Martain: ಮಾರ್ಟಿನ್ 240 ಡೇಸ್ ಶೂಟಿಂಗ್: ಧ್ರುವ ಚಿತ್ರದ ಬಜೆಟ್ ಗಗನಕ್ಕೇರಿದ್ದೇಕೆ?
Martain Update: ಚಂದನವನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ `ಮಾರ್ಟಿನ್` ಸಿನಿಮಾ ಶೂಟಿಂಗ್ 240 ದಿನಗಳ ಕಾಲ ನಡೆದಿದ್ದು ಹಾಗೂ ಚಿತ್ರದ ಬಜೆಟ್ ಕೂಡ ಹೆಚ್ಚಾಗಿತು. ಚಿತ್ರೀಕರಣ ಮುಗಿಯುವುದು ತಡವಾಗಿದ್ದೇಕೆ? ಬಜೆಟ್ ಕೂಡ ಹೆಚ್ಚಾಗಿದ್ದೇಕೆ? ಇಲಿದೆ ಸಂಪೂರ್ಣ ವಿವರ.
Martain Shooting Days And Budget: ಸ್ಯಾಂಡಲ್‌ವುಡ್ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಕಾಂಬಿನೇಷನ್‌ನ 2024ರ ಬಹುನಿರೀಕ್ಷಿತ 'ಮಾರ್ಟಿನ್' ಸಿನಿಮಾ 2021ರಲ್ಲಿ ಸೆಟ್ಟೇರಿದ್ದು, ನಿನ್ನೆ ಕುಂಬಳಕಾಯಿ ಒಡೆದು ಶೂಟಿಂಗ್ ಮುಗಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೆಲಸದ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಬಹುತೇಕ ಕಂಪ್ಲೀಟ್ ಆಗಿದ್ದು, ಅದ್ಧೂರಿಯಾಗಿ ತೆರೆಮೇಲೆ ಬರಲು ಸಜ್ಜಾಗುತ್ತಿದೆ.
ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, 240 ದಿನಗಳ ಕಾಲ ಶೂಟಿಂಗ್ ಮಾಡುವಂತಹದ್ದು ಏನಿತ್ತೆಂಬ ಪ್ರಶ್ನೆಗಳು ಚಿತ್ರರಂಗದಲ್ಲಿ ಎದ್ದಿದ್ದು, ಇದಕ್ಕೆ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಕೊನೆಯ ದಿನದ ಶೂಟಿಂಗ್ ಮುಗಿಸಿದ ಬಳಿಕ ಉತ್ತರ ನೀಡಿದ್ದಾರೆ. ಎಪಿ ಅರ್ಜುನ್ " ಇಲ್ಲಿವರೆಗೂ ಸುಮಾರು 240 ದಿನ ಶೂಟಿಂಗ್ ಮಾಡಿದ್ದೇವೆ. ಎಲ್ಲರೂ ಕೇಳುತ್ತಿದ್ದರು.. ಎಲ್ಲಿಗೆ ಹೋದರೂ ನನಗೆ ಮುಜುಗರ ಆಗೋದು. ಎಷ್ಟು ದಿನ ಶೂಟ್ ಮಾಡ್ತಿರಾ ರೀ.. ಅನ್ನೋರು. ಮಾರ್ಟಿನ್ ಸಿನಿಮಾವನ್ನು ಇಷ್ಟು ದಿನ ಶೂಟ್ ಮಾಡಬೇಕು ಅಂತ ನಾನು ಅಂದುಕೊಂಡಿರಲಿಲ್ಲ. ನಮ್ಮ ಪ್ರಡ್ಯೂಸರ್ ಕೂಡ ಅಂದುಕೊಂಡಿರಲಿಲ್ಲ. ನಮ್ಮ ಹೀರೊನೂ ಅಂದುಕೊಂಡಿರಲಿಲ್ಲ." ಎಂದಿದ್ದಾರೆ.
ಇದನ್ನೂ ಓದಿ: Martain: ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಮಾರ್ಟಿನ್ ಶೂಟಿಂಗ್ ಕಂಪ್ಲೀಟ್!
ಹಾಗೆಯೇ ಡೈರೆಕ್ಟರ್ ಎ.ಪಿ.ಅರ್ಜುನ್ ಬಜೆಟ್ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಾ " ಮೊದಲು ನಾವು ಅಂದ್ಕೊಂಡಿದ್ದ ಬಜೆಟ್ ಒಂದು. ಮೊದಲು ನಾವು 35 ರಿಂದ 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ಮಾಡ್ಬೇಕು ಅಂತಾನೇ ಅಂದುಕೊಂಡಿದ್ದೆವು. ಆದರೆ, ಅದು 80 ರಿಂದ 90 ದಿನಕ್ಕೆ ಆ ಬಜೆಟ್ ರೀಚ್ ಆಗಿಬಿಡ್ತು. " ಎಂದು ಹೇಳಿದ್ದಾರೆ. ಹೀಗೆ ಸಿನಿಮಾದ ಬಜೆಟ್ ಯಾಕೆ ಗಗನಕ್ಕೇರಿತು ಅನ್ನೋದನ್ನು ರಿವೀಲ್ ಮಾಡಿದ್ದಾರೆ
ನಿರ್ದೇಶಕ ಎ.ಪಿ.ಅರ್ಜುನ್ "'ಮಾರ್ಟಿನ್' ಸಿನಿಮಾಗಾಗಿ ಸುಮಾರು 18 ರಿಂದ 20 ದುಬಾರಿ ಸೆಟ್ ಹಾಕಲಾಗಿದೆ. ಈ ವೇಳೆ ಏನಾದರೂ ಒಂದು ಅಡೆತಡೆ ಆಗುತ್ತಿತ್ತು. ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ 25 ದಿನ ಅಂದ್ಕೊಂಡಿದ್ದು, 48 ದಿನಕ್ಕೆ ಹೋಗಿತ್ತು. ಕಂಪ್ಲೀಟ್ ಆಗಿ ಮುಗಿಯುವ ಹೊತ್ತಿಗೆ 52 ದಿನ ಆಗಿತ್ತು. ಇಷ್ಟು ದಿನ ಶೂಟ್ ಮಾಡಿದ್ದನ್ನು ನೋಡಿ, ಏನ್ರಿ ಒಂದು ಸಿನಿಮಾ ಮುಗಿಸಬಹುದಿತ್ತು. ನೀವು ಬರೀ ಕ್ಲೈಮ್ಯಾಕ್ಸ್ ಮಾಡಿದ್ದೀರಲ್ಲ? ಅಂತ ಅಂತಿದ್ದರು" ಎಂದು ಹೇಳಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.