Megastar Chiranjeevi: ಭಾರತೀಯ ಚಿತ್ರರಂಗದಲ್ಲಿ ಅನೇಕ ಹಿರಿಯ ನಟಿರಿದ್ದರೂ ಸಹ, ಅಮಿತಾಬ್‌ ಬಚ್ಚನ್‌ ನಟನೆಯ ತೂಕ ಬೇರೆಯೇ. ಅವರ ಪ್ರತಿಷ್ಟೆ, ಘನತೆ, ಅರ್ಥಬದ್ಧ ನಟನೆ ಇವೆಲ್ಲದರ ಪ್ರಭಾವವೇ ಇಂದಿಗೂ ಬಚ್ಚನ್‌ ಜನಮೆಚ್ಚಿನ ನಟನಾಗಿ ಉಳಿದಿರಲು ಕಾರಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 10 ವರ್ಷಗಳ ಕಾಲ ಸಿನಿರಂಗವನ್ನೇ ಆಳಿದ ಸ್ಟಾರ್‌ ನಟಿ.. ಈಗ ಈಕೆಯನ್ನು ಗುರುತಿಸುವುದೇ ಕಷ್ಟ! ಯಾರಿರಬಹುದು ಹೇಳಿ?   


ಆದರೆ ಇವರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟನೊಬ್ಬ ದಕ್ಷಿಣ ಭಾರತದಲ್ಲಿದ್ದಾರೆ. ಆತ ಬೇರಾರು ಅಲ್ಲ. ಕೊನಿಡೆಲಾ ಚಿರಂಜೀವಿ.


ನಟ, ನಿರ್ಮಾಪಕ ಮತ್ತು ರಾಜಕಾರಣಿಯಾಗಿರುವ ಮೆಗಾಸ್ಟಾರ್‌ ಚಿರಂಜೀವಿ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗವಿದೆ. ಪ್ರಧಾನವಾಗಿ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಇವರು, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.


ನಾಲ್ಕು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಸುಮಾರು 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಚಿರಂಜೀವಿ, ತೆಲುಗು,  ಹಿಂದಿ, ತಮಿಳು ಮತ್ತು ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


ಇನ್ನು ಚಿರಂಜೀವಿ ಆಂಧ್ರಪ್ರದೇಶ ರಾಜ್ಯದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ, ರಘುಪತಿ ವೆಂಕಯ್ಯ ಪ್ರಶಸ್ತಿ, ಮೂರು ನಂದಿ ಪ್ರಶಸ್ತಿಗಳು ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಒಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದಲ್ಲದೆ, 2024 ರಲ್ಲಿ, ಭಾರತ ಸರ್ಕಾರವು ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ. ಇನ್ನು 2006ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಕೂಡ ಲಭಿಸಿದೆ.


ವೀಕ್ ನಿಯತಕಾಲಿಕೆ ಸೆಪ್ಟೆಂಬರ್ 13, 1992 ರ ಸಂಚಿಕೆ ಪ್ರಕಟಿಸಿದ ವರದಿಯ ಪ್ರಕಾರ, ಅಂದಿನ ಕಾಲದಲ್ಲಿ ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್‌ ಸಂಭಾವನೆಗಿಂತ ಚಿರಂಜೀವಿ ಅವರ ಸಂಭಾವನೆ ಹೆಚ್ಚಿತ್ತು. ಅಂದರೆ, ಅಮಿತಾಭ್ ತಮ್ಮ ಚಿತ್ರಗಳಿಗೆ 1 ಕೋಟಿ ಪೇಮೆಂಟ್‌ ಪಡೆಯುತ್ತಿದ್ದರೆ, ಚಿರಂಜೀವಿ 1.25 ಕೋಟಿ ರೂಪಾಯಿ ಚಾರ್ಜ್‌ ಮಾಡುತ್ತಿದ್ದರಂತೆ.


ಇದನ್ನೂ ಓದಿ: ಕೊಹ್ಲಿ ಜೊತೆಗಿನ ಮದುವೆಗೂ ಮುನ್ನ ನಾನು ತಾಯಿಯಾಗಿದ್ದೆ...‌ ಇದಕ್ಕೆಲ್ಲಾ ಕಾರಣವಾಗಿದ್ದು ಆ ನಟ! ಅನುಷ್ಕಾ ಶರ್ಮಾ ಸೆನ್ಸೇಷನಲ್‌ ಹೇಳಿಕೆ ವೈರಲ್


ಇನ್ನು ಮಾಧ್ಯಮ ವರದಿಗಳ ಪ್ರಕಾರ, 90 ರ ದಶಕದಲ್ಲಿ, ಸತತ 14 ಹಿಟ್ ಸಿನಿಮಾಗಳನ್ನು ಚಿರಂಜೀವಿ ಮಾಡಿದ್ದು, ಸಂಚಲನ ಸೃಷ್ಟಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.