲೆಕ್ಟ್ರಿಕಲ್ ಶಾಕ್ ನೀಡಿ, ನನಗೆ ಮರುಜೀವ ನೀಡಿದರು ಎಂದು ಅಂದಿನ ಘಟನೆಯ ನೆನಪಿಸಿಕೊಂಡರು.
ಅಲ್ಲದೆ, ಹೃದಯಾಘಾತದ ನಂತರ, ಮುಖ್ಯ ಅಪಧಮನಿಗಳು ಕೆಲಸ ನಿಲ್ಲಿಸಿದ್ದರಿಂದ ಆಂಜಿಯೋಪ್ಲ್ಯಾಸ್ಟಿ ಮೂಲಕ ಸ್ಟೆಂಟ್ ಹಾಕಬೇಕಾಯಿತು ಎಂದು ಶ್ರೇಯಸ್ ಹೇಳಿಕೊಂಡಿದ್ದಾರೆ. ಇನ್ನು ಕೆಲವು ವಾರಗಳಲ್ಲಿ ಮತ್ತೆ ತಮ್ಮ ಸಿನಿಮಾ ಕೆಲಸಗಳನ್ನು ಪುನರಾರಂಭಿಸುವುದಾಗಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.