Megastar Chiranjeevi Vishwambhara : ಮೆಗಾಸ್ಟಾರ್‌ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸಿನಿಮಾ ʼವಿಶ್ವಂಭರʼ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವು ವಿಷುಯಲ್ ವಂಡರ್, ಸೋಶಿಯೋ ಫ್ಯಾಂಟಸಿ ಥ್ರಿಲ್ಲರ್, ಸಾಹಸಮಯ ಚಿತ್ರವಾಗಿ ವಶಿಷ್ಟ ನಿರ್ದೇಶನದಲ್ಲಿ ತಯಾರಾಗುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದೆ.


COMMERCIAL BREAK
SCROLL TO CONTINUE READING

ಈ ಸಿನಿಮಾವನ್ನು ಯುವಿ ಕ್ರಿಯೇಷನ್ಸ್ ಸುಮಾರು ರು.200 ​​ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿದೆ. ವಿಕ್ರಮ್, ವಂಶಿ ಮತ್ತು ಪ್ರಮೋದ್ ಈ ಚಿತ್ರದ ನಿರ್ಮಾಪಕರು. ಜಗದೇಕವೀರುಡು ಅತಿಲೋಕಸುಂದರಿ, ಅಂಜಿ ಚಿತ್ರಗಳ ನಂತರ ಚಿರಂಜೀವಿಯಿಂದ ಬರುತ್ತಿರುವ ಸೋಶಿಯಲ್ ಫ್ಯಾಂಟಸಿ ಚಿತ್ರ ಇದಾಗಿದೆ ಎಂಬುದು ಗಮನಾರ್ಹ.


ಇದನ್ನೂ ಓದಿ:ಅರ್ಜುನ್ ರೆಡ್ಡಿ ಚಿತ್ರ ನಟಿ ಶಾಲಿನಿ ಪಾಂಡೆ ಖಾಸಗಿ ವಿಡಿಯೋ ವೈರಲ್‌..! ಬಾತ್‌ರೂಮ್‌ ವಿಡಿಯೋ ಲೀಕ್...


ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ನಲ್ಲಿ ಮೆಗಾಸ್ಟಾರ್ ಬಿಳಿ ಕುದುರೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಟೀಸರ್ ನೋಡುವಾಗ ಬೇರೊಂದು ಲೋಕದಲ್ಲಿದ್ದ ಅನುಭವವಾಗುತ್ತಿದೆ. ಒಟ್ಟಿನಲ್ಲಿ ಟೀಸರ್ ವಿಶ್ವಂಭರ ಸಿನಿಮಾದ ನಿರೀಕ್ಷೆಯನ್ನು ತುಂಬಾನೇ ಹೆಚ್ಚಿಸಿದೆ. ಇದರೊಂದಿಗೆ ಮೆಗಾ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. 


ಚೆಂದುಳ್ಳ ಚೆಲುವಿ ನಿನ್ನ ಅಂದ ಅಳದ ಮ್ಯಾಗಿನ ಬ್ರಹ್ಮ ಕಳಿಸ್ಯಾನ ಸುರದ..! ಫೊಟೋಸ್‌ ನೋಡಿ..


ಈ ಸಿನಿಮಾದಲ್ಲಿ ಸಿಸ್ಟರ್‌ ಸೆಂಟಿಮೆಂಟ್ ಪ್ರಧಾನವಾಗಿರಲಿದೆಯಂತೆ. ರಮ್ಯಾ ಕುರಲೂಟಿ ಚಿರಂಜೀವಿಯ ತಂಗಿಯಾಗಿ ನಟಿಸುತ್ತಿದ್ದಾರೆ. ‘ಮಾರುತಿನಗರ ಸುಬ್ರಹ್ಮಣ್ಯಂ’ ಸಿನಿಮಾದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ರಮ್ಯಾ ತಮ್ಮ ಸೌಂದರ್ಯ ಮತ್ತು ನಟನೆಯಿಂದ ತೆಲುಗು ಪ್ರೇಕ್ಷಕರ ಮನ ಸೂರೆಗೊಂಡಿದ್ದರು.. ಎಂಎಂ ಕೀರವಾಣಿ ಸಂಗೀತ ನಿರ್ದೇಶನ ವಿಶ್ವಂಭರ ಚಿತ್ರಕ್ಕಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.