Martain: ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಮಾರ್ಟಿನ್‌ ಶೂಟಿಂಗ್‌ ಕಂಪ್ಲೀಟ್!

Martain Update: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾದ ಚಿತ್ರೀಕರಣವನ್ನು ಕುಂಬಳ ಕಾಯಿ ಒಡೆಯುವುದರ ಮೂಲಕ ಸಿನಿಮಾದ ನಿರ್ದೇಶಕ ಎ.ಪಿ.ಅರ್ಜುನ್‌ ಕುಂಬಳಕಾಯಿಯನ್ನು ಒಡೆದಿದ್ದಾರೆ. ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  

Written by - Zee Kannada News Desk | Last Updated : Mar 6, 2024, 03:05 PM IST
  • ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಮಾರ್ಟಿನ್‌ ಸಿನಿಮಾದ ಚಿತ್ರೀಕರಣ ಕಂಪ್ಲೀಟ್‌ ಆಗಿದೆ.
  • ಹಲವಾರು ದಿನಗಳಿಂದ ಮಾರ್ಟಿದ ಚಿತ್ರ ಯಾವ ಹಂತಕ್ಕೆ ಬಂತು ಎಂಬುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
  • ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಅಂದುಕೊಂಡಂತೆ ನಡೆದಿದ್ದರೇ ಇಷ್ಟೋತ್ತಿಗಾಗಲೇ ತೆರೆಯ ಮೇಲೆ ರಾರಾಜಿಸಿಬೇಕಿತ್ತು.
Martain: ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಮಾರ್ಟಿನ್‌ ಶೂಟಿಂಗ್‌ ಕಂಪ್ಲೀಟ್! title=

Martain Shooting Completed: ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಮಾರ್ಟಿನ್‌ ಸಿನಿಮಾದ ಚಿತ್ರೀಕರಣ ಕಂಪ್ಲೀಟ್‌ ಆಗಿದೆ. ಸುಮಾರು ಎರಡು ವರ್ಷಗಳಿಂದ ಶೂಟಿಂಗ್‌ ಹಂತದಲ್ಲೇ ಇದ್ದ ಈ ಮಸ್ತ್ ಮಾಸ್ ಚಿತ್ರ ಸದ್ಯ ಕುಂಬಳ ಕಾಯಿ ಒಡೆಯಲಾಗಿದೆ. ನಟ ಧುವ ಸರ್ಜಾನನ್ನು ಅಭಿಮಾನಿಗಳು ಪೊಗರು ಸಿನಿಮಾದ ಬಳಿಕ ಮತ್ತೆ ಬೆಳ್ಳಿತೆರೆಯ ಮೇಲೇ ನೋಡಿರದ ಕಾರಣ, ಯಾವಾಗ ಈ ಚಿತ್ರದ ಶೂಟಿಂಗ್‌ ಮುಗಿಯುತ್ತೇ ಅಂತ ಕಾಯುತ್ತಿರುವರಿಗೆ ಹೊಸ ಅಪ್‌ಡೇಟ್‌ನಿಂದ ಖುಷಿಯಾಗಿದೆ.

ಮಾರ್ಟಿನ್‌ ಸಿನಿಮಾದ ಚಿತ್ರೀಕರಣ ಕೆಲವು ತಿಂಗಳಿಂದ ನಡೆಯುತ್ತಲೇ ಇದ್ದು, ಸದು ಈ ಚಿತ್ರ ಕೊನೆಯಯ ಹಂತದ ಶೂಟಿಂಗ್‌ ಅನ್ನು ಬದಾಮಿಯಲ್ಲಿ ಮಾಡುವುದರ ಮೂಲಕ ಸಿನಿಮಾದ ನಿರ್ದೇಶಕ ಎ.ಪಿ.ಅರ್ಜುನ್‌ ಕುಂಬಳಕಾಯಿಯನ್ನು ಒಡೆದಿದ್ದಾರೆ. ಹಲವಾರು ದಿನಗಳಿಂದ ಮಾರ್ಟಿದ ಚಿತ್ರ ಯಾವ ಹಂತಕ್ಕೆ ಬಂತು ಎಂಬುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: Bangalore International Film Festival: ಡೈರೆಕ್ಟರ್‌ M.S.ಸತ್ಯುಗೆ ಜೀವಮಾನ ಸಾಧನೆ ಪ್ರಶಸ್ತಿ.!

ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಅಂದುಕೊಂಡಂತೆ ನಡೆದಿದ್ದರೇ ಇಷ್ಟೋತ್ತಿಗಾಗಲೇ ತೆರೆಯ ಮೇಲೆ ರಾರಾಜಿಸಿಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಮುಂದೂಡಿ ಇದೀಗ ಈ ಸಿನಿಮಾದ ಶೂಟಿಂಗ್‌ ಅನ್ನು ಪೂರ್ಣಗೊಳಿಸಿದ್ದಾರೆ. ಆದರೆ ಧ್ರುವ ಅಭಿಮಾನಿಗಳು ಮಾತ್ರ ಮತ್ತೆ ಅಪ್‌ಡೇಟ್‌ ಕೇಳುತ್ತಿದ್ದಾರೆ. ಸದ್ಯಕ್ಕೆ ಫ್ಯಾನ್ಸ್‌ ಯಾವಾಗ ಈ ಚಿತ್ರವನ್ನು ರಿಲೀಸ್‌ ಮಾಡುತ್ತಾರೆಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಇನ್ನೊಂದೆಡೆ ಮಾರ್ಟಿನ್‌ ಸಿನಿಮಾದ ಚಿತ್ರೀಕರಣದ ಜೊತೆಗೆ ಕೆಡಿ ಚಿತ್ರದ  ಶೂಟಿಂಗ್‌ ಕೂಡ ಮುಗಿದಿದೆ. ಡೈರೆಕ್ಟರ್‌ ಪ್ರೇಮ್‌ ಇದೇ ವರ್ಷ ಕೆಡಿನ ಚಿತ್ರ ರಿಲೀಸ್‌ ಮಾಡುವುದಾಗಿ ಘೋಷಣೆ ಮಾಡಿದ್ದು, ಅದಕ್ಕಾಗಿ ತಯಾರಿಗಳನ್ನು ಸಹ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಮತ್ತೆ ಅಭಿಮಾನಿಗಳಲ್ಲಿ ಮೂಡಿರುವ ಅನುಮಾನವೇನೆಂದರೆ ಮೊದಲು ಯಾವ ಸಿನಿಮಾ ತೆರೆಗೆ ಬರಲಿದೆ ಅಂತ. ಆದರೇ ಮಾರ್ಟಿನ್ ರಿಲೀಸ್ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News