Saptami Gowda: ಸಪ್ತಮಿ ಗೌಡಗೂ ರಾಜ್‌ ಕುಟುಂಬಕ್ಕೂ ನಂಟೇನು? ಈ ದಿನ ಎಂದೂ ಮರೆಯಲಾರೆ ಅಂದಿದ್ಯಾಕೆ?

Saptami Gowda with Raghavendra Rajkumar: ಕಾಂತಾರ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ಡಮ್‌ ಪಡೆದ ನಟಿ ಸಪ್ತಮಿ ಗೌಡ. ನಟಿ ಸಪ್ತಮಿ ಗೌಡ ಲಕ್ ಬದಲಿಸಿತು ಕಾಂತಾರ ಸಿನಿಮಾ. ಇವರ ಸಿಂಪಲ್‌ ಲುಕ್‌ ಮತ್ತು ನಟನೆ ಎಲ್ಲರ ಮನಗೆದ್ದಿದೆ. 
 

Saptami Gowda with Raghavendra Rajkumar: ಡಾ. ರಾಜ್ ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್‌ ಜೊತೆ ನಟಿ ಸಪ್ತಮಿ ಗೌಡ ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ.   ಈ ಮೂಗುತಿ ಸುಂದರಿಯ ಫೋಟೋವೊಂದು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಆ ಫೋಟೋ ಶೇರ್‌ ಮಾಡುವ ಮೂಲಕ ಈ ದಿನ ಎಂದೂ ಮರೆಯಲಾರೆ ಎಂದಿದ್ದಾರೆ ನಟಿ ಸಪ್ತಮಿ. ಈ ಫೋಟೋ ನೋಡಿದ ಹಲವರಲ್ಲಿ ನಟಿ ಸಪ್ತಮಿ ಗೌಡಗೂ ರಾಜ್‌ ಕುಟುಂಬಕ್ಕೂ ಏನಾದರೂ ನಂಟಿದೆಯೇ ಎಂಬ ಪ್ರಶ್ನೆ ಮೂಡಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಸಿನಿಮಾ ಮೂಲಕ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. 

2 /5

ಯುವ ಸಿನಿಮಾದಲ್ಲಿ ನಟ ಯುವ ರಾಜ್‌ಕುಮಾರ್‌ಗೆ ನಾಯಕಿಯಾಗಿ ನಟಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ. ಕನ್ನಡದ ಕಣ್ಮಣಿ ಅಣ್ಣಾವ್ರ ಮೊಮ್ಮಗನ ಜೊತೆ ಸಪ್ತಮಿ ನಟಿಸುತ್ತಿರುವುದು ಅವರಿಗೆ ವಿಶೇಷ ಖುಷಿ ನೀಡಿದೆ.

3 /5

ಇದೀಗ ಸಪ್ತಮಿ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆಗೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

4 /5

ನಟ ರಾಘವೇಂದ್ರ ರಾಜ್ ಕುಮಾರ್ ಜೊತೆ ಮಾತುಕತೆ ನಡೆಸಿದ ನಟಿ ಸಪ್ತಮಿ ಗೌಡ ತುಂಬಾ ಸಂತೋಷಗೊಂಡಿದ್ದಾರೆ. ಹೀಗಾಗಿ ಅವರೊಂದಿಗೆ ಕಳೆದ ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. 

5 /5

ಯುವ ಸಿನಿಮಾದಿಂದಾಗಿ ದೊಡ್ಮನೆ ಕುಟುಂಬ ಮತ್ತು ಸಪ್ತಮಿ ನಡುವೆ ಮಧುರ ಬಾಂಧವ್ಯ ಬೆಳೆದಿದೆ. ಇದೇ ಸಪ್ತಮಿ ಮತ್ತು ಅಣ್ಣಾವ್ರ ಮನೆಯ ನಡುವೆ ನಂಟನ್ನು ಬೆಸೆದಿದೆ.