ಕನ್ನಡದ ನಟ ಚಿರು ಸರ್ಜಾ ಅಗಲಿಕೆಯ ಬಳಿಕ ಮೇಘನಾ ಸರ್ಜಾ ಬಾಳಿಗೆ ಬೆಳಕಾಗಿದ್ದು ಅವರ ಪುತ್ರ ರಾಯನ್‌. ಕ್ಯೂಟ್‌ ಕ್ಯೂಟ್‌ ಆಗಿರುವ ರಾಯನ್‌ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಮೇಘನಾ ಆಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಶ್ವರ್ಯಾ ರೈ ಪಾಸ್‌ಪೋರ್ಟ್‌ನಲ್ಲಿರೋ ಫೋಟೋ ಸ್ಪೆಶಾಲಿಟಿ ಏನ್‌ ಗೊತ್ತಾ?


ನಟಿ ಮೇಘನಾ ರಾಜ್ ಸಿನಿಮಾ ಕೆಲಸಗಳ ಜೊತೆ ಮಗನ ಆರೈಕೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಇದೀಗ ಮೇಘನಾ ತಮ್ಮ ಪುತ್ರ ರಾಯನ್‌ ಅವರ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಚಿರಂಜೀವಿ ಸರ್ಜಾ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.


 


 

 

 

 



 

 

 

 

 

 

 

 

 

 

 

A post shared by Meghana Raj Sarja (@megsraj)


 


ರಾಯನ್​ ರಾಜ್​ ಸರ್ಜಾಗೆ ಮೇಘನಾ ರಾಜ್ ಅವರು ತಾಯಿಯಾಗಿ ಅನೇಕ ವಿಚಾರಗಳನ್ನು ಕಲಿಸುತ್ತಿದ್ದಾರೆ. ಮಗುವಿಗೆ ಪಾಠ, ಪ್ರವಚನ, ಒಳ್ಳೆಯ ನಡೆ-ನುಡಿಗಳನ್ನು ಹೇಳಿಕೊಡುವುದು ಅಮ್ಮನ ಕರ್ತವ್ಯ. ಇದನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾರೆ ಮೇಘನಾ ಸರ್ಜಾ. ರಾಯನ್‌ಗೆ ಅಮ್ಮ ಎಂದು ಕರೆಯುವುದನ್ನು ಅವರು ಹೇಳಿಕೊಟ್ಟಿದ್ದಾರೆ. ಆದರೆ ಒಂದೆರಡು ಬಾರಿ ಅಮ್ಮ ಎಂದು ಕರೆದ ರಾಯನ್‌, ಬಳಿಕ ಮತ್ತೆ ಅಪ್ಪ ಎಂದಿದ್ದಾನೆ​. ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.  


ಇದನ್ನೂ ಓದಿ: Anushka Sharma Pregnant: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ವಿರುಷ್ಕಾ!?


ಚಿರಂಜೀವಿ ಸರ್ಜಾ ನಟಿಸಿರುವ ರಾಜಮಾರ್ತಾಂಡ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಟೀಸರ್​ ಅನ್ನು ರಾಯನ್​ ರಾಜ್​ ಸರ್ಜಾ ಕೈಯಿಂದ ರಿಲೀಸ್​ ಮಾಡಿಸಿದ್ದಾರೆ. ರಾಮ್​ ನಾರಾಯಣ್​ ನಿರ್ದೇಶನದ ಈ ಚಿತ್ರದ ಒಂದು ದೃಶ್ಯದಲ್ಲಿ ರಾಯನ್​ ರಾಜ್​ ಸರ್ಜಾ ಕಾಣಿಸಿಕೊಳ್ಳಲಿರುವುದು ಮತ್ತೊಂದು ವಿಶೇಷ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.