ಬೆಂಗಳೂರು : ಭರತ್ ಜಿ ನಿರ್ದೇಶಿಸಿರುವ "ಸ್ಪೂಕಿ ಕಾಲೇಜ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರ ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ.   ಧಾರವಾಡದಲ್ಲಿರುವ ನೂರು ವರ್ಷಕ್ಕೂ  ಹೆಚ್ಚಿನ ಇತಿಹಾಸವಿರುವ ಕಾಲೇಜಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಇನ್ನು ಚಿತ್ರದ ಕ್ಲೈಮ್ಯಾಕ್ಸ್ ಅನ್ನು ದಾಂಡೇಲಿ ಅಭಯಾರಣ್ಯದಲ್ಲಿ ಅದ್ದೂರಿಯಾಗಿ  ಚಿತ್ರೀಕರಿಸಲಾಗಿದೆ. 


COMMERCIAL BREAK
SCROLL TO CONTINUE READING

"ಸ್ಪೂಕಿ ಕಾಲೇಜ್" ಚಿತ್ರದಲ್ಲಿ  ಅಣ್ಣಾವ್ರ ಅಭಿನಯದ "ವೀರಕೇಸರಿ" ಚಿತ್ರದ "ಮೆಲ್ಲುಸಿರೆ ಸವಿಗಾನ" ಹಾಡನ್ನು ಬಳಸಿಕೊಳ್ಳಲಾಗಿದೆ.‌ ಈ ಹಾಡು ಇದೇ ನವೆಂಬರ್ 14ರಂದು ಬಿಡುಗಡೆಯಾಗಲಿದೆ. 


ಇದನ್ನೂ ಓದಿ : Shriya Saran Video: ನಟಿ ಶ್ರಿಯಾ ಶರಣ್‌ ಬಾತ್​ರೂಮ್ ವಿಡಿಯೋ ವೈರಲ್‌! ಬ್ಯೂಟಿಗೆ ಬೋಲ್ಡ್‌ ಆದ ಫ್ಯಾನ್ಸ್‌


ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನವಿದ್ದು, 250 ಕ್ಕೂ ಅಧಿಕ ತಂತ್ರಜ್ಞರನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ಅದ್ಭುತ ಸೆಟ್ ನಲ್ಲಿ ಈ ಹಾಡನ್ನು  ಚಿತ್ರೀಕರಿಸಲಾಗಿದೆ. 


"ರಂಗಿತರಂಗ" , "ಅವನೇ ಶ್ರೀಮನ್ನಾರಾಯಣ" ಚಿತ್ರಗಳ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ  ನಿರ್ದೇಶಕ
ಭರತ್ ಅವರು ಕಥೆ, ಚಿತ್ರಕಥೆ ಹಾಗು ಸಂಭಾಷಣೆ ಹೆಣೆದಿದ್ದಾರೆ.  


ಇದನ್ನೂ ಓದಿ : ಸುನೀಲ್ ಕುಮಾರ್ ವಿ ಎ ನಿರ್ದೇಶನದ ಚೊಚ್ಚಲ ಸಿನಿಮಾ 'ಗಜರಾಮ' ಮೊದಲ ಹಂತದ ಚಿತ್ರೀಕರಣ ಮುಕ್ತಾಯ


ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. 


 "ಪ್ರೀಮಿಯರ್ ಪದ್ಮಿನಿ" ಖ್ಯಾತಿಯ ವಿವೇಕ್ ಸಿಂಹ ಚಿತ್ರದ ನಾಯಕನಾಗಿದ್ದು, "ದಿಯಾ" ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ "ಕಾಮಿಡಿ ಕಿಲಾಡಿಗಳು" ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರೀಷ್ಮಾ ನಾಣಯ್ಯ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.