Chiranjeevi Breakfast : ಮೆಗಾಸ್ಟಾರ್ ಚಿರಂಜೀವಿ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಬಂಧ ಎಲ್ಲರಿಗೂ ತಿಳಿದಿದೆ. ದೇವಿ ಶ್ರೀ ಪ್ರಸಾದ್ ಅವರ ತಂದೆ ಸತ್ಯಮೂರ್ತಿ ಜೊತೆ ಚಿರಂಜೀವಿ ಅವರ ಒಡನಾಟ ಅನ್ಯೋನ್ಯವಾಗಿತ್ತು. ಚಿಕ್ಕಂದಿನಲ್ಲಿ ದೇವಿ ಶ್ರೀ ಪ್ರಸಾದ್ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಚಿರಂಜೀವಿ. ಆ ವೇಳೆ ಚಿರಂಜೀವಿ ಕೂಡ ಡಿಎಸ್ಪಿಗೆ ವಾಚ್ ಉಡುಗೊರೆಯಾಗಿ ನೀಡಿದ್ದರು. ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನಿರ್ದೇಶಕರಾಗಿ ಚಿರಂಜೀವಿ ಅವರಿಗೆ ಮರೆಯಲಾಗದ ಹಿಟ್‌ಗಳನ್ನು ನೀಡಿದರು. ಇವರಿಬ್ಬರ ಕಾಂಬೊ ಮೆಗಾಫ್ಯಾನ್ಸ್‌ಗೆ ಹಬ್ಬದೂಟದಂತೆ.  


COMMERCIAL BREAK
SCROLL TO CONTINUE READING

ದೇವಿ ಶ್ರೀ ಪ್ರಸಾದ್ ಜೊತೆ ಚಿರಂಜೀವಿ ಟಿಫಿನ್ ಮಾಡುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಸ್ ಜೊತೆ ಉಪಹಾರ.. ಅದ್ಭುತ ಸಮಯ.. ಇಷ್ಟು ಒಳ್ಳೆಯ ಉಪಹಾರಕ್ಕಾಗಿ ಆತ್ಮೀಯ ಚಿರಂಜೀವಿ ಸರ್ ಅವರಿಗೆ ಧನ್ಯವಾದಗಳು.. ಎಂದು ದೇವಿ ಶ್ರೀ ಪ್ರಸಾದ್ ಹೇಳಿದ್ದಾರೆ. ಅಲ್ಲದೇ ಫೋಟೋ ಕೂಡ ಶೇರ್‌ ಮಾಡಿದ್ದು, ಚಿತ್ರ ತೆಗೆದ ಸುರೇಖಾ ಅವರಿಗೆ ಧನ್ಯವಾದಗಳು ಎಂದು ಡಿಎಸ್ಪಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ : ಒಂದು ಹಾಡಿಗೆ ಇಷ್ಟು ಕೋಟಿ ಸಂಭಾವನೆ ಕೇಳಿದ ಶ್ರಿಯಾ ಶರಣ್


 


ಸಪ್ತಮಿ ಗೌಡಗೂ ರಾಜ್‌ ಕುಟುಂಬಕ್ಕೂ ನಂಟೇನು? ಈ ದಿನ ಎಂದೂ ಮರೆಯಲಾರೆ ಅಂದಿದ್ಯಾಕೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.